ನವದೆಹಲಿ: ರೈಲ್ವೇ ನಿಲ್ದಾಣದಲ್ಲಿ (Railway Station) ಮಲಗಿದ್ದ ವ್ಯಕ್ತಿಯ ಮೇಲೆ ಇಬ್ಬರು ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ (Fire) ಹಚ್ಚಿರುವ ಭೀಕರ ಘಟನೆ ದೆಹಲಿಯಲ್ಲಿ (Delhi) ನಡೆದಿದೆ. ಸಂತ್ರಸ್ತ ವ್ಯಕ್ತಿಯ ದೇಹದಲ್ಲಿ ಶೇ.80ರಷ್ಟು ಸುಟ್ಟ ಗಾಯಗಳಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ.
ಸಂತ್ರಸ್ತ ವ್ಯಕ್ತಿ ಜೋಗರಾಜ್(48) ತನ್ನ ಮಗಳ ಮದುವೆಗಾಗಿ ಸಾಲ(Loan) ಮಾಡಿದ್ದ. ಆತ ಸಾಲವನ್ನು ತೀರಿಸದೇ ಇದ್ದಿದ್ದರಿಂದ ಸೇಡು ತೀರಿಸಿಕೊಳ್ಳಲು ಬೆಂಕಿ ಹಚ್ಚಲಾಗಿದೆ. ವ್ಯಕ್ತಿಯ ಕಾಲ್ಬೆರಳುಗಳನ್ನು ಸಹಿಯಾಗಿ ಬಳಸಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಸಂತ್ರಸ್ತನ ಹೇಳಿಕೆಯೇನು?
ಈ ವರ್ಷ ಮೇ ತಿಂಗಳಲ್ಲಿ, ನನ್ನ ಮಗಳ ಮದುವೆಗಾಗಿ ನಾನು ಸಾಲಗಾರ ರಾಜೀವ್‌ನಿಂದ ಸಾಲವನ್ನು ತೆಗೆದುಕೊಂಡಿದ್ದೆ. ನಾನು ಅದನ್ನು ಮರುಪಾವತಿಸಲು ಸ್ವಲ್ಪ ಸಮಯ ಕೇಳಿದ್ದೆ. ಆದರೆ ಅವರು ನನ್ನ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದರು. ಗುರುವಾರ ರಾತ್ರಿ ಅವರು ನನಗೆ ಕೊಲೆ ಬೆದರಿಕೆ ಒಡ್ಡಿದ್ದರು ಎಂದು ಜೋಗರಾಜ್ ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ನಾಯಿಗಳ ಹಾವಳಿ- ಒಂದೇ ವರ್ಷದಲ್ಲಿ ಆರೂವರೆ ಸಾವಿರ ಮಂದಿಗೆ ಕಡಿತ
Advertisement
ಶುಕ್ರವಾರ ರಾತ್ರಿ ನಾನು ಪೊಲೀಸ್ ಬ್ಯಾರಿಕೇಡ್ ಬಳಿ ಮಲಗಿದ್ದೆ. ಸುಮಾರು 2 ಗಂಟೆ ಹೊತ್ತಿಗೆ ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿ ಬಂದು ನನ್ನ ಮೇಲೆ ಪೆಟ್ರೋಲ್ ಸುರಿದಿದ್ದಾನೆ. ನಾನು ಸಾಲ ತೆಗೆದುಕೊಂಡಿದ್ದ ರಾಜೀವ್ ನನ್ನ ಮೇಲೆ ಬೆಂಕಿ ಇಟ್ಟು ಹೋಗಿದ್ದಾನೆ. ನಾನು ಸಹಾಯಕ್ಕಾಗಿ ಕಿರುಚಿದೆ. ಆದರೆ ರಾಜೀವ್ ಇನ್ನೊಬ್ಬ ಯುವಕನೊಂದಿಗೆ ತನ್ನ ಸ್ಕೂಟರ್‌ನಲ್ಲಿ ಓಡಿಹೋದ ಎಂದಿದ್ದಾರೆ.
Advertisement
ಜೋಗರಾಜ್ ಚಮ್ಮಾರ ವೃತ್ತಿಯನ್ನು ಮಾಡುತ್ತಿದ್ದು, ಯಾವಾಗಲೂ ದೆಹಲಿಯ ರೈಲ್ವೇ ನಿಲ್ದಾಣದ ಪೊಲೀಸ್ ಪೋಸ್ಟ್ ಅಥವಾ ಬ್ಯಾರಿಕೇಡ್‌ಗಳ ಬಳಿ ಮಲಗುತ್ತಿದ್ದ. ಆರೋಪಿಗಳು ತಪ್ಪಿಸಿಕೊಂಡು ಅಲ್ಲಿಂದ ಪರಾರಿಯಾದಾಗ ಜೋಗರಾಜ್‌ನ ಸ್ನೇಹಿತರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ತಿಳಿಸಿದ್ದಾರೆ.
ಇದೀಗ ಜೋಗರಾಜ್ ಅವರ ಎರಡೂ ಕೈಗಳು ಸೇರಿದಂತೆ ದೇಹದ ಬಹುತೇಕ ಭಾಗಗಳು ಸುಟ್ಟು ಹೋಗಿವೆ. ತಮಗೆ ಎಫ್‌ಐಆರ್‌ಗೆ ಸಹಿ ಮಾಡಲು ಅಥವಾ ಫಿಂಗರ್ ಪ್ರಿಂಟ್‌ಗೆ ಹೆಬ್ಬೆರಳನ್ನೂ ಬಳಸಲಾಗದೇ ತಮ್ಮ ಕಾಲಿನ ಬೆರಳನ್ನು ಬಳಸಿ ಎಫ್‌ಐಆರ್‌ಗೆ ಸಹಿ ಹಾಕಲಾಗಿದೆ. ಇದನ್ನೂ ಓದಿ: ಶಿಕ್ಷಕನಿಂದ ಥಳಿಸಲ್ಪಟ್ಟಿದ್ದ ದಲಿತ ಬಾಲಕ ಸಾವು – ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ
ಇದೀಗ ಪೊಲೀಸರು ಜೋಗರಾಜ್ ಹೇಳಿಕೆ ಹಾಗೂ ಸಾಕ್ಷ್ಯಾಧಾರಗಳನ್ನು ಬಳಸಿ ಆರೋಪಿ ರಾಜೀವ್‌ನನ್ನು ಬಂಧಿಸಿದ್ದಾರೆ.