ತಂದೆಯೊಬ್ಬ ತನ್ನ ಮಗಳನ್ನು ಸರ್ಪ್ರೈಸ್ ಆಗಿ ನೋಡಲು ಹೋದ ಹೃದಯಸ್ಪರ್ಶಿ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡಿದ ಬಳಿಕ ಎಂಥವರ ಮನಸ್ಸು ಕೂಡ ಒಂದು ಬಾರಿ ಕರಗುತ್ತದೆ. ತಂದೆ-ಮಗಳ ಬಾಂಧವ್ಯದ ಈ ವಿಡಿಯೋ ನೋಡಿ ಎಲ್ಲರೂ ಕಣ್ಣೀರಾಕಿದ್ದಾರೆ.
ಹೌದು. ಮಗಳಿಗೆ ಸರ್ಪ್ರೈಸ್ ಕೊಡಲೆಂದೇ ತಂದೆ ಭಾರತದಿಂದ ಕೆನಡಾಗೆ ತೆರಳಿದ್ದಾರೆ. ಅಲ್ಲಿ ಆಕೆ ಕೆಲಸ ಮಾಡುತ್ತಿದ್ದ ಕಚೇರಿಗೆ ತೆರಳಿ ಮಗಳಿಗೆ ಶಾಕ್ ಕೂಡ ಕೊಟ್ಟಿದ್ದಾರೆ. ತಂದೆ ತಾನು ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಎಂಟ್ರಿ ಕೊಡುತ್ತಿದ್ದಂತೆಯೇ ಶಾಕ್ ಹಾಗೂ ಅಚ್ಚರಿಗೊಳಗಾದ ಮಗಳು ಕಣ್ಣಿಗೆ ಕೈ ಇಟ್ಟು ಅಲ್ಲಿಯೇ ಕುಳಿತಿದ್ದಾಳೆ. ಬಳಿಕ ಹತ್ತಿರ ಬಂದ ತಂದೆಯನ್ನು ತಬ್ಬಿಕೊಂಡು ಆನಂದಭಾಷ್ಪ ಸುರಿಸಿದ್ದಾಳೆ. ತಂದೆ ಕೂಡ ಮುದ್ದಿನ ಮಗಳನ್ನು ಅಪ್ಪಿಕೊಂಡು ಕಣ್ಣೀರು ಹಾಕಿದ್ದಾರೆ. ಇದರ ಸಂಪೂರ್ಣ ವೀಡಿಯೋವನ್ನು ಮಗಳು ತಮ್ಮ ಇನ್ ಸ್ಟಾ (Instagram) ದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾಳೆ. ಇದನ್ನೂಓದಿ: ಬೆಂಗ್ಳೂರಿನಲ್ಲಿ ಕಣಕ್ಕಿಳಿಯುತ್ತಾ ಪಾಕ್ ತಂಡ – ಭದ್ರತೆ ಕಾರಣ ನೀಡಿದ್ರೆ ಸ್ಥಳ ಬದಲಾವಣೆ ಮಾಡಬಹುದು ಎಂದ ಅಶ್ವಿನ್
View this post on Instagram
ಅಲ್ಲದೆ ತಂದೆ ತನಗೆ ಸರ್ಪ್ರೈಸ್ ಕೊಟ್ಟ ಬಗ್ಗೆಯೂ ಶ್ರುತ್ವಾ ದೇಸಾಯಿ ಬರೆದುಕೊಂಡಿದ್ದಾಳೆ. ಭಾರತದಿಂದ ಕೆನಡಾಕ್ಕೆ ಭೇಟಿ ನೀಡುವ ಮೂಲಕ ನನ್ನ ತಂದೆ ನನ್ನನ್ನು ಆಶ್ಚರ್ಯಗೊಳಿಸಿದರು. ಇದು ನಾನು ಯಾವಾಗಲೂ ಪ್ರೀತಿಸುವ ಅತ್ಯಂತ ಅದ್ಭುತ ಕ್ಷಣವಾಗಿತ್ತು. ನನ್ನ ತಂದೆ ಬಾಗಿಲಿನ ಮೂಲಕ ನಡೆದುಕೊಂಡು ಒಳಬಂದಾಗ ನಾನು ಸಂಪೂರ್ಣವಾಗಿ ಆಘಾತಕ್ಕೊಳಗಾಗಿದ್ದೆ. ಅಲ್ಲದೆ ಖುಷಿಯಿಂದ ಕಣ್ಣೀರೇ ಬಂತು. ನನ್ನನ್ನು ನೋಡುವುದಕ್ಕಾಗಿಯೇ ಅವರು ಕೆನಡಾ(Canada) ಕ್ಕೆ ಬಂದಿದ್ದಾರೆ ಎಂದರೆ ನನಗೆ ನಂಬಲು ಅಸಾಧ್ಯವಾಗಿತ್ತು. ಇಂತಹ ತಂದೆಯನ್ನು ಪಡೆಯಲು ನಿಜಕ್ಕೂ ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ನಾನು ನಿಮ್ಮನ್ನು ತುಂಬಾಪ್ರೀತಿಸುತ್ತೇನೆ ಅಪ್ಪ ಎಂದು ಬರೆದುಕೊಂಡಿದ್ದಾಳೆ.
ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ತಂದೆ-ಮಗಳ ಬಾಂಧವ್ಯಕ್ಕೆ ನೆಟ್ಟಿಗರು ಮಾರು ಹೋಗಿದ್ದಾರೆ. ಹಲವಾರು ಕಾಮೆಂಟ್‍ಗಳು ಬಂದಿವೆ. ಈ ವೀಡಿಯೋ 1.6 ಮಿಲಿಯನ್ ವ್ಯೂವ್ಸ್ ಪಡೆದುಕೊಂಡಿದೆ. ಅಲ್ಲದೆ 198ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಅನೇಕರು ಅಪ್ಪ-ಮಗಳಿಗೆ ಶುಭಹಾರೈಸಿದ್ದಾರೆ.