ಡೆಹ್ರಾಡೂನ್: ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಪತ್ರದ ಮೂಲಕ ತ್ರಿವಳಿ ತಲಾಖ್ (Triple Talaq) ನೀಡಿರುವ ಘಟನೆ ಉತ್ತರಾಖಂಡದಲ್ಲಿ (Uttarakhand) ನಡೆದಿದೆ. ಈ ಸಂಬಂಧ ಆರೋಪಿ ವಿರುದ್ಧ ಮಹಿಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.
ಕಿರುಕುಳ, ಹಲ್ಲೆ ಮತ್ತು ಬಲವಂತದ ಗರ್ಭಪಾತದ ಗಂಭೀರ ಆರೋಪ ಮಾಡಿ ಮಹಿಳೆ ದೂರು ದಾಖಲಿಸಿದ್ದಾರೆ. ಹಿಮಾಚಲ ಪ್ರದೇಶದ ಸಿರ್ಮೋರ್ ಜಿಲ್ಲೆಯ ಪೌಂಟಾ ಸಾಹಿಬ್‌ನ ನಿವಾಸಿಯಾಗಿರುವ ಆರೋಪಿ ಮೆಹಬೂಬ್ ಅಲಿ ತನ್ನನ್ನು ಮನೆಯಿಂದ ಹೊರಹಾಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದನ್ನೂ ಓದಿ: ಪೆಟ್ರೋಲ್ ಜೊತೆಗೆ ನೀರು ಬೆರಕೆ – ಪಂಪ್ ವಿರುದ್ಧ ವ್ಯಕ್ತಿಯಿಂದ ದೂರು
Advertisement
Advertisement
2017ರಲ್ಲಿ ನನ್ನ ವಿವಾಹವಾಯಿತು. ಕಡಿಮೆ ವರದಕ್ಷಿಣೆ ತಂದಿದ್ದಕ್ಕಾಗಿ ಅತ್ತೆ ನನ್ನನ್ನು ನಿಂದಿಸುತ್ತಿದ್ದರು. ಮದುವೆಯ ನಂತರ ಪತಿ ನನಗೆ ಥಳಿಸುತ್ತಿದ್ದ. ತಾನು ಮೊದಲ ಬಾರಿಗೆ ಗರ್ಭಿಣಿಯಾದ ನಂತರ, ಪತಿ ನನ್ನ ಮೇಲೆ ಗಂಭೀರ ಹಲ್ಲೆ ನಡೆಸಿದ್ದರಿಂದ ಗರ್ಭಪಾತವಾಯಿತು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
Advertisement
ನನ್ನನ್ನು ಮನೆಯಿಂದ ಆಚೆ ಹಾಕುವ ಮೊದಲು ಹಲವು ದಿನಗಳ ಕಾಲ ಆಹಾರ ಮತ್ತು ನೀರು ನೀಡದೇ ಕೋಣೆಯಲ್ಲಿ ಕೂಡಿ ಹಾಕಿದ್ದರು. ನಿರಂತರ ಕಿರುಕುಳದಿಂದ ನಾನು ಖಿನ್ನತೆಗೆ ಒಳಗಾಗಿದ್ದೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಅಫ್ತಾಬ್‌ಗೆ ಮಂಪರು ಪರೀಕ್ಷೆ – ಪೊಲೀಸರಿಗೆ ಕೋರ್ಟ್ ಅನುಮತಿ
Advertisement
ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಮೆಹಬೂಬ್ ಅಲಿ, ಶಂಶೇರ್ ಅಲಿ, ಗುಲ್ಷೇರ್ ಅಲಿ, ಮೊಹ್ಸಿನಾ ಮತ್ತು ಪರ್ವೀನ್ ವಿರುದ್ಧ ಸೂಕ್ತ ಕಾನೂನು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಕ್ಲೆಮೆಂಟೌನ್ ಪೊಲೀಸ್ ಠಾಣೆ ಪ್ರಭಾರಿ ಕುಲವಂತ್ ತಿಳಿಸಿದ್ದಾರೆ.