DistrictsKarnatakaLatestMain PostRaichur

ಅಕ್ರಮ ಸೇಂದಿ ಸಾಗಿಸುತ್ತಿದ್ದ ಐವರ ಬಂಧನ – 250 ಲೀಟರ್ ಜಪ್ತಿ

ರಾಯಚೂರು: ತೆಲಂಗಾಣದಿಂದ ರಾಯಚೂರಿಗೆ ಅಕ್ರಮವಾಗಿ ರೈಲಿನಲ್ಲಿ ಸಿಹೆಚ್ ಪೌಡರ್ ಸೇಂದಿ ಸಾಗಣೆ ಮಾಡುತ್ತಿದ್ದ ಐವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಾರೆ. ರಾಯಚೂರು ರೈಲ್ವೇ ನಿಲ್ದಾಣದಲ್ಲಿ ಪೊಲೀಸರು ದಾಳಿ ನಡೆಸಿ ಭಾರೀ ಪ್ರಮಾಣದ ಸೇಂದಿ ಜಪ್ತಿ ಮಾಡಿದ್ದಾರೆ.

ತೆಲಂಗಾಣದ ಕೃಷ್ಣಾ ರೈಲ್ವೇ ನಿಲ್ದಾಣದಿಂದ ರಾಯಚೂರಿಗೆ ತರಲಾಗುತ್ತಿದ್ದ 250 ಲೀ. ಕಲಬೆರಕೆ ಸಿಹೆಚ್ ಪೌಡರ್ ಸೇಂದಿ ಜಪ್ತಿ ಮಾಡಲಾಗಿದೆ. ಆರೋಪಿಗಳು ಸೇಂದಿಯನ್ನು ಬಾಟಲ್‌ಗಳಲ್ಲಿ ತುಂಬಿ ಮಾರಾಟಕ್ಕೆ ಅಕ್ರಮವಾಗಿ ತರುತ್ತಿದ್ದರು. ಅಂದಾಜು 80 ಸಾವಿರ ರೂ. ಮೌಲ್ಯದ ಕಲಬೆರಕೆ ಸೇಂದಿ ಜಪ್ತಿಯಾಗಿದೆ. ಇದನ್ನೂ ಓದಿ: RSS, ಭಜರಂಗದಳ ಬ್ಯಾನ್ ಮಾಡಲಿ: ಜಮೀರ್ ಅಹ್ಮದ್

ಆನಂದಮ್ಮ, ತಾಯಮ್ಮ, ಸುಬ್ಬಲಕ್ಷ್ಮೀ, ರಾಮಾಂಜನೇಯ ಹಾಗೂ ರಾಜು ಬಂಧಿತ ಆರೋಪಿಗಳು. ಇವರಲ್ಲಿ ಸುಬ್ಬಲಕ್ಷ್ಮೀ, ರಾಮಾಂಜನೇಯ ಹಾಗೂ ರಾಜು ಈಗಾಗಲೇ ತಲಾ ಎರಡೆರಡು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇದನ್ನೂ ಓದಿ: ಬೆಲೆ ಏರಿಸುತ್ತಿರುವ ಈ ಸರ್ಕಾರ ಒಂದು ರೀತಿ ಕೋಲ್ಡ್‌ಬ್ಲಡೆಡ್ ಹಂತಕನಿದ್ದಂತೆ: ದಿನೇಶ್ ಗುಂಡೂರಾವ್

ಆರೋಪಿಗಳು ನಗರದ ರಾಗಿಮಾನಗಡ್ಡ, ಸ್ಟೇಷನ್ ಏಷಿಯಾ ನಿವಾಸಿಗಳಾಗಿದ್ದಾರೆ. ಆರ್‌ಪಿಎಫ್, ರೈಲ್ವೇ ಪೊಲೀಸ್, ನಗರದ ಪಶ್ಚಿಮ ಠಾಣೆ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

Leave a Reply

Your email address will not be published.

Back to top button