ಪ್ರಾಣವನ್ನು ಲೆಕ್ಕಿಸದೇ ಮಗುವನ್ನು ರಕ್ಷಿಸೋದೇ ಗುರಿಯಾಗಿತ್ತು: ಎನ್‍ಡಿಆರ್‌ಎಫ್ ಸಿಬ್ಬಂದಿ

Public TV
1 Min Read
kerala NDRF

ತಿರುವನಂತಪುರಂ: ಕೇರಳದ ಸುರಿಯುತ್ತಿರುವ ಭಾರೀ ಮಳೆಯಿಂದ ನದಿಗಳು ಉಕ್ಕಿಹರಿಯುತ್ತಿದ್ದು, ಈ ವೇಳೆ ಪ್ರಾಣದ ಹಂಗು ತೊರೆದು ಎನ್‍ಡಿಆರ್‌ಎಫ್ ಪೇದೆಯೊಬ್ಬರು ಮಗುವನ್ನು ರಕ್ಷಿಸಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಎನ್‍ಡಿಆರ್‌ಎಫ್ ತಂಡ ಕೇರಳದ ಇಡುಕ್ಕಿ, ಅಲಪುಜಾ, ಎರ್ನಾಕುಲಂ ಮತ್ತು ತ್ರಿಶೂರ್ ನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಈ ವೇಳೆ ಇಡುಕ್ಕಿ ಪ್ರದೇಶದ ಸೇತುವೆಯೊಂದರ ಬಳಿ ಪುಟ್ಟ ಮಗುವಿನೊಂದಿಗೆ ವ್ಯಕ್ತಿಯೊಬ್ಬರು ರಕ್ಷಣೆಗಾಗಿ ಕಾದು ಕುಳಿತ್ತಿದ್ದರು, ಇದನ್ನು ಕಂಡ ಸಿಬ್ಬಂದಿ ಹರಿಯುತ್ತಿದ್ದ ರಭಸದ ನೀರನ್ನು ಲೆಕ್ಕಿಸದೇ ಸೇತುವೆ ದಾಟಿ ಮಗುವಿನೊಂದಿಗೆ ವಾಪಸ್ ಓಡಿ ಬಂದಿದ್ದಾರೆ. ಈ ವೇಳೆ ಮಗುವಿನ ತಂದೆಯೂ ಕೂಡ ಸಿಬ್ಬಂದಿ ಹಿಂದೆ ಓಡಿ ಬಂದಿದ್ದಾರೆ.

ಜೀವದ ಹಂಗು ತೊರೆದು ಮಗುವಿನ ರಕ್ಷಣೆ ಮಾಡಿದ ಎನ್‍ಡಿಆರ್‌ಎಫ್ ಸಿಬ್ಬಂದಿ ಕನ್ಹಯ್ಯ ಕುಮಾರ್ ಈಗ ಹೀರೋ ಆಗಿದ್ದಾರೆ. ಕನ್ಹಯ್ಯ ಕುಮಾರ್ ಮೂಲತಃ ಬಿಹಾರ್ ರಾಜ್ಯದವರಾಗಿದ್ದು, ಒಟ್ಟಾರೆ 14 ಎನ್‍ಡಿಆರ್‌ಎಫ್ ತಂಡಗಳು ಕೇರಳದಲ್ಲಿ ಕಾರ್ಯಾಚರಣೆ ನಡೆಸಿದೆ.

ಕನ್ಹಯ್ಯ ಕುಮಾರ್ ಮಗುವನ್ನು ರಕ್ಷಣೆ ಮಾಡಿದ ಬೆನ್ನಲ್ಲೇ ಸೇತುವೆ ಮುಳುಗಡೆಯಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕುಮಾರ್, ಆ ಸಮಯದಲ್ಲಿ ನಾನು ಯಾರ ಸಹಾಯ ಪಡೆಯುವ ಹಂತದಲ್ಲಿ ಇರಲಿಲ್ಲ. ಆದರೆ ಅವರು ನೀರಿನ ರಭಸಕ್ಕೆ ಭಯಗೊಂಡಿತ್ತು ಎಂದು ತಿಳಿದಿತ್ತು. ಯಾವುದನ್ನು ಲೆಕ್ಕಿಸದೇ ಅವರ ರಕ್ಷಣೆ ಮಾಡುವುದೇ ನನ್ನ ಮೊದಲ ಗುರಿಯಾಗಿತ್ತು ಎಂದು ಹೇಳಿದ್ದಾರೆ.

ಕೇರಳದಲ್ಲಿ ಸುರಿಯುತ್ತಿರುವ ಮಳೆಗೆ ಹಲವೆಡೆ ಭೂಕುಸಿತ ಸಂಭವಿಸಿದ್ದು, ಇದುವರೆಗೂ 37 ಮಂದಿ ಸಾವನ್ನಪ್ಪಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಕೇರಳ ರಾಜ್ಯ ಸರ್ಕಾರಗಳು ಪ್ರವಾಹದಲ್ಲಿ ಸಿಲುಕಿರುವ ಮಂದಿಯ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಇದೇ ಮೊದಲ ಬಾರಿಗೆ ಕೇರಳದ ಇಡುಕ್ಕಿ ಜಲಾಶಯದ 5 ಐದು ಗೇಟ್ ಗಳನ್ನು ತೆರೆದು ನೀರು ಹೊರಬಿಡಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *