ಮಂಡ್ಯ: ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ (MLA Dharshan Puttannaiah) ಅವರು ಇಂದು ಅಮೆರಿಕಾಗೆ ತೆರಳಿದ್ದಾರೆ.
ಅಮೆರಿಕಾ (America) ಗೆ ಹೊರಡುವ ಮುನ್ನ ವೀಡಿಯೋ ಮಾಡಿರುವ ಶಾಸಕರು, ಎಲ್ಲರೂ ಶಾಂತಿಯಿಂದ ಇರಬೇಕು. ಜನರಿಗೆ ಸಮಸ್ಯೆ ಇದ್ದರೆ ನನ್ನ ನಂಬರ್ ಗೆ ಕರೆ ಮಾಡಿ ಎಂದು ಹೇಳಿದ್ದಾರೆ.
ಐದು ತಿಂಗಳ ಹಿಂದೆ ಚುನಾವಣೆಗಾಗಿ ಅಮೇರಿಕಾದಿಂದ ಮಂಡ್ಯದ ಮೇಲುಕೋಟೆ ಕ್ಷೇತ್ರಕ್ಕೆ ಬಂದು ದರ್ಶನ್ ಫುಲ್ ಆಕ್ಟೀವ್ ಆಗಿದ್ದರು. ಇದರ ಪರಿಣಾಮ ಸರ್ವೋದಯ ಕರ್ನಾಟಕ ಪಕ್ಷದಿಂದ ಸ್ಪರ್ಧೆ ಮಾಡಿ ಜೆಡಿಎಸ್ ಅಭ್ಯರ್ಥಿ ಪುಟ್ಟರಾಜು ವಿರುದ್ಧ ಗೆಲುವನ್ನು ಸಹ ಗಳಿಸಿದ್ರು. ಇದೀಗ ದರ್ಶನ್ ತನ್ನ ಹೆಂಡತಿ ಮಕ್ಕಳನ್ನು ನೋಡಲು ಅಮೆರಿಕಾಗೆ ತೆರಳಿದ್ದಾರೆ. ಇದನ್ನೂ ಓದಿ: ಕರೆಂಟ್ ಬಿಲ್ ಕೇಳಲು ಬಂದ್ರೆ ನನ್ನನ್ನು ಕರೆಯಿರಿ: ಸುರೇಶ್ ಗೌಡ
ವೀಡಿಯೋದಲ್ಲಿ ಹೇಳಿದ್ದೇನು..?: ಹೆಂಡತಿ ಮಕ್ಕಳನ್ನು ನೋಡಿ 5 ತಿಂಗಳು ಆಗಿವೆ. ಹೀಗಾಗಿ ಅವರನ್ನು ನೋಡಲು ಅಮೆರಿಕಾಗೆ ಹೋಗ್ತಾ ಇದ್ದೀನಿ. 10 ದಿನಗಳ ನಂತರ ವಾಪಸ್ ನಾನು ಬರ್ತೀವಿ. ಎಲ್ಲರೂ ಶಾಂತಿಯಿಂದ ಇರಬೇಕು. ಜನರಿಗೆ ಸಮಸ್ಯೆ ಇದ್ದರೆ ನನ್ನ ನಂಬರ್‍ಗೆ ಕರೆ ಮಾಡಿ. ನಮ್ಮ ಕಡೆಯವರು ಮಾತನಾಡಿ ಸಮಸ್ಯೆ ಬಗೆಹರಿಸುತ್ತಾರೆ. ಅಮೆರಿಕಾದಿಂದ ಬಂದು ಎಲ್ಲರನ್ನು ಕಾಣುತ್ತೇನೆ ಎಂದು ತಿಳಿಸಿದ್ದಾರೆ.