ರಾಯಚೂರು: ಕೆಸರು ಮೈ ಮೇಲೆ ಹಾರಿದೆ ಎಂದು ಬಸ್ ಚಾಲಕನ ಮೇಲೆ ವ್ಯಕ್ತಿಯೊಬ್ಬ ಚಪ್ಪಲಿಯಿಂದ ಹಲ್ಲೆ ಮಾಡಿದ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಯಚೂರಿನ ಮಸ್ಕಿ ತಾಲೂಕಿನ ಪರಸಾಪುರ ಬಳಿ ಬಸ್ ಚಾಲಕ ಕೆಸರಿದ್ದ ರಸ್ತೆ ಮೇಲೆ ಬಸ್ ಚಲಾಯಿಸಿದ ವೇಳೆ ಅಲ್ಲೇ ಇದ್ದ ಪಿ.ಗೌಡರ ಮೇಲೆ ಕೆಸರು ಹಾರಿದೆ. ಇದರಿಂದ ಸಿಟ್ಟಿಗೆದ್ದ ಗೌಡ, ಕೆಸರಿನ ಮೇಲೆ ಬಸ್ ಚಲಾಯಿಸಿದ್ದಕ್ಕೆ ಕೆಸರು ತನ್ನ ಬಟ್ಟೆಗೆಲ್ಲಾ ಮೆತ್ತಿದೆ ಎಂದು ಗಲಾಟೆ ಮಾಡಿದ್ದಾನೆ.
- Advertisement
ಮಾತಿಗೆ ಮಾತು ಬೆಳೆದು ಗೌಡ ತನ್ನ ಚಪ್ಪಲಿಯಿಂದ ಚಾಲಕನ ಮೇಲೆ ಹಲ್ಲೆ ಮಾಡಿದ್ದಾನೆ. ರಾಯಚೂರು ವಿಭಾಗದ ಮಸ್ಕಿ ಘಟಕದ ಬಸ್ ಇದಾಗಿದ್ದು, ಸಾರ್ವಜನಿಕರ ಎದುರೇ ಚಪ್ಪಲಿಯಿಂದ ಚಾಲಕನ ಮೇಲೆ ಹಲ್ಲೆ ನಡೆದಿದೆ. ಇದನ್ನೂ ಓದಿ: ಆಜಾನ್ ವಿರುದ್ಧ ಆರತಿ, ಹನುಮಾನ್ ಚಾಲೀಸಾ ಪಠಿಸಲು ಹಿಂದೂಪರ ಸಂಘಟನೆಗಳ ನಿರ್ಧಾರ
- Advertisement
ಘಟನೆಯಿಂದ ಅವಮಾನಿತನಾದ ಬಸ್ ಚಾಲಕ ಮಸ್ಕಿ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದರು. ಆದರೆ ಪೊಲೀಸರು ಇಬ್ಬರಿಗೂ ರಾಜಿ ಮಾಡಿಸಿ ದೂರು ದಾಖಲಿಸಿಕೊಂಡಿಲ್ಲ. ಇದರಿಂದ ಚಾಲಕ ಬೇಸರ ವ್ಯಕ್ತಪಡಿಸಿದ್ದಾರೆ.