ಭೋಪಾಲ್: ವ್ಯಕ್ತಿಯೊಬ್ಬ (Man) ತನ್ನ ಗೆಳತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಆಕೆಯ ಶವದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ( Madhya Pradesh) ನಡೆದಿದೆ.
ಶಿಲ್ಪಾ ಝರಿಯಾ (25) ಮೃತ ಮಹಿಳೆ. ಜಬಲ್ಪುರದ ಮೇಖ್ಲಾ ರೆಸಾರ್ಟ್ನಲ್ಲಿರುವ ಕೊಠಡಿಯಲ್ಲಿ ಶಿಲ್ಪಾಳನ್ನು ಅಭಿಜಿತ್ ಎಂಬಾತ ಕರೆಸಿಕೊಂಡಿದ್ದಾನೆ. ನಂತರ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದ ಅಭಿಜಿತ್ ಆಕೆಯ ಶವದೊಂದಿಗಿನ ಸರಣಿ ವೀಡಿಯೋವನ್ನು (Video) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ.
ವೀಡಿಯೋದಲ್ಲಿ ಏನಿದೆ?: ವೀಡಿಯೋದಲ್ಲಿ ಶಿಲ್ಪಾ ರಕ್ತ ಸಿಕ್ತವಾಗಿ ಮಂಚದ ಮೇಲೆ ಮಲಗಿರುವುದನ್ನು ಆತ ತೋರಿಸುತ್ತಾನೆ. ನಂತರ ಮಾತನಾಡಿರುವ ಆತ ಯಾರಿಗೂ ನಂಬಿಕೆ ದ್ರೋಹ ಮಾಡಬೇಡಿ ಎಂದು ತಿಳಿಸಿದ್ದಾನೆ.
ಮತ್ತೊಂದು ವೀಡಿಯೋದಲ್ಲಿ ಅಭಿಜಿತ್ ತನ್ನನ್ನ ಪಾಟ್ನಾದ ವ್ಯಾಪಾರಿ ಎಂದು ಗುರುತಿಸಿಕೊಂಡಿದ್ದಾನೆ. ಜಿತೇಂದ್ರ ಎಂಬಾತ ತನ್ನ ಪಾಟ್ನರ್ ಆಗಿದ್ದ. ಆದರೆ ಶಿಲ್ಪಾ ಇಬ್ಬರೊಂದಿಗೆ ಸಂಬಂಧವನ್ನು ಹೊಂದಿದ್ದಳು ಎಂದು ಆರೋಪಿಸುತ್ತಾನೆ.
ಶಿಲ್ಪಾ ಜಿತೇಂದ್ರನ ಬಳಿ ಸುಮಾರು 12 ಲಕ್ಷ ರೂ. ಸಾಲ ಪಡೆದು ಜಬಲ್ಪುರಕ್ಕೆ ಪರಾರಿಯಾಗಿದ್ದಳು. ಈ ಹಿನ್ನೆಲೆಯಲ್ಲಿ ಜೀತೇಂದ್ರ ನನಗೆ ಎಲ್ಲ ವಿಷಯವನ್ನು ತಿಳಿಸಿದ್ದು, ಜೀತೇಂದ್ರನ ಸೂಚನೆ ಮೇರೆಗೆ ಶಿಲ್ಪಾಳನ್ನು ಕೊಲೆ ಮಾಡಿದ್ದೇನೆ. ನಾವು ಮತ್ತೆ ಸ್ವರ್ಗದಲ್ಲಿ ಭೇಟಿಯಾಗುತ್ತೇವೆ ಎಂದು ತಿಳಿಸಿದ್ದಾನೆ. ಇದನ್ನೂ ಓದಿ: ಈ ಶಾಲೆಯಲ್ಲಿ 100 ವಿದ್ಯಾರ್ಥಿಗಳು ಏಕಕಾಲದಲ್ಲಿಯೇ ಎರಡು ಕೈಯಲ್ಲೂ ಬರೀತಾರೆ!
ಘಟನೆಗೆ ಸಂಬಂಧಿಸಿ ಜಬಲ್ಪುರದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಶಿಲ್ಪಾಳ ಮೃತದೇಹವನ್ನು ಮೇಖ್ಲಾ ರೆಸಾರ್ಟ್ನಲ್ಲಿರುವ ಕೊಠಡಿಯಿಂದ ವಶಪಡಿಸಿಕೊಳ್ಳಲಾಗಿದೆ. ಇನ್ನೂ ಅಭಿಜಿತ್ ಹೆಸರಿಸಿದ್ದ ಜಿತೇಂದ್ರ ಹಾಗೂ ಸುಮಿತ್ ಪಟೇಲ್ನನ್ನು ಬಿಹಾರದಿಂದ ಬಂಧಿಸಲಾಗಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಕೊಲೆ ಮಾಡಿದ ಅಭಿಜಿತ್ಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. ಇದನ್ನೂ ಓದಿ: ಅಧ್ಯಕ್ಷೀಯ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ: ಟ್ರಂಪ್