ರಾಮನಗರ: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ದೋಖಾ ಹೆಚ್ಚಾಗಿದೆ. ಫೇಸ್‌ಬುಕ್‌ನಲ್ಲಿ (Facebook) ಅಪರಿಚಿತರೊಡನೆ ಚಾಟ್ ಮಾಡುವಾಗ ಎಚ್ಚರ ತಪ್ಪಿದ್ರೆ ಹಣ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಲಿದೆ. ಫೇಕ್ ಅಕೌಂಟ್, ಹುಡುಗಿಯರ ಹೆಸರಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂದಾಗ ಎಚ್ಚರಿಕೆ ವಹಿಸದಿದ್ರೆ ಪಶ್ಚಾತಾಪ ಪಡುವ ಸಂದರ್ಭ ಬಂದೊದಗಲಿದೆ. ಇಂತಹದ್ದೇ ಒಂದು ಪ್ರಕರಣ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ನಡೆದಿದೆ.
ಹೆಣ್ಣಿನ ವ್ಯಾಮೋಹಕ್ಕೆ ಬಿದ್ದು ಯುವಕನೋರ್ವ ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದಾನೆ. ಹುಡುಗಿಯ ಹೆಸರಲ್ಲಿ ಯುವಕನ ಪೋಟೋ ಹಾಗೂ ಇತರ ಮಾಹಿತಿ ಪಡೆದ ಅಪರಿಚಿತ ವ್ಯಕ್ತಿ ಪೋಟೋ ಎಡಿಟ್ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಯುವಕ ಪೋಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಫೇಸ್‌ಬುಕ್‌ನಲ್ಲಿ ಅಪ್ಲೋಡ್ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ.
Advertisement
Advertisement
ಅಪರಿಚಿತ ವ್ಯಕ್ತಿಯ ಬ್ಲಾಕ್ ಮೇಲ್‌ಗೆ ಹೆದರಿ ಕನಕಪುರ ಮೂಲದ ಯುವಕ ರಾಜೇಶ್ ಬರೋಬ್ಬರಿ 41 ಲಕ್ಷ ರೂ. ಹಣ ಕಳೆದುಕೊಂಡಿದ್ದಾನೆ. ಗೀತಾ ಸೆಕ್ಸಿ ಎಂಬ ಫೇಸ್‌ಬುಕ್ ಪ್ರೋಫೈಲ್‌ನಿಂದ ಯುವಕನಿಗೆ ವಂಚನೆ ಮಾಡಲಾಗಿದೆ. ಕಳೆದ ಡಿಸೆಂಬರ್‌ನಿಂದ ನಿರಂತರವಾಗಿ ಬ್ಲ್ಯಾಕ್‌ಮೇಲ್ ಮಾಡಿರೋ ಖದೀಮರು ರಾಜೇಶ್ ಬಳಿ ಲಕ್ಷಾಂತರ ರೂ. ಹಣ ಪೀಕಿದ್ದಾರೆ. ಇದನ್ನೂ ಓದಿ: ತನ್ನ ಪತ್ನಿ ಜೊತೆ ಹೆಚ್ಚಾಗಿ ಫೋನ್‌ನಲ್ಲಿ ಮಾತನಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಕೊಲೆ
Advertisement
Advertisement
ಘಟನೆ ಸಂಬಂಧ ರಾಮನಗರ (Ramanagara) ಸೆನ್ ಪೊಲೀಸ್ ಠಾಣೆಗೆ ರಾಜೇಶ್ ದೂರು ನೀಡಿದ್ದು ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ಕೇದಾರನಾಥ ಯಾತ್ರೆಗೆ ತೆರಳಿದ್ದ ಚಿಕ್ಕಮಗಳೂರು ಮೂಲದ ಯುವಕ ಸಾವು
Web Stories