ಮುಂಬೈ: ತಾಯಿಗೆ ಚಿಕಿತ್ಸೆ ಕೊಡಿಸಲು ಹಣವಿಲ್ಲ ಎಂದು ಪಾಪಿ ಮಗ ಆಕೆಯನ್ನು ಕೊಲೆ ಮಾಡಿದ ಘಟನೆಯೊಂದು ಶುಕ್ರವಾರ ನಸುಕಿನ ಜಾವ ಮಹಾರಾಷ್ಟ್ರದ ಮುಂಬೈನ ದಹಿಸರ್ ವೆಸ್ಟ್ ನಲ್ಲಿ ನಡೆದಿದೆ.
ಯೋಗೇಶ್(52) ತನ್ನ 80 ವರ್ಷದ ತಾಯಿ ಲಲೀತಾ ಶೆಣೈಯನ್ನು ಕೊಲೆ ಮಾಡಿದ ವ್ಯಕ್ತಿ. ತಾಯಿಗೆ ಚಿಕಿತ್ಸೆ ಕೊಡಿಸಲು ಹಣವಿಲ್ಲವೆಂದು ಯೋಗೇಶ್ ಮೊದಲು ತಾಯಿಯ ಮುಖವನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದಾನೆ. ನಂತರ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಆಕೆಯ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ.
ಯೋಗೇಶ್‍ಗೆ ತಾಯಿಯ ಚಿಕಿತ್ಸೆಯ ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೇ ಕೆಲವು ವರ್ಷಗಳ ಹಿಂದೆ ಪತ್ನಿ ಆತನನ್ನು ಬಿಟ್ಟು ಹೋಗಿದ್ದರಿಂದ ಆತ ಖಿನ್ನತೆಗೊಳಗಾಗಿದ್ದನು. ಯೋಗೇಶ್ ತನ್ನ ತಾಯಿಯನ್ನು ಕೊಲೆ ಮಾಡಿ ನಮ್ಮ ಬಳಿ ಶರಣಾಗಿ ಕಋತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಎಂಎಚ್‍ಬಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಯೋಗೇಶ್ ಖಾಸಗಿ ಕಂಪನಿಯಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದನು. ಕೆಲವು ವರ್ಷಗಳ ಹಿಂದೆ ಪತ್ನಿ ಕೂಡ ಆತನನ್ನು ಬಿಟ್ಟು ಹೋಗಿದ್ದರಿಂದ ಆತ ಖಿನ್ನತೆಗೊಳಗಾಗಿದ್ದನು. ತಾಯಿಯ ಚಿಕಿತ್ಸೆಗೆ ಹಣವಿಲ್ಲದೇ ಆಕೆಯ ಜೊತೆ ದಿನ ಜಗಳವಾಡುತ್ತಿದ್ದನು.
ಶುಕ್ರವಾರ ನಸುಕಿನ ಜಾವ ಕೂಡ ತಾಯಿ ಹಾಗೂ ಮಗನ ನಡುವೆ ಜಗಳವಾಗಿದೆ. ಇಬ್ಬರ ಜಗಳದಿಂದ ಅಕ್ಕಪಕ್ಕದ ಮನೆಯವರು ಎದ್ದು ಪೊಲೀಸರಿಗೆ ಕರೆ ಮಾಡಿದ್ದಾರೆ. ಆದರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡುವ ಮೊದಲೇ ಯೋಗೇಶ್ ತನ್ನ ತಾಯಿಯನ್ನು ಕೊಲೆ ಮಾಡಿದ್ದಾನೆ.
ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕೊಲೆ ಮಾಡಲು ಬಳಸಿದ ಚಾಕುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಯೋಗೇಶ್ ಕೋಪದಲ್ಲಿ ನನ್ನ ತಾಯಿಯ ಕೊಲೆ ನಡೆದುಹೋಯಿತು ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದಾನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv