ಪಣಜಿ: ಬಸ್ಸು, ರೈಲಿನಲ್ಲಿ ಪ್ರಯಾಣಿಸುವಾಗ ಒಮ್ಮೊಮ್ಮೆ ವಿಪರೀತ ಜನರ ಮಧ್ಯೆ ಬರುವ ಕಿಡಿಗೇಡಿಗಳು ಮಹಿಳೆಯರು, ಹುಡುಗಿಯರನ್ನು ಸುಮ್ಮನೆ ಟಚ್ ಮಾಡಿಕೊಂಡು ಹೋಗುವುದು, ಎದುರು ಕುಳಿತರೆ ದಿಟ್ಟಿಸಿ ನೋಡುವುದು ಹೀಗೆ.. ಅನೇಕ ರೀತಿಯಲ್ಲಿ ಅಸಭ್ಯವಾಗಿ ವರ್ತಿಸುವುದನ್ನೇ ಚಾಳಿ ಮಾಡಿಕೊಂಡಿರುತ್ತಾರೆ. ತನ್ನ ಸ್ಟಾಪ್ ಬರುವಷ್ಟರಲ್ಲಿ ಈ ವ್ಯಕ್ತಿ ಕೆಳಗೆ ಬೇಗನೆ ಇಳಿದು ಹೋದರೆ ಸಾಕಪ್ಪಾ ದೇವರೇ ಎಂದು ಮಹಿಳೆಯರು ತಮ್ಮ ಮನಸ್ಸಿನಲ್ಲಿ ಅಂದು ಕೊಳ್ಳುತ್ತಾರೆ. ಹಾಗೇ ಕೆಲ ಧೈರ್ಯಶಾಲಿ ಮಹಿಳೆಯರು ಕಿಡಿಗೇಡಿಗಳಿಗೆ ತಕ್ಕಪಾಠವನ್ನು ಕಲಿಸುವ ಘಟನೆಯೂ ಆಗಾಗ್ಗೆ ನಡೆಯುತ್ತಿದೆ.
ಇದೀಗ ಇಂತಹದ್ದೇ ಒಂದು ಪ್ರಕರಣದಲ್ಲಿ ರೋಡ್ ರೋಮಿಯೋ ಒಬ್ಬನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. 2015ರಲ್ಲಿ ನಡೆದ ಘಟನೆಗೆ ಈಚೆಗೆ ಶಿಕ್ಷೆ ವಿಧಿಸಿದ್ದು, ಮಹಿಳೆಗೆ ನ್ಯಾಯ ಕಲ್ಪಿಸಿದೆ. ಇದನ್ನೂ ಓದಿ: ಅಕ್ರಮ ಸೇಂದಿ ಸಾಗಿಸುತ್ತಿದ್ದ ಐವರ ಬಂಧನ – 250 ಲೀಟರ್ ಜಪ್ತಿ
Advertisement
ಏನಿದು ಘಟನೆ?: 2015ರಲ್ಲಿ ಮುಂಬೈನ ಸ್ಥಳೀಯ ರೈಲಿನಲ್ಲಿ 37 ವರ್ಷದ ಗೋವಾ ಮೂಲದ ವ್ಯಕ್ತಿಯೊಬ್ಬ ಮಹಿಳೆಯನ್ನು ಕೆಲ ಕಾಲ ಗುರಾಯಿಸಿ ನೋಡಿ ಎದ್ದು ಹೋಗಬೇಕಾದರೆ ಥಟ್ಟನೆ ಆಕೆಯ ಕೆನ್ನೆಗೆ ಚುಂಬಿಸಿದ್ದಾನೆ. ಬಳಿಕ ಮಹಿಳೆ ನೀಡಿದ ದೂರಿನ ಮೇರೆಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮಹಿಳೆಯ ಮೇಲಿನ ದೌರ್ಜನ್ಯವೆಂದು ಪರಿಗಣಿಸಿ ಒಂದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
Advertisement
Advertisement
10 ಸಾವಿರ ದಂಡ: ಆರೋಪಿಗೆ ನ್ಯಾಯಾಲಯವು ಶಿಕ್ಷೆಯೊಂದಿಗೆ 10 ಸಾವಿರ ರೂ .ಗಳ ದಂಡವನ್ನು ವಿಧಿಸಿತ್ತು. ಅದರಲ್ಲಿ 5 ಸಾವಿರ ರೂ. ಮಹಿಳೆಗೆ ಪರಿಹಾರವಾಗಿ ನೀಡುವಂತೆ ನಿರ್ದೇಶಿಸಿತು. ಆರೋಪಿ ತನ್ನ ಹಿಂದಿನ ಪ್ರಯಾಣಿಕನು ತನ್ನನ್ನು ತಳ್ಳಿದ್ದಾನೆ ಮತ್ತು ಅವನು ಅವಳ ಮೇಲೆ ಬಿದ್ದಿದ್ದಾನೆ. ಅವನ ತುಟಿಗಳು ಅವಳ ಕೆನ್ನೆಯನ್ನು ಸ್ಪರ್ಶಿಸಿವೆ ಎಂದು ಆ ವ್ಯಕ್ತಿ ತನ್ನ ಸಮರ್ಥನೆಯಲ್ಲಿ ಹೇಳಿ ಕೊಂಡಿದ್ದನು. ಅವಳು ತಪ್ಪು ತಿಳುವಳಿಕೆಯಿಂದ ದೂರು ದಾಖಲಿಸಿದ್ದಾಳೆ ಎಂದು ಕೋರಿದ್ದರು. ಆರೋಪಿಯ ವಾದವನ್ನು ತಳ್ಳಿಹಾಕಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಇದನ್ನೂ ಓದಿ: ಇಂಡಿಗೋ ವಿಮಾನದಲ್ಲಿ ಕಾಣಿಸಿಕೊಂಡ ಹೊಗೆ – ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ
Advertisement
ಸಂತ್ರಸ್ತೆ ಹೇಳಿದ್ದೇನು?
ವಿಚಾರಣೆಯ ಸಮಯದಲ್ಲಿ ಸಂತ್ರಸ್ತೆ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದಳು ಮತ್ತು 2015 ಆಗಸ್ಟ್ 28 ರಂದು, ತನ್ನ ಸ್ನೇಹಿತನನ್ನು ಭೇಟಿಯಾಗಲು ಗೋವಂಡಿಗೆ ಹೋಗಿದ್ದೆ ಎಂದು ವಿವರಿಸಿದ್ದಳು. ಅಲ್ಲಿಂದ ಮಧ್ಯಾಹ್ನ 1.20ರ ಸುಮಾರಿಗೆ ಇಬ್ಬರೂ ಗೋವಂಡಿಯಿಂದ ರೈಲಿನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸಿದರು. ಈ ವೇಳೆ ಕೃತ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ಹೇಳಿದ್ದಾರೆ.