ಮಹಿಳೆಯನ್ನು ಕೊಂದು ಆಕೆಯ ಮಾಂಸ ತಿಂದು ತೇಗಿದ 24 ವರ್ಷದ ಯುವಕ!

Public TV
1 Min Read
POLICE

ಜೈಪುರ: ಮಹಿಳೆಯೊಬ್ಬಳನ್ನು ಕೊಂದು ಬಳಿಕ ಆಕೆಯನ್ನು ಮಾಂಸವನ್ನು ತಿಂದ ಪ್ರಕರಣ ಸಂಬಂಧ 24 ವರ್ಷದ ಯುವಕನೊಬ್ಬನನ್ನು ರಾಜಸ್ಥಾನ (Rajasthan) ದ ಪೊಲೀಸರು ಬಂಧಿಸಿದ್ದಾರೆ.

ಈ ಅಚ್ಚರಿಯ ಘಟನೆ ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ಯುವಕನನ್ನು ಸುರೇಂದ್ರ ಠಾಕೂರ್ (Surendra Thakur) ಎಂದು ಗುರುತಿಸಲಾಗಿದ್ದು, ಈತ ಹೈಡ್ರೋಫೋಬಿಯಾದಿಂದ ಬಳಲುತ್ತಿರುವುದಾಗಿ ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ. ಹೀಗಾಗಿ ವಿಚಾರಣೆಯ ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಸುರೇಂದ್ರ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

police jeep 1

ಸುರೇಂದ್ರ ಆರೋಗ್ಯದ ಬಗ್ಗೆ ಬಂಗಾರ್ ಆಸ್ಪತ್ರೆಯ ವೈದ್ಯರು ಪ್ರತಿಕ್ರಿಯಿಸಿ, ಸುರೇಂದ್ರ ಹೈಡ್ರೋಫೋಬಿಯಾದಿಂದ ಬಳಲುತ್ತಿದ್ದಾನೆ. ಆತನಿಗೆ ಈ ಹಿಂದೆ ನಾಯಿಯೊಂದು ಕಚ್ಚಿರಬೇಕು. ಬಳಿಕ ಸರಿಯಾದ ಚಿಕಿತ್ಸೆ ಪಡೆದಿಲ್ಲ ಅನಿಸ್ತದೆ. ಹೀಗಾಗಿ ಸದ್ಯ ಆತ ಕೊನೆಯ ಹಂತದ ರೇಬಿಸ್‍ನಿಂದ ಬಳಲುತ್ತಿದ್ದಾನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೆಲವೇ ಗಂಟೆಗಳಲ್ಲಿ ವಿವಾಹವಾಗಬೇಕಿದ್ದ ವಧು ಅಗ್ನಿ ಅವಘಡದಲ್ಲಿ ಸಾವು

ಮಹಿಳೆಯ ಕೊಲೆಗೈಯುವ ದೃಶ್ಯವನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಗಳು ಮಾತನಾಡಿ, 65 ವರ್ಷದ ಶಾಂತಿ ದೇವಿಯವರು ದನ ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಸುರೇಂದ್ರ ಏಕಾಏಕಿ ಆಕೆಯ ಮೇಲೆ ದಾಳಿ ಮಾಡಿದ್ದಾನೆ. ನಂತರ ಕಲ್ಲಿನಿಂದ ಜಜ್ಜಿ ಶಾಂತಿದೇವಿಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

ಆರೋಪಿ ಮಾನಸಿಕವಾಗಿ ಡಿಸ್ಟರ್ಬ್ ಆಗಿರುವುದು ಆತನ ವರ್ತನೆಯಿಂದ ಗೊತ್ತಾಯಿತು. ಸದ್ಯ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ. ಆಸ್ಪತ್ರೆಯಲ್ಲಿಯೂ ಆತ ತನ್ನ ವರ್ತನೆ ಮುಂದುವರಿಸಿದನು. ಹೀಗಾಗಿ ಆಸ್ಪತ್ರೆ ನರ್ಸ್‍ಗಳು ಆತನ ಕೈ-ಕಾಲುಗಳನ್ನು ಬೆಡ್‍ಗೆ ಕಟ್ಟಿಹಾಕಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಸುಖ್ರಾಂ ಬಿಸ್ನೋಯಿ ತಿಳಿಸಿದ್ದಾರೆ.

Share This Article