CrimeLatestMain PostNational

ಹಣಕ್ಕಾಗಿ 13ರ ಮಗಳನ್ನು 32ರ ವ್ಯಕ್ತಿ ಜೊತೆ ಮದುವೆ ಮಾಡಿದ ಪಾಪಿ ತಂದೆ

ಚೆನ್ನೈ: ವ್ಯಕ್ತಿಯೊಬ್ಬ ಹಣಕ್ಕಾಗಿ 13 ವರ್ಷದ ಮಗಳಿಗೆ 32 ವರ್ಷದ ವ್ಯಕ್ತಿಯೊಂದಿಗೆ ಮದುವೆ ಮಾಡಿಸಿದ ಘಟನೆ ತಮಿಳುನಾಡಿನ ಪೆರಂಲೂರಿನಲ್ಲಿ ನಡೆದಿದೆ.

ಬಾಲಕಿಯ ತಂದೆ ಮದ್ಯವಸನಿಯಾಗಿದ್ದ. ಈ ಹಿನ್ನೆಲೆಯಲ್ಲಿ ಆತನಿಗೆ ಹಣ ಬೇಕಿತ್ತು. ಅದೇ ಸಮಯಕ್ಕೆ ವರತರಾಜ್‍(32) ಹಣ ನೀಡುತ್ತೇನೆ. ಆದರೆ ಅದರ ಬದಲು ಮಗಳನ್ನು ಮದುವೆ ಮಾಡಿಕೊಡಲು ಹೇಳಿದ್ದ. ಈ ಹಿನ್ನೆಲೆಯಲ್ಲಿ ಮಗಳನ್ನು ವರತರಾಜ್‍ಗೆ ಮದುವೆ ಮಾಡಿಕೊಡಲು ಬಾಲಕಿಯ ತಂದೆ ಹಾಗೂ ಆತನ ಸಹೋದರಿ ಮುತ್ತುಲಕ್ಷ್ಮಿ ಸೇರಿ ಪ್ಲ್ಯಾನ್ ಮಾಡಿಕೊಂಡಿದ್ದರು. ಅದರಂತೆ ಮದುವೆ ಮಾಡಿಸಿದ್ದಾರೆ. ಇದನ್ನೂ ಓದಿ: ಸಿಪಿವೈ ಕಾರಿನ ಮೇಲೆ ಕಲ್ಲು, ಮೊಟ್ಟೆ ಎಸೆತ ಪ್ರಕರಣ- 14 ಜನರ ಮೇಲೆ FIR ದಾಖಲು

ಘಟನೆಗೆ ಸಂಬಂಧಿಸಿ ಬಾಲಕಿಯ ತಂದೆ ತಲೆಮರೆಸಿಕೊಂಡಿದ್ದು, ವರ ವರತರಾಜ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಬಾಲಕಿಯ ತಂದೆ ಮತ್ತು ಆತನ ಸಹೋದರಿ ಮುತ್ತುಲಕ್ಷ್ಮಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ತಂಗಿಯನ್ನು ಪ್ರೀತಿಸ್ತಿದ್ದ ಯುವಕನನ್ನು ಮಾರಕಾಸ್ತ್ರಗಳಿಂದ 40 ಬಾರಿ ಚುಚ್ಚಿ ಕೊಲೆ ಮಾಡಿದ ಅಣ್ಣ

Live Tv

Leave a Reply

Your email address will not be published. Required fields are marked *

Back to top button