ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ತಮ್ಮನ ಹೆಂಡತಿಯನ್ನ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಅಯ್ಯಪ್ಪನಗರದಲ್ಲಿ ನಡೆದಿದೆ.
ಸುಮತಿ(30) ಕೊಲೆಯಾದ ಮಹಿಳೆ. ಇವರು ಮೂಲತಃ ಆಂಧ್ರಪ್ರದೇಶದವರಾಗಿದ್ದು ಕಳೆದ ಏಳು ತಿಂಗಳಿನಿಂದ ಕೆ.ಆರ್.ಪುರಂನ ದೇವಸಂದ್ರ ಮುಖ್ಯರಸ್ತೆಯ ಅಯ್ಯಪ್ಪನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಮಹಿಳೆ ಹಾಗೂ ಗಂಡ ಮೋಹನ್ ರೆಡ್ಡಿ ಮಾತ್ರ ಇಲ್ಲಿ ನೆಲೆಸಿದ್ದರು. ಕೊಲೆಯಾದ ಸುಮತಿಯ ಭಾವ(ಪತಿಯ ಅಣ್ಣ) ವಿನಾಯಕ ರೆಡ್ಡಿ ಅಗಾಗ ಮನೆಗೆ ಬಂದು ಹೋಗುತ್ತಿದ್ದ.
ಬುಧವಾರ ಬೆಳಗ್ಗೆ ಮನೆಯಲ್ಲಿ ಸುಮತಿ ಒಬ್ಬರೇ ಇರುವಾಗ ವಿನಾಯಕ ರೆಡ್ಡಿ ಬಂದು ಮಚ್ಚಿನಿಂದ ಸುಮತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದಾನೆ. ಯಾವ ಕಾರಣಕ್ಕೆ ಕೊಲೆ ಮಾಡಿದ್ದಾನೆ ಎಂಬುದು ಪ್ರಶ್ನೆಯಾಗಿ ಉಳಿದಿದೆ.
ವಿಷಯ ತಿಳಿದ ಕೆ.ಆರ್.ಪುರಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಆರೋಪಿ ವಿನಾಯಕ ರೆಡ್ಡಿಗಾಗಿ ಬಲೆ ಬೀಸಿದ್ದಾರೆ.
ಮಹಿಳೆಯ ಶವದ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಶವವನ್ನು ಪತಿ ಮೋಹನ್ ರೆಡ್ಡಿ ಅವರಿಗೆ ಹಸ್ತಾಂತರಿಸಲಾಗಿದೆ.
ಊಟ ತಡವಾಗಿ ತಂದ ಪತ್ನಿಯನ್ನ ಗಡಾರಿಯಿಂದ ಇರಿದು ಕೊಂದೇ ಬಿಟ್ಟ! https://t.co/QILm3fkRmg#Murder #lunch #husband #wife #Chikkaballapur pic.twitter.com/bEjCZLCPGe
— PublicTV (@publictvnews) November 15, 2017
ಮಗಳ ಮೇಲೆ ಅತ್ಯಾಚಾರವೆಸಗಿದ್ದ ಮಲತಂದೆಗೆ ಜೀವಾವಧಿ ಶಿಕ್ಷೆ https://t.co/vZBTCqef0D#Kolar #Rape #daughter #Stepfather #lifesentence pic.twitter.com/vZQ3Vu3FQU
— PublicTV (@publictvnews) November 16, 2017