ಬಿಜೆಪಿ ಮುಖಂಡನಿಂದ ಶಿಷ್ಯನಿಗೆ ಚಾಕು ಇರಿತ – ಮಾಜಿ ಕಾರ್ಪೋರೇಟರ್ ವಿರುದ್ಧ ಎಫ್‍ಐಆರ್

Public TV
1 Min Read
ATTEMPT TO MURDER

ಬೆಂಗಳೂರು: ತಾನೇ ಬೆಳಸಿದ್ದ ಶಿಷ್ಯನ ಮೇಲೆ ರಾಜಕೀಯ ನಾಯಕನೊಬ್ಬ ಹಗೆತನ ಸಾಧಿಸಿ ಚಾಕು ಇರಿದ ಘಟನೆ ನಗರದಲ್ಲಿ ನಡೆದಿದೆ.

ಮಾತುಕತೆಗೆ ಎಂದು ಕರೆದು ಚಾಕು ಇರಿದು ಮಾಜಿ ಕಾರ್ಪೋರೇಟರ್ ತಲೆ ಮರೆಸಿಕೊಂಡಿದ್ದಾನೆ. ಬಿಜೆಪಿಯ (BJP) ಮುಖಂಡ ಬಿನ್ನಿಪೇಟೆ ವಾರ್ಡ್‍ನ ಮಾಜಿ ಕಾರ್ಪೋರೇಟರ್ ಬಿಟಿಎಸ್ ನಾಗರಾಜ್ ಎಂಬಾತ ಬಾಬು ಎಂಬುವವರಿಗೆ ಚಾಕು ಇರಿದಿದ್ದಾನೆ. ರಾಜಾಜಿನಗರ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಫ್ರೆಂಡ್ಸ್ ಕ್ಲಬ್ ಬಳಿ ಬಾಬು ಅವರನ್ನು ಕರೆಸಿಕೊಂಡು ಕೃತ್ಯ ಎಸಗಲಾಗಿದೆ. ಬಟನ್ ಚಾಕುವಿನಿಂದ ಹೊಟ್ಟೆಗೆ ಇರಿಯಲಾಗಿದ್ದು ಬಾಬು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಟೆಂಟ್ ನಡೆಸ್ತಿದ್ದವರು ಇಂದು 1,450 ಕೋಟಿ ಒಡೆಯರು, ಅನಧಿಕೃತ ಎಷ್ಟಿದೆಯೋ? – ಡಿಕೆ ಬ್ರದರ್ಸ್ ವಿರುದ್ಧ ಹೆಚ್‌ಡಿಕೆ ಕಿಡಿ

ಬಾಬು ಎಂಬುವವರು ಬಿಟಿಎಸ್ ನಾಗರಾಜುವಿನ ಶಿಷ್ಯರಾಗಿದ್ದರು. ನಾಗರಾಜ್‌ನ ಎಲ್ಲಾ ಕೆಲಸಗಳನ್ನ ಬಾಬು ಅವರೇ ನೋಡಿಕೊಳ್ಳುತ್ತಿದ್ದರು. ಯಾವ ಕಾರಣದಿಂದ ಚಾಕು ಇರಿದಿದ್ದಾರೆ ಎಂಬುದು ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಬಿಜೆಪಿ ಮುಖಂಡ ನಾಗರಾಜ್ ಮೇಲೆ ಮಾಗಡಿ ರೋಡ್ ಪೊಲೀಸ್ (Police) ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಆರೋಪಿಯ ಬಂಧನಕ್ಕೆ ಎರಡು ತಂಡಗಳನ್ನು ರಚಿಸಲಾಗಿದ್ದು, ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ – ವಾಣಿಜ್ಯ ತೆರಿಗೆಯ ಇಲಾಖೆಯ ಚಾಲಕ ಸಾವು

Web Stories

Share This Article