ಭೋಪಾಲ್: ಬಾಡಿಗೆ ಮನೆಯಲ್ಲಿ ವಾಸವಾಗಿರುವ ಮುಸ್ಲಿಂ ವ್ಯಕ್ತಿಯೊಬ್ಬ ಮನೆಯಲ್ಲಿ ಮೋದಿ ಫೋಟೋ ಹಾಕಿದ್ದಕ್ಕೆ ಮಾಲೀಕ ಬೆದರಿಕೆ ಹಾಕಿದ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.
ವ್ಯಕ್ತಿಯನ್ನು ಯೂಸುಫ್ ಎಂದು ಗುರುತಿಸಲಾಗಿದೆ. ಇವರು ಪೀರ್ ಗಲಿ ಪ್ರದೇಶದಲ್ಲಿ ವಾಸವಾಗಿದ್ದಾರೆ. ಮಾಲೀಕ ಬೆದರಿಕೆ ಹಾಕುತ್ತಿದ್ದಂತೆಯೇ ವ್ಯಕ್ತಿ ಜಾನ್‍ಸುನ್‍ವಾಯಿ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ದೂರು ನೀಡಿದ್ದಾರೆ. ನಾನು ಪ್ರಧಾನಿ ನರೇಂದ್ರ ಮೋದಿಯವರ ಅಪ್ಪಟ ಅಭಿಮಾನಿಯಾಗಿದ್ದೇನೆ. ಹೀಗಾಗಿ ಮನೆಯಲ್ಲಿ ಅವರ ಫೋಟೋ ಇಟ್ಟಿದ್ದೆ. ಇದನ್ನು ಗಮನಸಿರುವ ಮಾಲೀಕ ನನಗೆ ಬೆದರಿಕೆ ಹಾಕುತ್ತಿರುವುದಾಗಿ ದೂರಿದ್ದಾರೆ.
Advertisement
Advertisement
ಶರೀಫ್, ಯಾಕೂಬ್ ಹಾಗೂ ಸುತಾನ್ ಎಂಬ ಮೂವರು ಕೆಲ ದಿನಗಳಿಂದ ನನ್ನ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ. ಅಲ್ಲದೆ ಮನೆಯಲ್ಲಿರುವ ಮೋದಿ ಫೋಟೋ ತೆಗೆಯುವಂತೆ ಒತ್ತಡ ಹಾಕುತ್ತಿದ್ದಾರೆ. ರಂಜಾನ್ ಒಳಗಡೆ ಫೋಟೋ ತೆಗೆಯಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಆದರೆ ನಾನು ಮೋದಿ ಫೋಟೋ ತೆಗೆಯಲು ಒಪ್ಪಿಗೆ ನಿಡಲಿಲ್ಲ. ಈ ವೇಳೆ ಅವರು, ನೀನು ಫೋಟೋ ತೆಗೆಯದಿದ್ದರೆ ಮನೆಯಿಂದ ಆಚೆ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ನಾನು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರೂ ಅವರು ಕ್ಯಾರೇ ಎಂದಿಲ್ಲ ಎಂದು ಯೂಸುಫ್ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಎದೆ ಹಾಲಿನಿಂದ ಆಭರಣ ತಯಾರಿಸಿ ಮಾರಾಟ ಮಾಡುವ ಮಹಿಳೆ
Advertisement
Advertisement
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಯೂಸುಫ್, ನಾನು ನರೇಂದ್ರ ಮೋದಿಯವರ ಅಪ್ಪಟ ಅಭಿಮಾನಿ. ಮೋದಿ ಹಾಗೂ ಸಂಘ ಪರಿವಾರದ ಪುಸ್ತಕಗಳನ್ನು ಓದಿದ್ದೇನೆ. ಹೀಗಾಗಿ ನಾನು ಮೋದಿಯವರ ಫೋಟೋವನ್ನು ಮನೆಯಲ್ಲಿ ಇಟ್ಟಿದ್ದೇನೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಲಿಖಿತ ದೂರು ನೀಡಿದ್ದೇನೆ. ಈ ಸಂಬಂಧ ತನಿಖೆ ನಡೆಸುತ್ತಾರೆ ಎಂದು ನಂಬಿರುವುದಾಗಿ ಆತ ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್ ಧರಿಸಿ ಪರೀಕ್ಷೆಗೆ ಅವಕಾಶ- 7 ಮಂದಿ ಅಮಾನತು