– ಪುಟ್ಟಣ್ಣಯ್ಯ ಇಲ್ಲದ ಕೊರತೆ ಕಾಡುತ್ತಿದೆ
ಮಂಡ್ಯ: ನನ್ನನ್ನು ಬೆಂಬಲಿಸಿದ್ದ ಕಾಂಗ್ರೆಸ್ ಮುಖಂಡರ ಉಚ್ಛಾಟನೆಯನ್ನು ನಾನು ನಿರೀಕ್ಷಿಸಿದ್ದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಕ್ಯಾತನಹಳ್ಳಿಯ ದಿ.ಕೆ.ಎಸ್.ಪುಟ್ಟಣ್ಣಯ್ಯ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ನನ್ನನ್ನು ಬೆಂಬಲಿಸಿದ ಕೆಪಿಸಿಸಿ ಸದಸ್ಯ ಸಚ್ಚಿದಾನಂದ ಹಿಂಡವಾಳು ಅವರನ್ನು ಪಕ್ಷದಿಂದ ಅಮಾನತು ಮಾಡಿದ್ದಾರೆ. ಕಾಂಗ್ರೆಸ್ ಅವರು ಹೀಗೆ ಮಾಡುತ್ತಾರೆ ಎಂದು ನನಗೆ ಮೊದಲೇ ತಿಳಿದಿತ್ತು. ಇದನ್ನ ನಮ್ಮ ಬೆಂಬಲಿಗರು ಸವಾಲಾಗಿ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
Advertisement
Advertisement
ಪ್ರಸ್ತುತ ಸನ್ನಿವೇಶದಲ್ಲಿ ಪುಟ್ಟಣ್ಣಯ್ಯ ಇಲ್ಲದಿರುವುದು ದೊಡ್ಡ ಕೊರತೆ ಕಾಡುತ್ತಿದೆ. ರೈತರ ಪರ ನಿಲ್ಲಲು ನಾನು ಬೆಂಬಲ ಕೇಳಿದ್ದೇನೆ ಎಂದು ಹೇಳಿದ ಅವರು, ತಮ್ಮ ಪರ ಪ್ರಚಾರಕ್ಕೆ ನಿಂತಿರೋ ದರ್ಶನ ಬಗ್ಗೆ ಮಾತನಾಡಿದ ಜೆಡಿಎಸ್‍ನವರ ವಿರುದ್ಧ ಕಿಡಿಕಾರಿದ್ದಾರೆ. ಟೀಕೆ ಮಾಡೋದ್ರಿಂದ ದರ್ಶನ್ ಇಮೇಜ್ ಗೆನೋ ಏನೂ ಧಕ್ಕೆ ಆಗಲ್ಲ ಅಂದ್ರು. ಇದನ್ನೂ ಓದಿ: ಸುಮಲತಾ ಬೆನ್ನಿಗೆ ನಿಂತ ಕಾಂಗ್ರೆಸ್ಸಿನ ಮೊದಲ ವಿಕೆಟ್ ಪತನ
Advertisement
ಇದೇ ವೇಳೆ ಅಮರಾವತಿ ಚಂದ್ರಶೇಖರ್ ವಿರುದ್ಧವೂ ಹರಿಹಾಯ್ದ ಅವರು, ಅಂಬರೀಶ್ ರೀತಿ ಯಾರೂ ಇರಲ್ಲ. ಅವರು ಪಕ್ಷಾತೀತವಾಗಿದ್ದರು. ಕೆಲವರು ಇದ್ದಾಗೊಂತರ ಇಲ್ಲದಿದ್ದಾಗೊಂತರ ನಡೆದುಕೊಳ್ತಾರೆ. ಇದು ಅಮರಾವತಿ ವ್ಯಕ್ತಿತ್ವ ತೋರುತ್ತದೆ ಎಂದು ವಾಗ್ದಾಳಿ ನಡೆಸಿದ್ರು. ಇದನ್ನೂ ಓದಿ: ಬೇರೆಯವರು ಏನೇ ಮಾತನಾಡಿದ್ರೂ ದರ್ಶನ್, ಯಶ್ ಇಮೇಜ್ ಹಾಗೆ ಇರುತ್ತೆ: ಸುಮಲತಾ
Advertisement