ಪ್ರೀತಿಸಿ ಮದ್ವೆಯಾಗಿ 2 ವರ್ಷದ ಮಗಳ ಎದುರೇ ಪತ್ನಿಯನ್ನ ಕೊಂದ

Public TV
2 Min Read
746114 kamil delhi 102218

– ಶವದ ಜೊತೆ 24 ಗಂಟೆ ಕಳೆದು ಶರಣಾದ

ದೆಹಲಿ: ತನ್ನ ಎರಡು ವರ್ಷದ ಮಗಳ ಎದುರೇ ಪತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿದ ಘಟನೆ ಕೇಂದ್ರ ದೆಹಲಿಯ ಕಮಲಾ ಮಾರುಕಟ್ಟೆಯ ಬಡವಾಣೆಯಲ್ಲಿ ನಡೆದಿದೆ.

22 ವರ್ಷದ ರೇಷ್ಮಾ ಕೊಲೆಯಾದ ನತದೃಷ್ಟೆ. 24 ವರ್ಷದ ಕಮಲಿ ತನ್ನ ಪತ್ನಿ ನಗರದ ಇಬ್ಬರು ಯುವಕರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಶುಕ್ರವಾರ ರಾತ್ರಿಯೇ ಕಮಲಿ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಆದ್ರೆ ಮೃತ ದೇಹವನ್ನು ಮನೆಯಿಂದ ಸ್ಥಳಾಂತರಿಸಲು ಪ್ರಯತ್ನಿಸಿ ವಿಫಲವಾಗಿದ್ದಾನೆ. 24 ಗಂಟೆ ಮಗಳೊಂದಿಗೆ ಮನೆಯಲ್ಲಿಯೇ ಕುಳಿತಿದ್ದ ಕಮಲಿ ಭಾನುವಾರ ರಾತ್ರಿ ಸುಮಾರು 1 ಗಂಟೆಗೆ ಕಮಲಾ ಮಾರುಕಟ್ಟೆಯ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಆರೋಪಿಯ ಹೇಳಿಕೆ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿದಾಗ ರೇಷ್ಮಾ ಮೃತದೇಹ ಪತ್ತೆಯಾಗಿದೆ ಎಂದು ಕೇಂದ್ರ ದೆಹಲಿಯ ಡಿಸಿಪಿ ಎಂ.ಎಸ್.ರಾಂಧವ್ ತಿಳಿಸಿದ್ದಾರೆ.

delhi police.jpeg

ಅಂಬೇಡ್ಕರ್ ಯೂನಿವರ್ಸಿಟಿಯಲ್ಲಿ ಡಿ ಗ್ರೂಪ್ ನೌಕರನಾಗಿ ಕಮಲಿ ಕೆಲಸ ಮಾಡಿಕೊಂಡಿದ್ದನು. ಮೂರು ವರ್ಷಗಳ ಹಿಂದೆ ರೇಷ್ಮಾಳನ್ನು ಪ್ರೀತಿಸಿ ಮದುವೆಯಾಗಿ, ಕಮಲಾ ಮಾರುಕಟ್ಟೆ ಬಡಾವಣೆಯಲ್ಲಿ ಫ್ಲ್ಯಾಟ್ ಬಾಡಿಗೆ ಪಡೆದು ಜೀವನ ಸಾಗಿಸುತ್ತಿದ್ದನು. ಮದುವೆಯ ನಂತರ ಪತ್ನಿ ಸ್ನೇಹಿತರ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದನು. ಈ ಹಿನ್ನೆಲೆಯಲ್ಲಿ ಇಬ್ಬರ ಮಧ್ಯೆ ಪ್ರತಿನಿತ್ಯ ಜಗಳ ನಡೆಯುತ್ತಿತ್ತು.

ಪತಿಯೊಂದಿಗೆ ಜಗಳ ಮಾಡಿಕೊಂಡು ತವರು ಮನೆ ಸೇರಿದ್ದ ರೇಷ್ಮಾ ಶುಕ್ರವಾರ ಹಿಂದಿರುಗಿದ್ದಳು. ಮನೆಗೆ ಬಂದ ಪತ್ನಿಯೊಡನೇ ಕಮಲಿ ಮತ್ತೆ ಅದೇ ವಿಚಾರಕ್ಕೆ ಜಗಳ ಮಾಡಿದ್ದಾನೆ. ಕೊನೆಗೆ ಮದ್ಯದ ನಶೆಯಲ್ಲಿದ್ದ ಪತ್ನಿಯನ್ನು ಮಗಳ ಎದುರೇ ಕೊಲೆ ಮಾಡಿದ್ದಾನೆ. ಕಮಲಿ ಓರ್ವ ಮದ್ಯವ್ಯಸನಿ ಆಗಿದ್ದು, ರೇಷ್ಮಾಗೆ ತವರು ಮನೆಯಿಂದ ಹಣ ತರುವಂತೆ ಪೀಡಿಸುತ್ತಿದ್ದನು. ಹಣ ತರದೇ ಇದ್ದಾಗ ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದನು ಎಂದು ರೇಷ್ಮಾ ಪೋಷಕರು ಆರೋಪಿಸುತ್ತಿದ್ದಾರೆ.

ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೃತ ದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದ್ದು, ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *