ಜೈಪುರ: ಟಾಪ್ ಯೂಟ್ಯೂಬ್ ಸ್ಟಾರ್ ಮಾಡುವ ನೆಪದಲ್ಲಿ ಹುಡುಗಿ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿರುವ ಘಟನೆ ರಾಜಸ್ಥಾನದ ಪಾಲಿನಲ್ಲಿ ಬೆಳಕಿಗೆ ಬಂದಿದೆ.
3-4 ವರ್ಷಗಳಿಂದ ಯೂಟ್ಯೂಬ್‍ನಲ್ಲಿ ಕಾಮಿಡಿ ವೀಡಿಯೋ ಮಾಡುತ್ತಿದ್ದ 16 ವರ್ಷದ ಹುಡುಗಿಗೆ ಒಂದು ತಿಂಗಳ ಹಿಂದೆ ಜೋಧ್‍ಪುರದ ಬಾಬ್ರಾ (ಪಾಲಿ) ಹಾಲ್‍ನ ನಿವಾಸಿ ನಿಜಾಮುದ್ದೀನ್ ಅಲಿಯಾಸ್ ರಾಜ್ ಖಾನ್ ಪರಿಚಯವಾಗಿತ್ತು. ಹುಡುಗಿಗೆ ಟಾಪ್ ಯೂಟ್ಯೂಬ್ ಸ್ಟಾರ್ ಆದರೆ ಚೆನ್ನಾಗಿ ಹಣ ಸಂಪಾದಿಸಬಹುದು ಎಂದು ಆಸೆ ಹುಟ್ಟಿಸಿ ಜನವರಿ 8ರಂದು ವೀಡಿಯೋ ಮಾಡುವ ನೆಪದಲ್ಲಿ ಜೋಧ್‍ಪುರದ ಫ್ಲಾಟ್‍ವೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಇದನ್ನೂ ಓದಿ: ಪಳ ಪಳ ಹೊಳೆಯುವ ಹಲ್ಲು ನಿಮ್ಮದಾಗ ಬೇಕಾ? ಹಾಗಿದ್ರೆ ಒಮ್ಮೆ ಟ್ರೈ ಮಾಡಿ
ಈ ಘಟನೆ ಕುರಿತಂತೆ ಮನೆಯವರಿಗೆ ತಿಳಿಸುವುದಾಗಿ ಹೇಳಿದ್ದಕ್ಕೆ ಹುಡುಗಿ ಮೇಲೆ ಆರೋಪಿ ಹಲ್ಲೆ ನಡೆಸಿ ಬೆದರಿಕೆಯೊಡ್ಡಿದ್ದಾನೆ. ಹೀಗಾಗಿ ಕೆಲವು ದಿನಗಳಿಂದ ಹುಡುಗಿ ಮೌನವಾಗಿದ್ದಳು. ಇದೀಗ ಈ ವಿಚಾರವನ್ನು ಕುಟುಂಬಸ್ಥರಿಗೆ ತಿಳಿಸಿದ್ದು, ಬಾಲಕಿಯ ಪೋಷಕರು ಈ ಬಗ್ಗೆ ಪೊಲೀಸರುಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಜನವರಿ 28ರಂದು ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ರುಂಡ, ಮುಂಡ ಕತ್ತರಿಸಿ ರಿಯಲ್ ಎಸ್ಟೇಟ್ ಉದ್ಯಮಿ ಬರ್ಬರ ಹತ್ಯೆ – 7 ಮಂದಿ ಅರೆಸ್ಟ್