– ಆಪರೇಷನ್ ಕಮಲದಲ್ಲಿ ಸಕ್ಸಸ್
ಮಂಡ್ಯ: ಉಪಚುನಾವಣೆಯಲ್ಲಿ ಎದುರಾಳಿ ಬಣಕ್ಕೆ ಟಕ್ಕರ್ ಫೈಟ್ ನೀಡಲು ನಾರಾಯಣಗೌಡ ಮಾಸ್ಟರ್ ಪ್ಲಾನ್ ಮಾಡಿದ್ದು, ಎದುರಾಳಿ ಪಕ್ಷದ ಮುಖಂಡರಿಗೆ ಆಪರೇಷನ್ ಕಮಲ ಮಾಡಿ ತನ್ನತ್ತ ಸೆಳೆಯುವಲ್ಲಿ ಯಾಶಸ್ವಿಯಾಗಿದ್ದಾರೆ.
ಜೆಡಿಎಸ್ ಕೋಟೆ ಛಿದ್ರ ಮಾಡಲು ನಾರಾಯಣಗೌಡ ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದು, ಕ್ಷೇತ್ರದಲ್ಲಿ ಬಿಜೆಪಿ ಭದ್ರ ಪಡಿಸಿಸಲು ಎದುರಾಳಿ ಮುಖಂಡರಿಗೆ ಗಾಳ ಹಾಕಿದ್ದಾರೆ. ಈ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಸ್ಥಳೀಯ ಮುಖಂಡರನ್ನು ಬಿಜೆಪಿ ಪಕ್ಷದ ಕಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
Advertisement
ಅದರಂತೆ ಜೆಡಿಎಸ್‍ನ ಜಿಪಂ ಮಾಜಿ ಉಪಾಧ್ಯಕ್ಷ ಕಿಕ್ಕೇರಿ ಪ್ರಭಾಕರ್, ಮಾಜಿ ಉಪಾಧ್ಯಕ್ಷ ಸೀನಣ್ಣ, ರವಿ ಮತ್ತು ರಾಮಕೃಷ್ಣ ಬಿಜೆಪಿ ತೆಕ್ಕೆಗೆ ಬಿದ್ದಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್ಸಿನಿಂದ ಮಾಜಿ ಜಿಪಂ ಉಪಾಧ್ಯಕ್ಷ ಅಂಬರೀಶ್, ಗುಡ್ಡೆಹೊಸಳ್ಳಿ ಜವರೇಗೌಡ, ಸಿದ್ದಲಿಂಗೇಗೌಡ ಮತ್ತು ಮಂಜಣ್ಣ ಸೇರಿದಂತೆ ಸ್ಥಳೀಯ 10 ಕ್ಕೂ ಹೆಚ್ಚು ಮುಖಂಡರನ್ನು ಬಿಜೆಪಿ ಸೇರಿಸಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ನಾರಾಯಣಗೌಡ ಟಾಂಗ್ ನೀಡಿದ್ದಾರೆ.
Advertisement
ಈ ಎಲ್ಲಾ ಸ್ಥಳೀಯ ಮುಖಂಡರು ಬೆಂಗಳೂರಿನಲ್ಲಿ ಸಿಎಂ ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇವರಿಗೆ ಕ್ಷೇತ್ರದಲ್ಲಿ ನಿಗಮ ಮಂಡಳಿಯಲ್ಲಿ ಸ್ಥಾನ ನೀಡೋ ಭರಸವೆ ನೀಡಲಾಗಿದ್ದು, ಹೀಗಾಗಿ ಸ್ವಪಕ್ಷಗಳಿಗೆ ಕೈ ಕೊಟ್ಟು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎನ್ನಲಾಗಿದೆ.