ಬೆಂಗಳೂರು: ಇನ್ನು ಮುಂದೆ ಡ್ರೋನ್ ಮೂಲಕ 150 ಕೆಜಿ ಸಾಮರ್ಥ್ಯದ ವಸ್ತುಗಳನ್ನು ಸಾಗಿಸಬಹುದು.
ಹೌದು. 10, 15 ಕೆಜಿ ಸಾಮರ್ಥ್ಯ ವಸ್ತುಗಳನ್ನು ಈಗ ಸುಲಭವಾಗಿ ಸಾಗಿಸಬಹುದು. ಆದರೆ 150 ಕೆಜಿ ಸಾಮರ್ಥ್ಯದ ವಸ್ತುಗಳನ್ನು ಸಾಗಿಸಬಲ್ಲ ಡ್ರೋನ್ ತಯಾರಾಗುತ್ತಿದೆ. ಈ ಡ್ರೋನ್ ಬೆಂಗಳೂರಿನಲ್ಲೇ ತಯಾರಾಗುತ್ತಿರುವುದು ವಿಶೇಷ.
Advertisement
ಹೆಚ್‌ಎಲ್-15 ಎಂದು ಕರೆಯಲಾಗುತ್ತಿರುವ ಡ್ರೋನ್ ಸುಮಾರು 150 ಕೆಜಿ ತೂಕವನ್ನು ಹೊರಬಲ್ಲದು ಮಾತ್ರವಲ್ಲದೆ ಒಂದು ಬಾರಿ ಚಾರ್ಜ್ ಮಾಡಿದರೆ 150 ಕಿ.ಮೀ ಕ್ರಮಿಸಬಲ್ಲದು. ಅಷ್ಟೇ ಅಲ್ಲದೇ ಗಂಟೆಗೆ 100 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಈ ಡ್ರೋನ್‌ಗಿದೆ. ಇದನ್ನೂ ಓದಿ: ಪ.ಬಂಗಾಳದಲ್ಲಿ 7 ವರ್ಷದ ಬಾಲಕನಿಗೆ ಓಮಿಕ್ರಾನ್ ಸೋಂಕು- ತೆಲಂಗಾಣದಲ್ಲೂ 2 ಪ್ರಕರಣ ದೃಢ
Advertisement
ಡ್ರೋನ್ ಅನ್ನು ನ್ಯೂ ಸ್ಪೇಸ್ ರಿಸರ್ಚ್ ಆಂಡ್ ಟೆಕ್ನಾಲಜಿ ವಿನ್ಯಾಸಗೊಳಿಸಿದೆ. ಹಾಗೆಯೇ ಈ ಡ್ರೋನ್ ತಯಾರಿಕೆಯಲ್ಲಿ ವಿಮಾನ ಸೇವೆ ನೀಡುತ್ತಿರುವ ಸ್ಪೈಸ್‌ಜೆಟ್ ಸಂಸ್ಥೆಯ ಪಾಲುದಾರಿಕೆಯೂ ಇದೆ.
Advertisement
ಭಾರತಲ್ಲಿ ತಯಾರಾಗುತ್ತಿರುವ ಡ್ರೋನ್ ಇನ್ನೆರಡು ವರ್ಷಗಳಲ್ಲಿ ಕಾರ್ಯನಿರ್ವಹಿಸಲಿದೆ. ಈ ಡ್ರೋನ್‌ಗಳು ಹಿಮಾಲಯದಲ್ಲಿಯೂ ಕಾರ್ಯಾಚರಣೆ ನಡೆಸಲು ಸಮರ್ಥವಾಗಿದೆ. ಇದರಲ್ಲಿ ಸುಧಾರಿತ ಕಂಪ್ಯೂಟರಿಂಗ್ ವ್ಯವಸ್ಥೆ ಇದ್ದು, ಕೃತಕ ಬುದ್ಧಿಮತ್ತೆಯೊಂದಿಗೆ ಸ್ವತಂತ್ರ ನಿರ್ಧಾರವನ್ನೂ ತೆಗೆದುಕೊಳ್ಳಬಲ್ಲದು ಎಂದು ನ್ಯೂ ಸ್ಪೇಸ್ ಸಿಇಒ ಸಮೀರ್ ಜೋಶಿ ಹೇಳಿದ್ದಾರೆ. ಇದನ್ನೂ ಓದಿ: ಪಠ್ಯಪುಸ್ತಕ ವಿತರಿಸದಿರುವುದು ಶಿಕ್ಷಣ ಸಚಿವರ ಅಸಮರ್ಥತೆಯ ಸಂಕೇತ: ಎಎಪಿ
Advertisement
ಇ-ಕಾಮರ್ಸ್ನಲ್ಲಿ ಬಳಕೆಯಾಗುವ ಡ್ರೋನ್‌ಗಳು ಹೆಚ್ಚೆಂದರೆ 5 ಕೆಜಿವರೆಗಿನ ಸರಕುಗಳನ್ನಷ್ಟೇ ಹೊರುವ ಸಾಮರ್ಥ್ಯ ಹೊಂದಿರುತ್ತದೆ. ಆದರೆ ಈ ಡ್ರೋನ್ ಅನ್ನು ಭಿನ್ನವಾಗಿ ನಿರ್ಮಿಸಲಾಗುತ್ತಿದ್ದು, ತುರ್ತು ಸಮಯದಲ್ಲಿ 150 ಕೆಜಿ ಸರಕುಗಳನ್ನು ಸಾಗಿಸಲು ಸಹಕಾರಿಯಾಗಲಿದೆ.