ಲಕ್ನೋ: ರಾತ್ರಿ ಊಟ ನೀಡಲು ತಡ ಮಾಡಿದ್ದಕ್ಕೆ ಪತಿಯೊಬ್ಬ ತವಾದಿಂದ(Tawa) ಪತ್ನಿಯ(Wife) ತಲೆಗೆ ಹೊಡೆದು ಹತ್ಯೆ ಮಾಡಿದ ಘಟನೆ ನೋಯ್ಡಾದಲ್ಲಿ ನಡೆದಿದೆ.
ಬಿಹಾರ್ ಮೂಲದ ಅನುಜ್ ಕುಮಾರ್ (37) ಪತ್ನಿ ಖುಷ್ಬುಳನ್ನು ಹತ್ಯೆ ಮಾಡಿದ್ದಾನೆ. ಈತ ನೋಯ್ಡಾದಲ್ಲಿ ಆಟೋ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಅನುಜ್ ರಾತ್ರಿ ಊಟಕ್ಕೆಂದು ಮನೆಗೆ ತೆರಳಿದ್ದ.
ಆದರೆ ಆತನ ಪತ್ನಿ ಖುಷ್ಬು ಊಟ ತಯಾರು ಮಾಡಲು ವಿಳಂಬ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಅನುಜ್ ಪತ್ನಿ ಖುಷ್ಬು ಬಳಿ ವಾಗ್ವಾದ ನಡೆಸಿದ್ದಾನೆ. ಇದಾದ ಬಳಿಕ ಖುಷ್ಬುವಿನ ತಲೆಗೆ ಅಲ್ಲೇ ಇದ್ದ ತವಾದಿಂದ ಹೊಡೆದಿದ್ದಾನೆ. ತೀವ್ರ ಗಾಯಗೊಂಡ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಅಲ್ಲಿ ಪ್ರವಾಹ ಆಗಿಲ್ಲ, ಆ ಮೋರಿ ಎಲ್ಲಿದೆ, ಎಲ್ಲಿಗೆ ಹೋಗಿ ತಲುಪುತ್ತೆ ಗೊತ್ತಿಲ್ಲ: ಹ್ಯಾರಿಸ್
ಪತಿ, ಪತ್ನಿ ಇಬ್ಬರೂ ಬಿಹಾರ ಮೂಲದವರಾಗಿದ್ದು, ಇವರಿಗೆ ಓರ್ವ ಪುತ್ರನಿದ್ದಾನೆ. ಘಟನೆಗೆ ಸಂಬಂಧಿಸಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ನೋಯ್ಡಾ ಪೊಲೀಸರು ಅನುಜ್‍ನನ್ನು ಬಂಧಿಸಿದ್ದಾರೆ.(Arrest) ಇದನ್ನೂ ಓದಿ: ಇನ್ಮುಂದೆ ಟೋಲ್‌ಗಳಲ್ಲಿ ವಾಹನ ನಿಲ್ಲಿಸುವಂತಿಲ್ಲ- ಟೋಲ್ ಸಂಗ್ರಹಕ್ಕೆ ವಿಶೇಷ ತಂತ್ರಜ್ಞಾನ ಅಳವಡಿಕೆಗೆ ಚಿಂತನೆ