Dakshina KannadaDistrictsKarnatakaLatestMain Post

ಮಂಗಳೂರಿನಲ್ಲೂ ರಸ್ತೆಗುಂಡಿಗಳ ದರ್ಬಾರ್- ಹೊಂಡ ಫೋಟೋ ಕಳಿಸಿದ್ರೆ ಸಿಗುತ್ತೆ ಬಹುಮಾನ

- ಈವರೆಗೂ ಬಂದಿದೆ 800ಕ್ಕೂ ಹೆಚ್ಚು ಫೋಟೋಸ್

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಡಾಂಬರು ರಸ್ತೆಯಲ್ಲಿ ಹೊಂಡ- ಗುಂಡಿಗಳಿಂದ ತುಂಬಿ ಹೋಗಿದೆ. ರಸ್ತೆಗಳ ದುರವಸ್ಥೆ ಬಗ್ಗೆ ವ್ಯಾಪಕ ಟೀಕೆಗೆ ಗುರಿಯಾಗುತ್ತಿದೆ. ಹೀಗಾಗಿ ಸ್ಮಾರ್ಟ್ ಸಿಟಿಯ ಮಾದರಿ ರಸ್ತೆಗಳಲ್ಲಿ ಗುಂಡಿಗಳನ್ನು ಗುರುತಿಸುವ ವಿಶಿಷ್ಟ ಸ್ಪರ್ಧೆ ಏರ್ಪಡಿಸಲಾಗಿದೆ.

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಹೆಚ್ಚಿನ ರಸ್ತೆಗಳಲ್ಲಿ ಎಲ್ಲಿ ನೋಡಿದ್ರೂ ಗುಂಡಿಗಳದ್ದೇ ಕಾರುಬಾರು. ಕಾಂಕ್ರೀಟ್ ರಸ್ತೆಗಳನ್ನು ಹೊರತುಪಡಿಸಿ ಒಳ ರಸ್ತೆಗಳಲ್ಲೂ ಗುಂಡಿಗಳದ್ದೇ ಮೇಲುಗೈ. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಹಲವಾರು ರಸ್ತೆಗಳು ಹೊಂಡಮಯವಾಗಿದೆ. ಇದೇ ಹೊಂಡಗಳಿಂದಾಗಿ ಈವರೆಗೆ ಮೂವರು ಉಸಿರು ಬಿಟ್ಟಿದ್ದಾರೆ. ಇನ್ನೂ ಕೆಲವರು ಗಂಭೀರ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಕೋಳಿ ಕೇಳಿ ಮಸಾಲೆ ಅರೆಯೋಕೆ ಆಗುತ್ತಾ- ಜಮೀರ್‌ಗೆ ಆರ್.ಅಶೋಕ್ ಟಾಂಗ್

ಇದರಿಂದ ಪಾರಾಗಲು ಪಾಲಿಕೆ ಒಂದು ಉಪಾಯ ಕಂಡುಕೊಂಡಿದೆ. ಅದೇನೆಂದರೆ ದೊಡ್ಡ ಮತ್ತು ಅಪಾಯಕಾರಿ ರಸ್ತೆ ಗುಂಡಿಗಳನ್ನು ಗುರುತಿಸಿದವರಿಗೆ ಬಹುಮಾನ ನೀಡುವ ಮೂಲಕ ಜನಜಾಗೃತಿ ಮೂಡಿಸಲು ಸ್ಪರ್ಧೆ ಹಮ್ಮಿಕೊಂಡಿದೆ. ಬೃಹತ್ ಹೊಂಡಗಳ ಫೋಟೋ ಅಥವಾ ವೀಡಿಯೋ ತೆಗೆದು ಅದರ ಲೊಕೇಷನ್‍ನೊಂದಿಗೆ 9731485875 ನಂಬರ್ ಗೆ ವಾಟ್ಸಪ್ ಮಾಡಲು ಸೂಚಿಸಲಾಗಿದೆ. ಆಗಸ್ಟ್ 23ರಂದು ಈ ಸ್ಪರ್ದೆಗೆ ಚಾಲನೆ ನೀಡಲಾಗಿದ್ದು ಈವರೆಗೆ 800 ಫೋಟೋ ವಿಡಿಯೋಗಳನ್ನು ಜನರು ಕಳುಹಿಸಿ ಕೊಟ್ಟಿದ್ದಾರೆ. ಮೂರು ಧರ್ಮದ ತೀರ್ಪುಗಾರರು ಆಯ್ಕೆ ಮಾಡಲಿದ್ದಾರೆ.

ಪ್ರಥಮ ಬಹುಮಾನ 5,000 ರೂಪಾಯಿ, ದ್ವಿತೀಯ 3,000, ಹಾಗೂ ತೃತೀಯ 2,000 ರೂಪಾಯಿ ನಿಗದಿ ಮಾಡಲಾಗಿದೆ. ವಿಜೇತರಿಗೆ ಸೆಪ್ಟೆಂಬರ್ 30ರಂದು ಪಾಲಿಕೆಯ ಸ್ಮಾರ್ಟ್ ಸಿಟಿ ಯೋಜನೆ ಕಚೇರಿಯ ಮುಂದೆ ಬಹುಮಾನ ವಿತರಿಸಲು ತೀರ್ಮಾನಿಸಲಾಗಿದೆ.

Live Tv

Leave a Reply

Your email address will not be published.

Back to top button