ಟೋಕಿಯೋ: ಭಾನುವಾರ ರೈಲಿನಲ್ಲಿ ಚಾಕು ಮತ್ತು ಗುಂಡಿನ ದಾಳಿ ನಡೆದ ಪರಿಣಾಮ 8 ಜನರು ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಗಂಭೀರವಾದ ಘಟನೆ ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆದಿದೆ.
Advertisement
ಟೋಕಿಯೋದಲ್ಲಿ ವ್ಯಕ್ತಿಯೊಬ್ಬನು ಕೀಯೋ ಲೈನ್ ನ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದು, ಈ ವೇಳೆ ರೈಲಿಗೆ ಬೆಂಕಿ ಹಚ್ಚಿದ್ದಾನೆ. ಅದು ಅಲ್ಲದೇ ಆರೋಪಿಯು ರೈಲಿನ ಸುತ್ತ ಲಿಕ್ವಿಡ್ ಅನ್ನು ಹಾಕಿದ್ದನು ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ. ವೀಡಿಯೋವೊಂದರಲ್ಲಿ ಜನರು ಕೀಯೋ ಲೈನ್ ರೈಲಿನಿಂದ ತಪ್ಪಿಸಿಕೊಳ್ಳಲು ಕಿಟಕಿಗಳನ್ನು ಏರುತ್ತಿರುವ ದೃಶ್ಯ ಸೇರೆಯಾಗಿದೆ. ಇದನ್ನೂ ಓದಿ: ಆನ್‍ಲೈನ್ ವರ್ಕ್ ಹೆಸರಿನಲ್ಲಿ 3 ಲಕ್ಷ ರೂ. ವಂಚನೆ
Advertisement
ಆರೋಪಿಯು ಚಾಕು ಮತ್ತು ಬಂದೂಕಿನಿಂದ ಜನರ ಮೇಲೆ ದಾಳಿ ಮಾಡಿದ್ದು, 8 ಜನರು ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ. ಆಕ್ರಮಣ ಮಾಡಿದವನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
Advertisement
Advertisement
ದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಮುಕ್ತಾಯವಾದಂತೆಯೇ ರಾತ್ರಿ 8 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು, ರೈಲಿನ ಅಧಿಕಾರಿಗಳು ತಕ್ಷಣ ಘಟನಾ ಸ್ಥಳಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: ಯುವರತ್ನನಿಗೆ ವಿಶೇಷವಾಗಿ ಗೌರವ ಸಲ್ಲಿಸಿದ ಅಮೂಲ್
ಹಿಂಸಾತ್ಮಕ ಅಪರಾಧಗಳು ಜಪಾನ್‍ನಲ್ಲಿ ಅಪರೂಪ. ಜಪಾನ್ ಕಟ್ಟುನಿಟ್ಟಿನ ಗನ್ ನಿಯಮಗಳನ್ನು ಹೊಂದಿದೆ.