ಭೂಪಾಲ್: ಮಾನಸಿಕ ಅಸ್ವಸ್ಥರಾಗಿರೋ ಹಿರಿಯ ನಾಗರಿಕರೊಬ್ಬರನ್ನು ತನ್ನ ಗುರುತಿನ ಚೀಟಿ ತೋರಿಸುವಂತೆ ಒತ್ತಾಯಿಸಿ, ಬಿಜೆಪಿ ಮುಖಂಡನೊಬ್ಬ ಕಪಾಳಕ್ಕೆ ಹೊಡೆದು ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಘಟನೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಾನಸ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ದಿನೇಶ್ ಕುಶ್ವಾಹ (38) ಬಂಧಿತ ಆರೋಪಿ. ಕೊಲೆಯಾದ ಹಿರಿಯ ನಾಗರಿಕ ಭವಾರ್‌ಲಾಲ್ ಜೈನ್ (65) ರಟ್ಲಾಮ್ ಜಿಲ್ಲೆಯ ಸರಸಿ ಗ್ರಾಮದ ನಿವಾಸಿ. ಇವರು ಮೇ 16ರಂದು ಚಿತ್ತೋರ್‌ಗಢದ ಧಾರ್ಮಿಕ ಕಾರ್ಯಕ್ರಮಕ್ಕೆ ಹೋದ ಮೇಲೆ ನಾಪತ್ತೆಯಾಗಿದ್ದರು. ಇವರ ಶವ ಗುರುವಾರ ಸಂಜೆ ನೀಮುಚ್ ಜಿಲ್ಲೆಯ ಮಾನಸ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಪುರ ರಸ್ತೆಯಲ್ಲಿ ಸಿಕ್ಕಿದೆ. ಇದನ್ನೂ ಓದಿ: ಇಂಟರ್‌ವ್ಯೂಗೆಂದು ಹೋದ ಯುವತಿ, ಟ್ಯಾಲಿಕ್ಲಾಸ್‌ಗೆ ಹೋಗ್ತೀನೆಂದಿದ್ದ ಯುವಕ – ಆತ್ಮಹತ್ಯೆಗೂ ಮುನ್ನ ನಡೆದಿದ್ದೇನು?
Advertisement
Advertisement
ಆರೋಪಿಯು, ಭವಾರ್‌ಲಾಲ್ ಜೈನ್ ಅವರಿಗೆ `ನೀನು ಮೊಹಮ್ಮದ್ ಎಂದು ಹೆಸರಿಸಿ, ಗುರುತಿಗೆ ಆಧಾರ್ ಕಾರ್ಡ್ ತೋರಿಸಲು ಒತ್ತಾಯಿಸಿ ಪದೇ ಪದೇ ಕಪಾಳಮೋಕ್ಷ ಮಾಡಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಹಿಮಾಚಲ ಉಪಸಭಾಧ್ಯಕ್ಷರಿಂದ ವಿದ್ಯಾರ್ಥಿಗೆ ಕಪಾಳ ಮೋಕ್ಷ ಆರೋಪ
Advertisement
ಶವ ಸಂಸ್ಕಾರದ ಬಳಿಕ ಕುಟುಂಬ ಸದಸ್ಯರಿಗೆ ಜೈನ್ ಅವರ ಮೇಲೆ ಉದ್ದೇಶಪೂರ್ವಕ ಹಲ್ಲೆ ನಡೆದಿರುವ ದೃಶ್ಯದ ವೀಡಿಯೋ ಲಭಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಹುಶಃ ಈ ವೀಡಿಯೋ ಮೇ 19ರಂದು ಚಿತ್ರೀಕರಿಸಲಾಗಿದೆ. ತನಿಖೆ ನಡೆಸಿದಾಗ ಆರೋಪಿಯ ಗುರುತು ಸಿಕ್ಕಿ, ಬಂಧಿಸಲಾಗಿದೆ ಎಂದು ಮಾನಸ ಪೊಲೀಸ್ ಠಾಣೆಯ ಅಧಿಕಾರಿ ಕೆ.ಎಲ್.ಡಾಂಗಿ ತಿಳಿಸಿದ್ದಾರೆ.
Advertisement
ಆರೋಪಿ ಬಿಜೆಪಿಯ ಕಾರ್ಯಕರ್ತ ಎಂದು ಕಾಂಗ್ರೆಸ್ ಸಂಸದ ದಿಗ್ವಿಜಯ ಸಿಂಗ್ ಟ್ವಿಟ್ಟರ್‌ನಲ್ಲಿ ಆರೋಪಿಸಿದ್ದಾರೆ. ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಅವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ ಎಂದು ಕಿಡಿಕಾರಿದ್ದಾರೆ.