ವಿಜಯಪುರ: ಸಾಲದ ಹಣ ವಾಪಸ್ ಕೊಡಲಿಲ್ಲ ಎಂದು ವೃದ್ಧೆಗೆ ಬಂದೂಕು ತೋರಿಸಿ ಹೆದರಿಸಿರುವ ಘಟನೆ ನಗರದ ತಿಕೋಟ ತಾಲೂಕಿನ ಜಾಲಗೇರಿ ಗ್ರಾಮದಲ್ಲಿ ನಡೆದಿದೆ.
ಶಾಂತಾಬಾಯಿ ರಾಠೋಡ (65) ವೃದ್ಧೆಯನ್ನು ಸಾಲಗಾರ ಹೆದರಿಸಿದ್ದಾನೆ. ಶಾಂತಾಬಾಯಿ, ಜಾಲಗೇರಿ ನಿವಾಸಿ ಮಾದಣ್ಣ ಲಾಲಿಯಿಂದ 30 ಸಾವಿರ ಕೈಸಾಲ ಪಡೆದಿದ್ದರು. ವೃದ್ಧೆ ಹಣ ನೀಡಲು ವಿಳಂಬ ಮಾಡಿದ ಹಿನ್ನಲೆ, ವೃದ್ಧೆಯ ಸೀರೆ ಹಿಡಿದು ಎಳೆದಾಡಿ ಅನುಚಿತವಾಗಿ ವರ್ತಿಸಿದ್ದಲ್ಲದೇ ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾನೆ. ಇದನ್ನೂ ಓದಿ: ಕೋವಿಡ್ ಸ್ವಯಂ ಪರೀಕ್ಷೆ ಕಿಟ್ ಖರೀದಿಸಲು ಆಧಾರ್ ಕಡ್ಡಾಯ – ಮುಂಬೈ ಮೇಯರ್
ಈ ಕುರಿತು ಶಾಂತಾಬಾಯಿ, ನನಗೆ ನ್ಯಾಯ ಒದಗಿಸುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ. ಸದ್ಯ ವೃದ್ಧೆಯು ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದು, ತಿಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ ನಡುವೆಯೂ ಕೋಳಿ ವ್ಯಾಪಾರ ಜೋರು – ಕೋವಿಡ್ ನಿಯಮ ಉಲ್ಲಂಘನೆ