ಮಂಡ್ಯ: ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ಸರ್ಕಾರ ಹಿಂದೇಟು ಹಾಕುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ, ನೀರಾವರಿ ನನ್ನ ಇಲಾಖೆಗೆ ಬರಲ್ಲ. ನನ್ನದು ಲೋಕೋಪಯೋಗಿ ಇಲಾಖೆ ಎಂದು ರೇವಣ್ಣ ಉತ್ತರ ನೀಡಿದ್ದಾರೆ.
ಇಂದು ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯನ್ನು ಮುಖ್ಯಮಂತ್ರಿಗಳು ಕಡೆಗಣಿಸುತ್ತಿದ್ದಾರೆ ಎಂಬ ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಕೆಲವರು ಆಪಾದನೆ ಮಾಡುತ್ತಾರೆ ಬಿಡಿ ಎಂದು ಹೇಳಿದ್ದಾರೆ.
ಚಲುವರಾಯಸ್ವಾಮಿ ಪೊಳ್ಳು ಆಪಾದನೆಗಳಿಗೆ ಉತ್ತರ ಕೊಡುತ್ತಾ ಹೋದರೆ ಪೊಳ್ಳೆದ್ದು ಹೋಗುತ್ತೇವೆ. ಮಂಡ್ಯ ಜಿಲ್ಲೆಗೆ ಕಾವೇರಿ ನೀರಿನ ಅವಶ್ಯಕತೆ ಇರೋ ಬಗ್ಗೆ ಸಂಸತ್‍ನಲ್ಲಿ ಪ್ರಜ್ವಲ್ ರೇವಣ್ಣ ಮಾತನಾಡಿದ್ದಾರೆ. ಹೇಮಾವತಿ ನದಿಯಲ್ಲಿರುವ ನೀರು ಸಹ ಇನ್ನು ಕೇವಲ ಹತ್ತು ದಿನ ಮಾತ್ರ ಕುಡಿಯಲು ಸಿಗುತ್ತದೆ ಎಂದು ತಿಳಿಸಿದರು.
ಇನ್ನು ಮಧ್ಯಂತರ ಚುನಾವಣೆ ಬರುವ ಬಗ್ಗೆ ಕೇಳಿದಾಗ, ನನಗೆ ಆದರ ಬಗ್ಗೆ ಗೊತ್ತಿಲ್ಲ. ನಾನು ಕೇವಲ ರೋಡ್ ಮಂತ್ರಿ ನೀವು ಅದನ್ನು ರಾಷ್ಟ್ರೀಯ ಅಧ್ಯಕ್ಷರನ್ನೇ ಕೇಳಿ ಎಂದು ಹೇಳಿದ್ದಾರೆ.