ಚಿಕ್ಕಬಳ್ಳಾಪುರ: ತಂಗಿಯನ್ನು (Sister) ಪ್ರೀತಿಸುತ್ತಿದ್ದ ಯುವಕನಿಗೆ ಕಂಠಪೂರ್ತಿ ಕುಡಿಸಿ ಬಳಿಕ ಮಾರಕಾಸ್ತ್ರಗಳಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಹಾರೋಬಂಡೆ ಗ್ರಾಮದಲ್ಲಿ ನಡೆದಿದೆ.
ದೊಡ್ಡಬಳ್ಳಾಪುರ ಮೂಲದ ನಂದನ್ ಕೊಲೆಯಾದ ಯುವಕ. ಚಿಕ್ಕಬಳ್ಳಾಪುರ ತಾಲೂಕು ರಾಷ್ಟ್ರೀಯ ಹೆದ್ದಾರಿ 44 ಹಾರೋಬಂಡೆ ಬಳಿ ಬೆಟ್ಟದಲ್ಲಿ ಈ ಘಟನೆ ನಡೆದಿದೆ. ನಂದನ್ ಚಿಕ್ಕಬಳ್ಳಾಪುರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಈತ ದರ್ಶನ್ ತಂಗಿಯನ್ನು ಪ್ರೀತಿಸುತ್ತಿದ್ದ. ಆದರೆ ದರ್ಶನ್ ತಂಗಿಯ ತಂಟೆಗೆ ಬರದಂತೆ ಹಲವು ಸಲ ನಂದನ್‌ಗೆ ವಾರ್ನಿಂಗ್ ಮಾಡಿದ್ದ. ಇದರ ಮಧ್ಯೆ ಇನ್ಸ್‌ಸ್ಟಾಗ್ರಾಂನಲ್ಲಿ ದರ್ಶನ್‌ನ ತಂಗಿಯ ಜೊತೆಯಲ್ಲಿರುವ ಫೋಟೋ ಹಂಚಿಕೊಂಡಿದ್ದಾನೆ. ನಂದನ್ ಈ ವರ್ತನೆಗೆ ದರ್ಶನ್ ಕೆರಳಿ ಕೆಂಡವಾಗಿದ್ದ. ಇದನ್ನೂ ಓದಿ: ಕೇಜ್ರಿವಾಲ್ ಮೇಲೆ ಬಾಟಲಿ ಎಸೆದ ಕಿಡಿಗೇಡಿಗಳು
Advertisement
Advertisement
ಪದೇ ಪದೇ ಹೇಳಿದರೂ ಬುದ್ಧಿ ಕಲಿಯದ ನಂದನ್ ಕೊಲೆಗೆ ದರ್ಶನ್ ಹಾಗೂ ಸ್ನೇಹಿತ ಆಶ್ರಯ್ ಸೇರಿ ಸ್ಕೆಚ್ ಹಾಕಿದ್ದಾರೆ. ಮದ್ಯ ಸೇವನೆ ನೆಪದಲ್ಲಿ ನಂದನ್ ಅನ್ನು ನಂಬಿಸಿದ ದರ್ಶನ್ ಹಾರೋಬಂಡೆಗೆ ಕರೆದುಕೊಂಡಿದ್ದಾನೆ. ನಂತರ ನಂದನ್‌ಗೆ ಕಂಠಪೂರ್ತಿ ಕುಡಿಸಿ ಬಳಿಕ ಮಾರಕಾಸ್ತ್ರಗಳಿಂದ 40 ಬಾರಿ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾನೆ. ಘಟನೆಗೆ ಸಂಬಂಧಿಸಿ ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಗೆ ಸಂಬಂಧಿಸಿ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ದರ್ಶನ ಹಾಗೂ ಆಶ್ರಯ್‌ನನ್ನು ಬಂಧಿಸಿದ್ದಾರೆ (Arrest). ಇದನ್ನೂ ಓದಿ: ಹಿಂಡಲಗಾ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ವಿಚಾರಣಾಧೀನ ಕೈದಿ ಸಾವು