LatestMain PostNational

ಮಲಗಿದ್ದ ತಾಯಿಯ ಪಕ್ಕದಿಂದ ಮಗು ಕದ್ದು ಓಡಿದ – ಖತರ್ನಾಕ್ ಕಳ್ಳನ ವೀಡಿಯೋ ವೈರಲ್

ಲಕ್ನೋ: ತಾಯಿಯ ಪಕ್ಕದಲ್ಲಿ ಮಲಗಿದ್ದ 7 ತಿಂಗಳ ಮಗುವನ್ನು ವ್ಯಕ್ತಿಯೋರ್ವ ಅಪರಿಸಿರುವ ಘಟನೆ ಮಥುರಾ ರೈಲು ನಿಲ್ದಾಣದ ಪ್ಲಾಟ್‍ಫಾರ್ಮ್‍ನಲ್ಲಿ ನಡೆದಿದೆ.

ಈ ಘಟನೆಯ ವೀಡಿಯೋ ಅಲ್ಲಿಯೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ತನ್ನ ತಾಯಿಯೊಂದಿಗೆ ಮಲಗಿದ್ದ ಮಗುವನ್ನು ಕದ್ದು ವ್ಯಕ್ತಿ ಎಸ್ಕೇಪ್ ಆಗುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಮೊದಲಿಗೆ ಎಲ್ಲರೂ ಮಲಗಿರುವುದನ್ನು ಗಮನಿಸಿದ ವ್ಯಕ್ತಿ ಒಂದೆರಡು ಬಾರಿ ಸುತ್ತಲೂ ಓಡಾಡಿದ್ದಾನೆ. ನಂತರ ಮತ್ತೆ ಹಿಂದಿರುಗಿ ಬಂದು ಮಗುವನ್ನು ನಿಧನವಾಗಿ ಎತ್ತಿಕೊಂಡು ಅಲ್ಲಿಂದ ಓಡಿ ಹೋಗಿದ್ದಾನೆ.

ಇದೀಗ ನಾಪತ್ತೆಯಾಗಿರುವ ಮಗುವನ್ನು ಪತ್ತೆ ಹಚ್ಚಲು ಪೊಲೀಸರು ಹಲವು ತಂಡಗಳನ್ನು ರಚಿಸಿದ್ದಾರೆ. ಅಲ್ಲದೇ ಪ್ರಕರಣ ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಜಿಆರ್‌ಪಿ ಪೊಲೀಸ್ ಠಾಣೆಯಲ್ಲಿ ಮಥುರಾ ಜೆಎನ್‍ನಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಆರಂಭಿಸಿರುವುದಾಗಿ ಮಥುರಾ ಪೊಲೀಸರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ಮಂಗಳೂರಿನಲ್ಲೂ ರಸ್ತೆಗುಂಡಿಗಳ ದರ್ಬಾರ್- ಹೊಂಡ ಫೋಟೋ ಕಳಿಸಿದ್ರೆ ಸಿಗುತ್ತೆ ಬಹುಮಾನ

ಪೊಲೀಸರು ಆರೋಪಿಯ ಫೋಟೋವನ್ನು ಸಹ ಬಿಡುಗಡೆ ಮಾಡಿದ್ದು, ಆತನ ಬಗ್ಗೆ ಮಾಹಿತಿ ಗೊತ್ತಾದರೆ ಪೊಲೀಸರಿಗೆ ತಿಳಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಮಥುರಾ ಜೊತೆಗೆ ಉತ್ತರ ಪ್ರದೇಶದ ಅಲಿಗಢ್ ಮತ್ತು ಹತ್ರಾಸ್‍ನಲ್ಲಿ ರೈಲ್ವೇ ಪೊಲೀಸರ ತಂಡಗಳು ಕೂಡ ಮಗುವಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ ಮುಂದಿನ 3 ಗಂಟೆಗಳ ಕಾಲ ಭಾರೀ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ

Live Tv

Leave a Reply

Your email address will not be published.

Back to top button