ಮಂಡ್ಯ: ಕರ್ನಾಟಕದ ನೆಲದಲ್ಲಿ ಕನ್ನಡಿಗರನ್ನು ಭಯೋತ್ಪಾದಕರು ಎಂದು ಅವಮಾನಿಸಿರುವ ಗಾಯಕ ಸೋನು ನಿಗಮ್ (Sonu Nigam) ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕನ್ನಡ ಸೇನೆ ಕಾರ್ಯಕರ್ತರು (Kannada Sene Worker) ಆಗ್ರಹಿಸಿದರು.
ಮಂಡ್ಯ (Mandya) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿದ ಕಾರ್ಯಕರ್ತರು ಹೆಚ್ಚುವರಿ ಪೊಲೀಸ್ ಅಧೀಕ್ಷಕ ತಿಮ್ಮಯ್ಯರಿಗೆ ದೂರು ಸಲ್ಲಿಸಿದ ನಂತರ ಗಾಯಕ ಸೋನು ನಿಗಮ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಅವಮಾನ ಸಹಿಸುವಷ್ಟು ಚಿಕ್ಕವನಲ್ಲ – ಸ್ಯಾಂಡಲ್‌ವುಡ್‌ನಿಂದ ಅಸಹಕಾರದ ಬೆನ್ನಲ್ಲೇ ಸೋನು ನಿಗಮ್ ರಿಯಾಕ್ಷನ್
ಕರ್ನಾಟಕದ ನೆಲದಲ್ಲಿ ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿ ಅವಮಾನಿಸಿದ್ದಾರೆ. ಕನ್ನಡಿಗರನ್ನು ಕೀಳಾಗಿ ಕಂಡಿರುವುದು ಮಾತ್ರವಲ್ಲ. ಕನ್ನಡಿಗರನ್ನು ದೇಶದ್ರೋಹಿಗಳೆಂದು ಬಿಂಬಿಸಿ, ಅವರನ್ನು ಖಳನಾಯಕರನ್ನಾಗಿ ಮಾಡಿರುವ ಹುನ್ನಾರ ನಡೆಯುತ್ತಿದೆ. ಕೂಡಲೇ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: 100 ಕೋಟಿ ಕ್ಲಬ್‌ಗೆ `ಹಿಟ್-3′ ಮೂವಿ – ಮೊದಲ ಬಾರಿಗೆ ನಾನಿ ಚಿತ್ರ ಭರ್ಜರಿ ಕಲೆಕ್ಷನ್
ಕನ್ನಡಿಗರನ್ನು ನಿಂದಿಸಿರುವ ಸೋನುನಿಗಮ್ ಅವರನ್ನು ಕನ್ನಡ ಚಿತ್ರರಂಗ ಬಹಿಷ್ಕರಿಸಬೇಕು. ಕರ್ನಾಟಕದ ಜನಪ್ರತಿನಿಧಿಗಳು ಮೌನ ಮುರಿದು ಮಾತನಾಡಬೇಕು. ಮೂರು ಸಾವಿರ ವರ್ಷ ಹಾಗೂ ದೇಶದ ಎಲ್ಲ ಭಾಷೆಯ ತಾಯಿ ಭಾಷೆ ಕನ್ನಡಕ್ಕೆ ಅವಮಾನಿಸಿದ ಯಾವುದೇ ವ್ಯಕ್ತಿಯಾದರೂ ಅಂಥವರ ವಿರುದ್ಧ 24 ಗಂಟೆಯೊಳಗೆ ಕಾನೂನು ಕ್ರಮ ಕೈಗೊಳ್ಳುವ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.