– ನಾನು ಜೆಡಿಎಸ್‍ಗೆ ವರ್ಜಿನಲ್ ಪೀಸ್
ಮಂಡ್ಯ: ಮಹಾರಾಷ್ಟ್ರ ಸರ್ಕಾರಕ್ಕೆ ತಾಕತ್ತಿದ್ದರೆ ಶಾಸಕರನ್ನು ಹೋಟೆಲ್‍ನಿಂದ ಆಚೆಗೆ ಕಳುಹಿಸಲಿ ಎಂದು ಮಂಡ್ಯದ ಮಳವಳ್ಳಿಯಲ್ಲಿ ಜೆಡಿಎಸ್ ಶಾಸಕ ಅನ್ನದಾನಿ ಸವಾಲು ಹಾಕಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬೈನಲ್ಲಿರುವ ಶಾಸಕರು ವಾಪಸ್ ಬರಲು, ನಮ್ಮೊಂದಿಗೆ ಮಾತನಾಡಲು ರೆಡಿ ಇದ್ದಾರೆ. ಆದರೆ ಅಲ್ಲಿನ ಬಿಜೆಪಿ ಸರ್ಕಾರ ಅವರನ್ನು ಬಲವಂತವಾಗಿ ಬಂಧಿಸಿದೆ ಎಂದು ಆರೋಪಿಸಿದರು.
Advertisement
Advertisement
ನಾಳೆ ಸಂಜೆಯೊಳಗೆ ಸರ್ಕಾರ ಉಳಿಯುತ್ತೆ. ಯಾವುದೇ ಸಮಸ್ಯೆ ಆಗಲ್ಲ. ಮಹಾರಾಷ್ಟ್ರ ಸರ್ಕಾರಕ್ಕೆ ತಾಕತ್ತಿದ್ದರೆ ಶಾಸಕರನ್ನು ಹೋಟೆಲ್ ನಿಂದ ಆಚೆಗೆ ಕಳುಹಿಸಲಿ. ಅತೃಪ್ತ ಶಾಸಕರು ವಿಶ್ವಾಸ ಮತಯಾಚನೆಗೆ ಬರಲಿ. ಬಿಜೆಪಿಗೆ ಮತ ಹಾಕಿದರೆ ಹಾಕಿಸಿಕೊಳ್ಳಲಿ. ಅವರಿಗೆ ಮಂತ್ರಿ ಹಾಗೂ ಹಣದ ಆಮಿಷವೊಡ್ಡಲಾಗಿದೆ ಎಂದು ಆರೋಪ ಮಾಡಿದರು.
Advertisement
Advertisement
ವಿಧಾನಸಭೆಗೆ ಸ್ಪೀಕರ್ ಅವರೇ ಸುಪ್ರೀಂ. ರಾಜ್ಯಪಾಲರು ಏನು ಮಾಡಲು ಸಾಧ್ಯ ಇಲ್ಲ. ಇದನ್ನು ಸುಪ್ರೀಂಕೋರ್ಟ್ ಸಹ ಹೇಳಿದೆ. ನಾನು ಜೆಡಿಎಸ್‍ಗೆ ವರ್ಜಿನಲ್ ಪೀಸ್. ಮುಖ್ಯಮಂತ್ರಿ ಅವರ ಅಪ್ಪಟ ಅಭಿಮಾನಿಯಾಗಿದ್ದು ಹಣ, ಆಮಿಷಕ್ಕೆ ಮಾರಾಟ ಆಗುವ ವ್ಯಕ್ತಿ ಅಲ್ಲ. ಎಲ್ಲರೂ ಒಗ್ಗಟ್ಟಾಗಿ ರೆಸಾರ್ಟ್ ನಲ್ಲಿ ಇದ್ದೇವೆ. ಕಾರ್ಯಕ್ರಮ ನಿಮಿತ್ತ ಕ್ಷೇತ್ರಕ್ಕೆ ಬಂದಿದ್ದೇನೆ ಎಂದು ತಿಳಿಸಿದರು.