ಟಾಲಿವುಡ್ ನಟ ಮಂಚು ವಿಷ್ಣು (Manchu Vishnu) ನಟನೆಯ ‘ಕಣ್ಣಪ್ಪ’ (Kannappa) ಟೀಸರ್ ರಿಲೀಸ್ ಆಗಿದೆ. ಬಹುಭಾಷೆಗಳಲ್ಲಿ ರಿಲೀಸ್ ಆಗಿರೋ ‘ಕಣ್ಣಪ್ಪ’ ಟೀಸರ್‌ನಲ್ಲಿ ಮಲ್ಟಿ ಸ್ಟಾರ್ ಕಲಾವಿದರು ಮಿಂಚಿದ್ದಾರೆ. ಅದರಲ್ಲಿ ಪ್ರಭಾಸ್ (Prabhas) ಕಣ್ಣೇ ಹೈಲೈಟ್ ಆಗಿದೆ. ಪ್ರಭಾಸ್ ಲುಕ್‌ಗೆ ಫ್ಯಾನ್ಸ್ ಕಳೆದೋಗಿದ್ದಾರೆ. ಇದನ್ನೂ ಓದಿ:‘ಗುಡ್ ಬ್ಯಾಡ್ ಅಗ್ಲಿ’ ಅವತಾರವೆತ್ತಿದ ಅಜಿತ್ ಕುಮಾರ್- ಟೀಸರ್‌ಗೆ ಫ್ಯಾನ್ಸ್ ಮೆಚ್ಚುಗೆ
Advertisement
ನಾಯಕನಾಗಿ ಮಂಚು ವಿಷ್ಣು, ಶಿವನಾಗಿ ಅಕ್ಷಯ್ ಕುಮಾರ್, ಪಾರ್ವತಿಯಾಗಿ ಕಾಜಲ್ ಕಾಣಿಸಿಕೊಂಡಿದ್ದಾರೆ. ಮೋಹನ್ ಬಾಬು ಜೊತೆ ಮೋಹನ್ ಲಾಲ್, ಶರತ್ ಕುಮಾರ್, ದೇವರಾಜ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಕೊನೆಯಲ್ಲಿ ಪ್ರಭಾಸ್ ಎಂಟ್ರಿ ಆಗುತ್ತಿದೆ. ಪ್ರಭಾಸ್ ನೋಡೋ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನಟನ ಎಂಟ್ರಿ ಚಿಂದಿ ಎಂದಿದ್ದಾರೆ.
Advertisement
Advertisement
150 ಕೋಟಿ ರೂ. ಬಜೆಟ್‌ನಲ್ಲಿ ‘ಕಣ್ಣಪ್ಪ’ ಸಿನಿಮಾ ಮಾಡಲಾಗಿದೆ. ಟೀಸರ್ ಕೂಡ ಅದ್ಭುತವಾಗಿ ಮೂಡಿ ಬಂದಿದೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಬಗ್ಗೆ ಅಪ್‌ಡೇಟ್ ಸಿಗಲಿದೆ.
Advertisement
ಅಂದಹಾಗೆ, ಇತ್ತೀಚೆಗೆ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನಲ್ಲಿ ‘ಕಣ್ಣಪ್ಪ’ ಸಿನಿಮಾ ಹಾಡಿನ ಬಿಡುಗಡೆ ಕಾರ್ಯಕ್ರಮ ನಡೆಯಿತು. ತೆಲುಗು ಚಿತ್ರರಂಗದ ಹಿರಿಯ ನಟ ಮೋಹನ್ ಬಾಬು, ನಾಯಕ ನಟ ಮಂಚು ವಿಷ್ಣು, ನಟಿ ಸುಮಲತಾ ಅಂಬರೀಶ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಭಾರತಿ ವಿಷ್ಣುವರ್ಧನ್ ಕೂಡ ಭಾಗಿಯಾಗಿದ್ದರು.