ಲಕ್ನೋ: ತನ್ನ ಬೆಕ್ಕನ್ನು (Cat) ಕದ್ದೊಯ್ದಿದ್ದಾರೆ ಎಂದು ಶಂಕಿಸಿ ವ್ಯಕ್ತಿಯೊಬ್ಬ ಕೋಪದಿಂದ ನೆರೆಮನೆಯವರ (Neighbor) ಪಾರಿವಾಳಗಳಿಗೆ (Pigeon) ವಿಷ (Poison) ನೀಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಷಹಜಹಾನ್ಪುರದಲ್ಲಿ ನಡೆದಿದೆ.
ಘಟನೆ ಠಾಣಾ ಸದರ್ ಬಜಾರ್ನ ಮೊಹಲ್ಲಾ ಅಮಾಂಜೈ ಎಂಬಲ್ಲಿ ಮಂಗಳವಾರ ನಡೆದಿದೆ. ಆರೋಪಿ ಅಬಿದ್ನ ಬೆಕ್ಕು ಇತ್ತೀಚೆಗೆ ಕಣ್ಮರೆಯಾಗಿತ್ತು. ತನ್ನ ಬೆಕ್ಕನ್ನು ನೆರೆ ಮನೆಯ ಅಲಿ ಕಳ್ಳತನ ಮಾಡಿದ್ದಾನೆ ಎಂದು ಭಾವಿಸಿ ಆತ ಈ ಕೃತ್ಯ ನಡೆಸಿದ್ದಾನೆ.
Advertisement
Advertisement
ಆರೋಪಿ ಅಬಿದ್ ತನ್ನ ಬೆಕ್ಕು ಕಾಣೆಯಾಗಿದೆ, ಅದನ್ನು ನೆರೆಮನೆಯವರು ಕಳ್ಳತನ ಮಾಡಿದ್ದಾರೆ ಎಂದು ಭಾವಿಸಿ ವರ್ಷಗಳಿಂದ ಸಾಕಿದ್ದ ಪಾರಿವಾಳಗಳಿಗೆ ವಿಷ ಉಣಿಸಿದ್ದಾನೆ. ನೆರೆಮನೆಯವ ಸಾಕಿದ್ದ 78 ಪಾರಿವಾಳಗಳಲ್ಲಿ ವಿಷ ತಿಂದು ಸುಮಾರು 30 ಪಾರಿವಾಳಗಳು ಸಾವನ್ನಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಗರ್ಭಿಣಿಯಾಗಲು ಮಹಿಳೆಗೆ ಮಾನವನ ಮೂಳೆ ತಿನ್ನುವಂತೆ ಒತ್ತಾಯಿಸಿದ ಪಾಪಿ ಪತಿ
Advertisement
Advertisement
ಘಟನೆಗೆ ಸಂಬಂಧಿಸಿದಂತೆ ಅಬಿದ್ ಸೇರಿದಂತೆ ಮೂವರ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನೆ 428 (ಪ್ರಾಣಿಗಳನ್ನು ಕೊಲ್ಲುವ ಮೂಲಕ ದುಷ್ಕೃತ್ಯ ಎಸಗುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಾವನ್ನಪ್ಪಿರುವ ಪಾರಿವಾಳಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನಲ್ಲಿ ಸೀಟ್ಬೆಲ್ಟ್ ಹಾಕದ ರಿಷಿ ಸುನಾಕ್ಗೆ ದಂಡ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k