ಮಂಡ್ಯ: ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟ ಸಂಘದ (ಮನ್ಮುಲ್) ಚುನಾವಣೆಯಲ್ಲಿ ಜೆಡಿಎಸ್‍ಗೆ ಲಾಟರಿ ಮೂಲಕ ಅಧಿಕಾರ ಸಿಕ್ಕಿದ್ದು, ಬಿಜೆಪಿಗೆ ಭಾರಿ ಮುಖಭಂಗವಾಗಿದೆ.
ಜಿಲ್ಲೆಯಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಮನ್ಮುಲ್ ಅಧ್ಯಕ್ಷ ಸ್ಥಾನದ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಲಾಟರಿ ಮೂಲಕ ಜೆಡಿಎಸ್‍ನ ರಾಮಚಂದ್ರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಈ ಬಾರಿ ಮನ್ಮುಲ್ ಗದ್ದುಗೆ ಹಿಡಿಯಬೇಕು ಎಂದುಕೊಂಡಿದ್ದ ಬಿಜೆಪಿ ಕನಸು ನುಚ್ಚುನೂರು ಆಗಿದೆ.
Advertisement
Advertisement
ಈ ಚುನಾವಣೆಯಲ್ಲಿ ಚಲಾವಣೆಯಾಗಿದ್ದ 16 ಮತಗಳಗಳಲ್ಲಿ 8 ಮತ ಜೆಡಿಎಸ್‍ಗೆ ಉಳಿದ 8 ಬಿಜೆಪಿ ಅಭ್ಯರ್ಥಿ ಎಸ್‍ಪಿ ಸ್ವಾಮಿಗೆ ಬಿದ್ದಿತ್ತು. ಹೀಗಾಗಿ ಎರಡು ಪಕ್ಷಗಳ ಒಪ್ಪಿಗೆ ಮೇರೆಗೆ ಅಭ್ಯರ್ಥಿಗಳ ಹೆಸರಿನ ಮೇಲೆ ಲಾಟರಿ ಹಾಕಲಾಗಿದ್ದು, ಇದರಲ್ಲಿ ಜೆಡಿಎಸ್‍ನ ಅಭ್ಯರ್ಥಿಯಾಗಿದ್ದ ರಾಮಚಂದ್ರು ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.
Advertisement
ಜೆಡಿಎಸ್‍ನಿಂದ 8 ನಿರ್ದೇಶಕರು, ಕಾಂಗ್ರೆಸ್‍ನಿಂದ 3 ನಿರ್ದೇಶಕರು ಮತ್ತು ಬಿಜೆಪಿಯಿಂದ 1 ನಿರ್ದೇಶಕರ ಜೊತೆಗೆ ಇಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಉಪ ನಿಬಂಧಕರು, ಕೆಎಂಎಫ್ ನಿರ್ದೇಶಕರು ಹಾಗೂ ಸರ್ಕಾರದಿಂದ ಆಯ್ಕೆಯಾದ ನಾಮ ನಿರ್ದೇಶಕರು ಸಹ ಮತ ಹಾಕಿದ್ದಾರೆ.
Advertisement
ಮನ್ಮಲ್ ಅಧ್ಯಕ್ಷ ಗಾದಿ ಹಿಡಿಯಲು 9 ಸದಸ್ಯರ ಬಲ ಬೇಕಿತ್ತು. ಅದ್ದರಿಂದ ಬಿಜೆಪಿ ಸರ್ಕಾರಿ ಅಧಿಕಾರಿಗಳನ್ನು ತಮ್ಮ ಕಡೆ ಸೆಳೆದುಕೊಂಡು ಕಾಂಗ್ರೆಸ್ ನಿಂದ ಮೂವರು ಮತ್ತು ಜೆಡಿಎಸ್‍ನಿಂದ ಒಬ್ಬ ನಿರ್ದೇಶಕರನ್ನು ಹೈಜಾಕ್ ಮಾಡಿತ್ತು. ಆದರೆ ಇಂದು ನಡೆದ ಚುನಾವಣೆಯ ಸಮಯದಲ್ಲಿ ಬಿಜೆಪಿಯವರ ಕಡೆ ಒಬ್ಬ ಅಧಿಕಾರಿಂದ ಜೆಡಿಎಸ್ ಕ್ರಾಸ್ ವೋಟಿಂಗ್ ಹಾಕಿದ್ದಾರೆ ಎನ್ನಲಾಗುತ್ತಿದೆ.