ಚಿಕ್ಕಮಗಳೂರು: ಶೃಂಗೇರಿಯಲ್ಲಿ ತುಂಗಾ ನದಿಯ ಪ್ರವಾಹಕ್ಕೆ ಸಿಲುಕಿ 2 ದಿನ ಶೌಚಾಲಯದಲ್ಲೇ ಪ್ರಾಣ ಉಳಿಸಿಕೊಂಡಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡುವಲ್ಲಿ ರಕ್ಷಣಾತಂಡ ಯಶಸ್ವಿಯಾಗಿದೆ.
ವಿನೋದ್ ಮಂಡ್ಲೆ ರಕ್ಷಣೆಯಾದ ವ್ಯಕ್ತಿ. ವಿನೋದ್ ಮೂಲತಃ ಬಿಹಾರ್ ಮೂಲದವರಾಗಿದ್ದು, ಶೃಂಗೇರಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಕಳೆದ ಬುಧವಾರ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ತುಂಗಾನದಿಯ ಪ್ರವಾಹದಲ್ಲಿ ಸಿಕ್ಕಿಕೊಂಡ ವಿನೋದ್ ಜೀವ ಉಳಿಸಿಕೊಳ್ಳಲು ಗಾಂಧಿ ಮೈದಾನದಲ್ಲಿರುವ ಶೌಚಾಲಯದಲ್ಲೇ ಆಶ್ರಯ ಪಡೆದುಕೊಂಡಿದ್ದಾರೆ.
ಪ್ರವಾಹದ ಪ್ರಮಾಣ ಕಡಿಮೆಯಾಗದೇ ಕಳೆದ ಎರಡೂ ದಿನಗಳಿಂದಲೂ ಶೌಚಾಲಯದಲ್ಲೇ ಸಿಲುಕಿಕೊಂಡಿದ್ದರು. ಶೌಚಾಲಯದಲ್ಲಿ ವ್ಯಕ್ತಿ ಸಿಲುಕಿಕೊಂಡಿರುವ ವಿಷಯ ತಿಳಿದ ಎ.ಎನ್.ಎಫ್ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಹರಸಾಹಸ ಪಟ್ಟು ವಿನೋದ್ ನನನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv