ಲಾಕ್‍ಡೌನ್‍ನಿಂದ ಎಲ್ಲರೂ ಮನೆಯಲ್ಲಿದ್ದೀರಿ. ಹೀಗಾಗಿ ಟೈಂ ಪಾಸ್ ಮಾಡುವುದು ತುಂಬಾ ಕಷ್ಟ. ಏನಾದರೂ ತಿಂಡಿ ತಿಂದುಕೊಂಡು ಸಿನಿಮಾ ನೋಡಿಕೊಂಡು ಟೈಂ ಪಾಸ್ ಮಾಡೋಣ ಎಂದರೆ ಹೊರಗೆ ಯಾವುದೇ ಬೇಕರಿ ಓಪನ್ ಇರಲ್ಲ. ದಿನಸಿ ಅಂಗಡಿ ತೆರೆದಿರುತ್ತೆ, ಮಾಸ್ಕ್ ಧರಿಸಿ ಹೋಗಿ ಕಡ್ಲೆಪುರಿ ತೆಗೆದುಕೊಂಡು ಬನ್ನಿ. ಕಡ್ಲೆಪುರಿ ಎಂದರೆ ಎಲ್ಲರಿಗೂ ಇಷ್ಟ. ಆದರೆ ಬರಿ ಕಡ್ಲೆಪುರಿಯನ್ನು ತುಂಬಾ ತಿನ್ನಲು ಸಾಧ್ಯವಿಲ್ಲ. ಹೀಗಾಗಿ ಸಿಂಪಲ್ ಆಗಿ ಕಡ್ಲೆಪುರಿ ಒಗ್ಗರಣೆ ಮಾಡುವ ವಿಧಾನ ನಿಮಗಾಗಿ…
Advertisement
ಬೇಕಾಗುವ ಸಾಮಗ್ರಿಗಳು
1. ಕಡ್ಲೆಪುರಿ – 1 ಪ್ಯಾಕೆಟ್ (ಸಪ್ಪೆ ಪುರಿ)
2. ಖಾರದಪುಡಿ – 1 ಚಮಚ
3. ಅರಿಶಿಣ – 1/4 ಚಮಚ
4. ಎಣ್ಣೆ – 3 ಚಮಚ
5. ಕಡ್ಲೆಬೀಜ – 150 ಗ್ರಾಂ
6. ಕರಿಬೇಕು – ಸ್ವಲ್ಪ
7. ಬೆಳ್ಳುಳ್ಳಿ – 7-8 ಎಳಸು
8. ಮೆಣಸಿನಕಾಯಿ – 4-5
9. ಉಪ್ಪು – ರುಚಿಗೆ ತಕ್ಕಷ್ಟು
Advertisement
Advertisement
ಮಾಡುವ ವಿಧಾನ
* ಒಂದು ಬಾಣಲೆಯನ್ನು ಬಿಸಿಗಿಟ್ಟು 3 ಚಮಚ ಎಣ್ಣೆ ಹಾಕಿ. ಕಾದ ಮೇಲೆ ಕಡ್ಲೆಬೀಜ ಹಾಕಿ ಫ್ರೈ ಮಾಡಿಕೊಳ್ಳಿ.
* ಈಗ ಕರಿಬೇವು, ಬೆಳ್ಳುಳ್ಳಿ, ಮೆಣಸಿನಕಾಯಿ ಹಾಕಿ ಫ್ರೈ ಮಾಡಿಕೊಳ್ಳಿ.
* ನಂತರ ಖಾರದಪುಡಿ, ಅರಿಶಿಣ ಹಾಕಿ ಮಿಕ್ಸ್ ಮಾಡಿ.
* ಕೊನೆಗೆ ಕಡ್ಲೆಪುರಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ಗರಂ ಗರಂ ಅಂತಿರುವ ಕಡ್ಲೆಪುರಿ ಒಗ್ಗರಣೆ ರೆಡಿ.