ಬೆಂಗಳೂರು: ಗಾಂಜಾ ಮತ್ತಿನಲ್ಲಿ ಪತಿ ಮಹಾಶಯನೊಬ್ಬ ತಾನು ಪ್ರೀತಿಸಿ ಮದುವೆಯಾದ ಪತ್ನಿ ಮೇಲೆಯೇ ಚಾಕುವಿನಿಂದ ಮನಬಂದಂತೆ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ.
ಹಲ್ಲೆಗೊಳಗಾದ ಮಹಿಳೆಯನ್ನು ಜಯಲಕ್ಷ್ಮಿ ಎಂದು ಗುರುತಿಸಲಾಗಿದೆ. ಈಕೆ ಜಗದೀಶ್‍ನನ್ನು ಪ್ರೀತಿಸಿ ಕೈಹಿಡಿದಿದ್ದಳು. ಆದರೆ ಇದೀಗ ಗಾಂಜಾ ಮತ್ತಿನಲ್ಲಿ ಪತ್ನಿ ಮೇಲೆ ಸಂಶಯಗೊಂಡು ಚಿತ್ರಹಿಂಸೆ ನೀಡಿದ್ದಾನೆ. ನೀನು ಚೆನ್ನಾಗಿದ್ರೆ ತಾನೇ ಬೇರೆಯವರು ನೋಡೋದು ಎಂದು ಚಾಕುವಿನಿಂದ ಮನಬಂದಂತೆ ಹಲ್ಲೆ ನಡೆಸಿದ್ದಾನೆ.
ಕಳೆದ ಒಂದೂವರೆ ವರ್ಷದ ಹಿಂದೆ ಇವರಿಬ್ಬರು ಮದುವೆಯಾಗಿದ್ದಾರೆ. ಜಯಲಕ್ಷ್ಮಿ ಖಾಸಗಿ ಆಸ್ಪತ್ರೆಯೊಂದ್ರಲ್ಲಿ ಕೆಲಸ ಮಾಡುತ್ತಿದ್ದಾರೆ. ಪತಿ ಜಗದೀಶ್ ಗಾಂಜಾ ವ್ಯಸನಿಯಾಗಿದ್ದು, ಇದೀಗ ಆಕೆಯ ಶೀಲ ಶಂಕಿಸಿ ಪ್ರತಿನಿತ್ಯ ಹಲ್ಲೆ ಮಾಡುತ್ತಿದ್ದಾನೆ. ಬರಿಗೈಲಿ ಮಾತ್ರವಲ್ಲದೇ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದಾಗಿ ಜಯಲಕ್ಷ್ಮಿ ಕಿವಿ, ಕುತ್ತಿಗೆ, ತಲೆಗೆ ಗಂಭೀರ ಗಾಯಗಳಾಗಿವೆ.
ಪತಿಯ ಹಿಂಸೆಯಿಂದ ರೋಸಿ ಹೋದ ಪತ್ನಿ ಇದೀಗ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಭಾರತದ ಅಭಿವ್ಯಕ್ತಿ ಸ್ವಾತಂತ್ರ್ಯ ವಿಚಾರವಾಗಿ ಟ್ವಿಟ್ಟರ್ ತಲೆಹಾಕಿದ್ರೆ ಕ್ರಮಕೈಗೊಳ್ಳಿ: ಶಶಿ ತರೂರ್