ಮಂಡ್ಯ: ಮಾರಕಾಸ್ತ್ರಗಳೊಂದಿಗೆ ತೋಟದ ಮನೆಗೆ ನುಗ್ಗಿ ದರೋಡೆ ಮಾಡಲು ಯತ್ನಿಸಿದ್ದು, ಸಾಧ್ಯವಾಗದೇ ಇದ್ದಾಗ ಮನೆಯ ಕಂಪೌಂಡ್ ನಾಶಪಡಿಸಿದ ಘಟನೆ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಸೊಳ್ಳೇಪುರ ಸಮೀಪ ತೋಟದ ಮನೆಯಲ್ಲಿ ನಡೆದಿದೆ.
ಈ ಘಟನೆ ಭಾನುವಾರ ತಡರಾತ್ರಿ 12.30 ರ ಸಮಯದಲ್ಲಿ ನಡೆದಿದೆ. ದುಷ್ಕರ್ಮಿಗಳ ಗುಂಪಿನಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದು, ಕಂಪೌಂಡ್ ನಾಶಕ್ಕೆ ಬಳಸಿದ ಟ್ರ್ಯಾಕ್ಟರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸರಕಾರಿ ಆಸ್ಪತ್ರೆಯ ವೈದ್ಯೆ ಡಾ.ಹರ್ಷವರ್ದಿನಿ ಹಾಗೂ ಬ್ಯಾಂಕ್ ಉದ್ಯೋಗಿ ಗಿರಿಪ್ರಸಾದ್ ಅವರ ತೋಟದ ಮನೆಯಲ್ಲಿ ದುಷ್ಕರ್ಮಿಗಳ ಗುಂಪು ದರೋಡೆಗೆ ಯತ್ನಿಸಿದೆ. ಈ ವೇಳೆ ದರೋಡೆ ಮಾಡಲು ಆಗದಿದ್ದಾಗ ಸಿಟ್ಟುಗೊಂಡ ಕಿಡಿಗೇಡಿಗಳು ಮನೆಯ ಕಂಪೌಂಡನ್ನು ಟ್ರ್ಯಾಕ್ಟರ್ ಬಳಸಿ ಬೀಳಿಸಿದ್ದಾರೆ. ಅಲ್ಲದೆ ಮನೆ ಎದುರು ನಿಲ್ಲಿಸಿದ್ದ ಎರಡು ಬೈಕ್ ಹಾಗೂ ಕಾರನ್ನು ಜಖಂಗೊಳಿಸಿ ಬಳಿಕ ಪರಾರಿಯಾಗಿದೆ.
ಘಟನಾ ಸ್ಥಳಕ್ಕೆ ಕಿಕ್ಕೇರಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಭೇಟಿ ಪರಿಶೀಲನೆ ನಡೆಸಿದ್ದು, ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv