– ಅಭಿಮಾನಿ ಸುದೀಪ್ ಗೆ ಬರೆದ ಪತ್ರವನ್ನೊಮ್ಮೆ ಓದಿ
ಬೆಂಗಳುರೂ: ಸ್ಯಾಂಡಲ್‍ವುಡ್‍ನ ಮಾಣಿಕ್ಯ ಸುದೀಪ್ ತಮ್ಮದೇ ಆದ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈಗ ಹೇಳ್ತಿರೋ ಅಭಿಮಾನಿಯೊಬ್ಬರ ಕಥೆ ಓದುಗರ ಕಣ್ಣಂಚಲ್ಲಿ ಕಣ್ಣೀರು ತರಿಸುತ್ತದೆ.
ಇತ್ತೀಚೆಗಷ್ಟೇ ಚೈತ್ರಾ ಎಂಬ ಮಹಿಳೆ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುವಾಗ “ಸುದೀಪಣ್ಣಾ…ನಿಮ್ಮನ್ನೊಮ್ಮೆ ನೋಡಬೇಕು” ಎಂದು ಅಂಗಲಾಚಿ ಬೇಡಿಕೊಂಡಿದ್ರು. ಸುದೀಪ್ ಹುಟ್ಟುಹಬ್ಬದ ದಿನ ವರುಷಕ್ಕೊಮ್ಮೆಯೂ ನಿಮ್ಮ ದರುಶನ ಸಿಗದಿದ್ದರೇ ನಾವ್ ಏನ್ ಮಾಡೋದು ಅಂತ ಆಟೋ ಡ್ರೈವರ್‍ವೊಬ್ಬರು ಅಂಗಾಲಾಚಿದ್ದರು. ಇಂಥ ಹತ್ತು ಹಲವು ಕಥೆಗಳ ನಂತರ ಮತ್ತೊಬ್ಬ ಅಭಿಮಾನಿಯ ಕರುಣಾಜನಕ ಕಥೆ ಹೇಳಿದ್ದಾರೆ. ಕೊನೆ ಗಳಿಗೆಯಲ್ಲಿ ಸುದೀಪ್‍ರನ್ನ ನೊಡಲೇಬೇಕೆಂದು ಬೇಡಿಕೊಂಡಿದ್ದಾರೆ.
Advertisement
ಸದ್ಯ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್ ಆಗಿರುವ ನಟ. ಎಲ್ಲವನ್ನು ಗಮನಿಸುತ್ತಿರುತ್ತಾರೆ. ಇದನ್ನ ಅರಿತ ಕ್ಯಾನ್ಸರ್‍ನಿಂದ ಬಳಲುತ್ತಿರೋ ಕುಂದಾಪುರದ ಸುದೀಪ್ ಅಭಿಮಾನಿ ದಿವಾಕರ್ ಕಿಚ್ಚನಿಗೆ ಟ್ವಿಟರ್‍ನಲ್ಲೊಂದು ಪತ್ರ ಬರೆದಿದ್ದಾರೆ.
Advertisement
ಅಭಿಮಾನಿ ಪತ್ರ:
Advertisement
ಹಾಯ್ ದೀಪಣ್ಣ,
Advertisement
ಹೇಗಿದ್ದೀರಾ…? ಚೆನ್ನಾಗಿದ್ದೀರಾ ಅಂತ ನಾನು ಭಾವಿಸುತ್ತೇನೆ. ನಾನು ನಿಮ್ಮ ಅಭಿಮಾನಿಯಲ್ಲ, ನಿಮ್ಮ ಭಕ್ತ. ನಿಮ್ಮ ಮಾತು, ನೀವು ಹೇಟರ್ಸ್‍ಗಳನ್ನ ಪ್ರೀತಿ ಮಾಡುತ್ತಲೇ ಬೆಳೆದು ಬಂದ ಹಾದಿ ನನಗೆ ತುಂಬಾ ಇಷ್ಟ. ಅಣ್ಣಾ ನಾನು ದಿವಾಕರ್, ಕುಂದಾಪುರದವನು. ಈಗ ತಾನೇ ವಿದ್ಯಾಭ್ಯಾಸ ಮುಗಿಸಿದ್ದೇನೆ. ಇನ್ನೇನು ದುಡಿಮೆಗೆ ಹೋಗಬೇಕು ಅನ್ನುವಷ್ಟರಲ್ಲಿ ನಾನು ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದೇನೆ ಅಂತ 2-3 ತಿಂಗಳ ಹಿಂದೆ ಗೊತ್ತಾಯಿತು. ಸಂಪೂರ್ಣ ಗುಣಮುಖವಾಗಲು ಡಾಕ್ಟರ್ 6 ತಿಂಗಳು ಚಿಕಿತ್ಸೆ ಬೇಕು ಅಂತ ಹೇಳಿದ್ರು. ಈಗಾಗಲೇ ಮೂರು ಚಾನ್ಸ್ ತೆಗೆದುಕೊಂಡಿದ್ದೇನೆ. ಅಣ್ಣಾ ಮುಸ್ಸಂಜೆ ಮಾತು, ಮೈ ಅಟೋಗ್ರಾಫ್‍ನ ಹಾಡುಗಳು ನನಗೆ ಕ್ಯಾನ್ಸರ್ ವಿರುದ್ಧ ಹೋರಾಡುವ ಧೈರ್ಯ ಇಮ್ಮಡಿಗೊಳಿಸಿವೆ. ಅಣ್ಣಾ ಕಂಪ್ಲೀಟ್ ಕ್ಯೂರ್ ಆದ್ಮೇಲೆ ನಿಮ್ಮನ್ನು ಭೇಟಿ ಮಾಡಬೇಕು ಅನ್ನೋದು ನನ್ನ ದೊಡ್ಡ ಆಸೆ ದೀಪಣ್ಣ. ನನ್ನ ಹೃದಯದಲ್ಲಿ ನಿಮ್ಮನ್ನು ಪೂಜೆ ಮಾಡ್ತಾ ಇದ್ದೀನಿ. ಅಣ್ಣಾ ನಾನು ನಿಮ್ಮನ್ನು ಭೇಟಿ ಮಾಡಬಹುದಾ..? ದೇವರೇ ಉತ್ತರಿಸಿ.
ಇಂತಿ ಕಿಚ್ಚನ ಭಕ್ತ,
ದಿವಾಕರ್.
ನೊಡುವಂತ ಸಿನಿಮಾಗಳನ್ನ ಮಾಡೋದು ಮುಖ್ಯವಲ್ಲ. ಮನಸ್ಸಿಗೆ ಕಾಡುವಂತಹ ಸಿನಿಮಾಗಳನ್ನ ಮಾಡೋದು ಮುಖ್ಯ ಅನ್ನೋ ಮಾತಿದೆ. ಈ ಮಾತಿಗೆ ಸುದೀಪ್ ಅವರ ಹಲವು ಸಿನಿಮಾಗಳನ್ನ ಸೇರಿಸಬಹುದು. ಆರ್‍ಜೆ ಆಗಿ ಹಲವು ನೊಂದ ಜೀವಗಳಿಗೆ ಸ್ಫೂರ್ತಿ ತುಂಬುವ ಕೆಲಸ ಮಾಡಿದ್ದ ಮುಸ್ಸಂಜೆ ಮಾತು ಸಿನಿಮಾದ ಸುದೀಪ್ ಪಾತ್ರ ಹಲವರಿಗೆ ಎಂದಿಗೂ ಮರೆಯದ ಪಾತ್ರವಾಗಿ ಕಾಡುತ್ತದೆ. `ಏನಾಗಲಿ ಮುಂದೆ ಸಾಗು ನೀ’ ಅನ್ನೋ ಹಾಡು ಕಳೆದುಕೊಂಡ ಭರವಸೆಯನ್ನ ಮತ್ತೆ ಹುಟ್ಟುವಂತೆ ಮಾಡುತ್ತದೆ.
ಇನ್ನು ಸುದೀಪ್ ಅಭಿನಯದ `ಮೈ ಆಟೋಗ್ರಾಫ್’ ಸಿನಿಮಾದ `ಅರಳುವ ಹೂವುಗಳೇ…’ ಹಾಡು ಕೂಡ ಅಷ್ಟೇ ಭರವಸೆ ಮೂಡಿಸುತ್ತದೆ. ಕಳೆದುಕೊಂಡ ಆಸೆಗಳಿಗೆ ಜೀವ ತುಂಬುತ್ತದೆ. ಸಾವಿನಂಚಿನಲ್ಲಿ ಇರುವವರಿಗೆ ಬುದುಕಬೇಕೆಂಬ ನವ ಚೈತನ್ಯ ನೀಡುತ್ತದೆ. ಹೀಗೆ ಪತ್ರದಲ್ಲಿ ತನ್ನ ಮನದಾಳದ ಮಾತನ್ನು ಹಂಚಿಕೊಂಡ ಭಕ್ತನಿಗೆ ಆದಷ್ಟು ಬೇಗ ಮಾಣಿಕ್ಯನ ದರುಶನವಾಗಲಿ ಎನ್ನುವುದೇ ಕಿಚ್ಚನ ಅಭಿಮಾನಿಗಳ ಆಶಯವಾಗಿದೆ.
https://twitter.com/Divakar02657685/status/906079973387132928
ಆದಷ್ಟು ಬೇಗ ನೀವು @KicchaSudeep ಅಣ್ಣನನ್ನು ಭೇಟಿ ಆಗಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ನಿಮ್ಮಗೆ ಒಳ್ಳೆದಾಗ್ಲಿ…????
— 『???? ???? ???? ???? ???? 』 (@kicchaUllas) September 8, 2017
https://twitter.com/Manju761961/status/906117640820625408
Plsss Deepanna ond reply maadi plssssss????
— Adarsha r gowdru (@Adarsh80819124) September 8, 2017