ನವದೆಹಲಿ: ತಂದೆ-ಮಗಳ ಬಾಂಧವ್ಯ ಮಧುರವಾದದ್ದು, ಆಕೆ ಕೇಳಿದನ್ನೆಲ್ಲಾ ಕೊಡಿಸುವ, ಆಕೆಯ ಆಸೆ, ಕನಸುಗಳನ್ನು ಈಡೇರಿಸುವ, ಅವಳ ಭವಿಷ್ಯಕ್ಕಾಗಿ ಹಗಲಿರುಳು ದುಡಿಯುವ ಶ್ರಮ ಜೀವಿ ಎಂದರೆ ಅದು ಅಪ್ಪ. ಸದಾ ಅವಳ ಬೆನ್ನುಲುಬಾಗಿ ನಿಂತು, ಬೆಂಬಲ ಹಾಗೂ ಪ್ರೋತ್ಸಾಹ ನೀಡುವ ತಂದೆಯೇ ಮಗಳಿಗೆ ಮೊದಲ ಹೀರೋ. ತಂದೆ-ಮಗಳ ಬಾಂಧವ್ಯ ಗಟ್ಟಿಯಾದರೆ, ಅದು ಮಗಳ ಭವಿಷ್ಯಕ್ಕೆ ಭದ್ರವಾದ ಬುನಾದಿ ಹಾಕಿದಂತೆ. ಆಕೆಯ ಬದುಕಿನಲ್ಲಿ ಇದರಿಂದ ಹೆಚ್ಚುವರಿ ಲಾಭಗಳಾದರೆ, ತಂದೆಯೂ ಸವಿನೆನಪಿನ ಬುತ್ತಿ ಹೊತ್ತು ಸಾಗಬಹುದು. ಸದ್ಯ ತಂದೆ ಮಗಳ ಬಾಂಧವ್ಯ ಎಷ್ಟು ಗಾಢವಾಗಿರುತ್ತದೆ ಎಂಬುವುದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೋ ಮತ್ತೊಂದು ಸಾಕ್ಷಿ ಎಂದೇ ಹೇಳಬಹುದು.
Advertisement
ಹೌದು, ಮೊದಲ ಬಾರಿಗೆ ಮಗಳನ್ನು ಕಾಲೇಜಿಗೆ ಬಿಡಲು ಹೋಗುವಾಗ ತಂದೆಯೊಬ್ಬ ದಾರಿಯುದ್ದಕ್ಕೂ ಗಳಗಳನೇ ಅಳುತ್ತಿರುವ ಭಾವನಾತ್ಮಕ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವೀಡಿಯೋವನ್ನು ಪ್ರೇಕ್ಷ ಅವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಬಹಳ ದಿನದಿಂದ ನಾನು ಕನಸ್ಸು ಹೊಂದಿದ್ದ ಮಿರಾಂಡಾ ಹೌಸ್ ಕಾಲೇಜ್ (Miranda House College), ದೆಹಲಿ ವಿಶ್ವವಿದ್ಯಾಲಯಕ್ಕೆ (Delhi University) ನನ್ನನ್ನು ಬಿಡಲು ಪೋಷಕರು ಬಂದಿದ್ದರು. ಮೊದಲ ಬಾರಿಗೆ ಕಾಲೇಜಿಗೆ ಹೋಗುತ್ತಿದ್ದರಿಂದ ಕಾಲೇಜಿನ ಕ್ಯಾಂಪಸ್ ನೋಡಲು ನನ್ನ ಜೊತೆಯಲ್ಲೇ ಬರುತ್ತಿದ್ದ ವೇಳೆ, ಇದ್ದಕ್ಕಿದ್ದಂತೆ ನನ್ನ ತಂದೆಯ ಕಣ್ಣುಗಳಲ್ಲು ಕಣ್ಣೀರು ಬರುತ್ತಿರುವುದನ್ನು ಗಮನಿಸಿದೆ.
Advertisement
View this post on Instagram
Advertisement
ಅವರು ಸಂತಸದ ಅಲೆಯಲ್ಲಿ ಮುಗಿದ್ದರು. ಅವರ ಭಾವನೆಗಳು ಹೇಳ ತೀರದ್ದು. ನಾನು ಮಾಡಿದ ಎಲ್ಲಾ ತ್ಯಾಗ, ಶ್ರಮದಿಂದ ಇಂದು ಇಂದು ಕನಸು ನನಸಾಗುತ್ತಿದೆ. ಕೊನೆಗೂ ಪ್ರತಿಯೊಂದು ಇಂದಿಗೆ ಸಾರ್ಥಕವಾಯಿತು ಎಂಬುವುದು ಅವರ ಕಣ್ಣಿನಲ್ಲಿ ಕಾಣಿಸುತ್ತಿತ್ತು. ನಿಮ್ಮ ನಗು ಮುಖ ಮತ್ತು ಕಾಂತಿಯ ಕಣ್ಣುಗಳನ್ನು ನೋಡಲು ನಾನು ಏನು ಬೇಕಾದರೂ ಮಾಡುತ್ತೇನೆ ಅಂತ ಮಾತ್ರ ನಾನು ಹೇಳಬಲ್ಲೇ. ಧನ್ಯವಾದಗಳು ಅಪ್ಪ, ಅಪ್ಪ. ಐ ಲವ್ ಯೂ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಔಷಧ ಬೆರೆಸಿದ ಸೇಬು ನೀಡಿ ಮಕ್ಕಳ ಮೇಲೆ ರೇಪ್- ಮುರುಘಾಶ್ರೀ ವಿರುದ್ಧ 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ
Advertisement
ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಎಂಟು ಮಿಲಿಯನ್‍ಗಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದು, 958,000ಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಜೊತೆಗೆ ತಂದೆ, ಮಗಳ ಬಾಂಧವ್ಯಕ್ಕೆ ಮನಸೋತ ನೆಟ್ಟಿಗರಿಂದ ಕಾಮೆಂಟ್‍ಗಳ ಸುರಿಮಳೆಯೇ ಹರಿದುಬರುತ್ತಿದೆ. ಇದನ್ನೂ ಓದಿ: ಮೇಲ್ವರ್ಗದ ಬಡವರಿಗೆ ಶೇ.10 ಮೀಸಲಾತಿ ಅಳಿವು-ಉಳಿವು- ಇಂದು ಸುಪ್ರೀಂನಲ್ಲಿ ನಿರ್ಧಾರ