ಮಂಡ್ಯ ಬಾಲಕಿ ಸಾವು ಕೇಸ್ | ಎಚ್ಚೆತ್ತ ಬೆಂಗಳೂರು ಪೊಲೀಸರಿಂದ ಹೊಸ ಎಸ್‌ಒಪಿ ಜಾರಿ

Public TV
1 Min Read
bengaluru police commissioner b dayanand
ಬೆಂಗಳೂರು ನಗರ

ಬೆಂಗಳೂರು: ಮಂಡ್ಯದಲ್ಲಿ (Mandya) ವಾಹನ ತಡೆಯುವಾಗ ಆದ ಎಡವಟ್ಟಿನಿಂದ ಮಗು ಸಾವನ್ನಪ್ಪಿದ್ದ ಪ್ರಕರಣದ ಬೆನ್ನಲ್ಲೇ ಎಚ್ಚೆತ್ತ ಬೆಂಗಳೂರು ಪೊಲೀಸರು (Bengaluru Police) ಇದೀಗ ಹೊಸ ಎಸ್‌ಒಪಿ (SOP) ಜಾರಿಗೊಳಿಸಿದ್ದಾರೆ.

ಈ ಕುರಿತು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಬೆಂಗಳೂರು ಎಲ್ಲಾ ಹಿರಿಯ ಅಧಿಕಾರಿಗಳಿಗೆ ಹಾಗೂ ಇನ್ಸ್ಪೆಕ್ಟರ್‌ಗಳಿಗೆ ಹೊಸ ಮಾರ್ಗಸೂಚಿ ಹೊರಡಿಸಿದ್ದಾರೆ.ಇದನ್ನೂ ಓದಿ: ದ.ಕನ್ನಡ | ಭಾರೀ ಮಳೆಗೆ ಗುಡ್ಡ, ಮನೆ ಕುಸಿತ – ಬಾಲಕಿ ಸೇರಿ ಇಬ್ಬರು ಸಾವು

ಅಪಘಾತಗಳಿಗೆ ಆಸ್ಪದ ನೀಡಬಾರದು ಎಂಬ ಉದ್ದೇಶದಿಂದ ವಿಸಿ ಮೂಲಕ ಡಿಡಿ ಪರಿಶೀಲನೆ ಮಾಡುವ ಪೊಲೀಸರು ರಾತ್ರಿ ಪಾಳಿಯಲ್ಲಿ ನಾಕಾಬಂದಿ ಹಾಕಿಕೊಂಡು ಪರಿಶೀಲನೆ ಮಾಡಬೇಕು. ಯಾವ ರೀತಿಯಾಗಿ ಪರಿಶೀಲನೆ ಮಾಡಬೇಕು ಎಂಬುವುದನ್ನು ತಿಳಿಸಿದ್ದಾರೆ.

ಡಿಡಿ ಪರಿಶೀಲನೆ ಮಾಡುವಾಗ, ನಾಕಾ ಬಂದಿಯಲ್ಲಿರುವವರು ಅನುಸರಿಸುವ ಕ್ರಮಗಳು:
* ಸಿಬ್ಬಂದಿ ರಿಪ್ಲೇಕ್ಸ್ ಜಾಕೆಟ್ ಕಡ್ಡಾಯವಾಗಿ ಧರಿಸಬೇಕು
* ನಾಕಾ ಬಂದಿ ಸ್ಥಳದಲ್ಲಿರುವ ಬ್ಯಾರಿಕೆಡ್‌ಗಳ ಮೇಲೆ ರಿಪ್ಲೇಕ್ಸ್ ಲೈಟ್ಸ್ ಬಳಸಬೇಕು
* ಜಿಗ್ ಜಾಗ್ ಬ್ಯಾರಿಕೇಡ್ ಹಾಕಿಕೊಳ್ಳಬೇಕು
* ಪಬ್ಲಿಕ್ಸ್ ಜೊತೆಗೆ ಸೌಮ್ಯವಾಗಿ ನಡೆದುಕೊಳ್ಳಬೇಕು
* ಮಕ್ಕಳೊಂದಿಗೆ ಬರುವವರ ಜೊತೆ ಪಕ್ಕದಲ್ಲಿ ನಿಲ್ಲಿಸಿ ಬಗೆಹರಿಸಿಕೊಡಲು ಖಡಕ್ ಸೂಚನೆ
* ಅವಘಡಗಳಾದ್ರೆ ಸಂಬಂಧಪಟ್ಟ ಅಧಿಕಾರಿಗಳು, ಸ್ಥಳದಲ್ಲಿರುವ ಸಿಬ್ಬಂದಿಗಳೇ ಜವಾಬ್ದಾರರು.ಇದನ್ನೂ ಓದಿ: ಹೃತಿಕ್ ರೋಷನ್‌ಗೆ ಪೃಥ್ವಿರಾಜ್ ಸುಕುಮಾರನ್ ಆ್ಯಕ್ಷನ್ ಕಟ್?

Share This Article