ಬೆಂಗಳೂರು: ಮೊಬೈಲ್ ನೋಡುತ್ತಾ ಮನೆ ಮುಂದೆ ಕೂತಿದ್ದ ವ್ಯಕ್ತಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯ 2 ಕಾಲುಗಳು ತುಂಡಾದ ಘಟನೆ ರಾಜಾಜಿನಗರದ (Rajajinagar) ಮಂಜುನಾಥ ನಗರದಲ್ಲಿ (Manjunath Nagar) ನಡೆದಿದೆ.
ಮಂಜು ಘಟನೆಯಲ್ಲಿ ಕಾಲುಗಳನ್ನು ಕಳೆದುಕೊಂಡ ವ್ಯಕ್ತಿ. ಮಂಜು ಮನೆ ಮುಂದೆ ಮೊಬೈಲ್ ನೋಡುತ್ತಾ ಕುಳಿತಿದ್ದ ಸಂದರ್ಭ ಅದೇ ರಸ್ತೆಯಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಕಾರು ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಜಾಮಾ ಮಸೀದಿ ಸರ್ವೇಗೆ ವಿರೋಧ – ಹಿಂಸಾಚಾರದಲ್ಲಿ ಮೂವರು ಸಾವು, 20 ಪೊಲೀಸರಿಗೆ ಗಾಯ
ಸದ್ಯ ಗಾಯಾಳು ಮಂಜುವನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ರಾಜಾಜಿನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಡಿಕೆಶಿ ತಂದಿಕ್ಕುವ ಕೆಲಸ ಮಾಡ್ತಿದ್ದಾರೆ: ಅಶೋಕ್ ಕಿಡಿ