ವಾಷಿಂಗ್ಟನ್: ಇಲ್ಲಿಯವರೆಗೆ ಮಾನವ ನಿರ್ಮಿತ ಉಪಗ್ರಹಗಳನ್ನು ಮಂಗಳ ಗ್ರಹ, ಚಂದ್ರನ ಮೇಲೆ ಕಳುಹಿಸಲಾಗುತ್ತಿತ್ತು. ಆದರೆ ಯಾವುದೇ ಮಾನವ ನಿರ್ಮಿತ ವಸ್ತುವನ್ನು ಸೂರ್ಯನ ಸಮೀಪ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಸೂರ್ಯನ ಮೇಲ್ಮೈಗೆ ಮಾನವ ನಿರ್ಮಿತ ವಸ್ತು ತಲುಪಿದೆ.
ಈಗಾಗಲೇ ಮಾನವ ನಿರ್ಮಿತ ಸೋಲಾರ್ ಪ್ರೋಬ್ ಒಂದು ಸೂರ್ಯನ ಮೇಲ್ಮೈಯನ್ನು ತಲುಪಿದೆ. ಈ ಮೂಲಕ ಇದೇ ಮೊದಲ ಬಾರಿ ಮಾನವ ನಿರ್ಮಿತ ವಸ್ತು ಸೂರ್ಯನ ಮೇಲ್ಮೈ ತಲುಪಿದ ದಾಖಲೆ ಬರೆದಿದೆ. ಸೂರ್ಯನ ಮೇಲ್ಮೈ ಸ್ಪರ್ಶಿಸಿರುವ ಪಾರ್ಕರ್ ಸೋಲಾರ್ ಪ್ರೋಬ್ ಒಂದು ಗಮನಾರ್ಹ ಸಾಧನೆಯಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಸಿದ್ಧವಾಗುತ್ತಿದೆ 150 ಕೆಜಿ ಹೊರಬಲ್ಲ ಡ್ರೋನ್
ಸೂರ್ಯನನ್ನು ಸ್ಪರ್ಶಿಸಲು ಸಾಧ್ಯವಾಗಿರುವ ಈ ಪಾರ್ಕರ್ ಸೋಲಾರ್ ಪ್ರೋಬ್ ಅನ್ನು 2018ರಲ್ಲಿ ಉಡಾವಣೆ ಮಾಡಲಾಗಿತ್ತು. ಅಮೇರಿಕಾದ ಸೌರ ಖಗೋಳ ಶಾಸ್ತ್ರಜ್ಞ ಯುಜಿನ್ ಪಾರ್ಕರ್ ಅವರ ಹೆಸರನ್ನು ಅದಕ್ಕೆ ನೀಡಲಾಗಿತ್ತು.
ಪಾರ್ಕರ್ ಸೋಲಾರ್ ಪ್ರೋಬ್‌ಅನ್ನು ಸೂರ್ಯನ ಶಾಖದಿಂದ ರಕ್ಷಿಸಲು 4.5 ಇಂಚು ದಪ್ಪದ ಕಾರ್ಬನ್ ಕಂಪೋಸಿಟ್ ಕವಚವನ್ನು ಹೊದಿಸಲಾಗಿದೆ. ಇದು 1,377 ಡಿಗ್ರಿ ಸೆಲ್ಸಿಯಸ್ ತಾಪವನ್ನು ತಡೆದುಕೊಳ್ಳಬಲ್ಲದು ಎಂದು ನಾಸಾ ಹೇಳಿದೆ. ಇದನ್ನೂ ಓದಿ: 1 ರೂ. ಪ್ಲಾನ್ ಪರಿಚಯಿಸಿದ ಜಿಯೋ
ಈ ಮೂಲಕ ಇಲ್ಲಿಯ ವರೆಗೆ ವಿಜ್ಞಾನಿಗಳಿಂದ ಬಿಡಿಸಲಸಾಧ್ಯವಾದ ಸೂರ್ಯನ ಮೇಲ್ಮೈಯ ನಿಗೂಢ ಪ್ರಶ್ನೆಗಳಿಗೆ ಈ ಸೋಲಾರ್ ಪ್ರೋಬ್ ಉತ್ತರ ನೀಡಲಿದೆ.