ಭೋಪಾಲ್: ಸೋದರಳಿಯನ ಮಾಟಮಂತ್ರಕ್ಕೆ ಅಭ್ಯಾಸಕ್ಕೆ ವೃದ್ಧ ದಂಪತಿ ಸುಟ್ಟು ಕರಲಕಾದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಸುಮೇರ್ ಸಿಂಗ್ ಕುಲಸ್ತೆ (60) ಮತ್ತು ಅವರ ಪತ್ನಿ ಸಿಯಾಬಾಯಿ ಮೃತರಾಗಿದ್ದಾರೆ. 27 ವರ್ಷದ ದಯಾರಾಮ್ ಕುಲಸ್ತೆ ಬಂಧಿತ ಆರೋಪಿಯಾಗಿದ್ದಾನೆ. ಸೋದರಳಿಯನ ಬ್ಲ್ಯಾಕ್ ಮ್ಯಾಜಿಕ್ಗೆ ದಂಪತಿ ಬಲಿಯಾಗಿದ್ದಾರೆ. ಇದನ್ನೂ ಓದಿ: ಕ್ಯೂನಲ್ಲಿ ನಿಂತೆ 16 ಸಾವಿರ ರೂಪಾಯಿ ಸಂಪಾದಿಸುತ್ತಾನೆ
ಜನವರಿ 9 ಮತ್ತು 10ರ ಮಧ್ಯರಾತ್ರಿ ಚೌರೈ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ. ದಂಪತಿಯನ್ನು ಕೊಂದು ಅವರ ಗುಡಿಸಲಿಗೆ ಬೆಂಕಿ ಹಚ್ಚಿದ್ದಾರೆ. ಆರೋಪಿಯನ್ನು ಸೋಮವಾರ ಬರೇಲಾ ಪೊಲೀಸ್ ಠಾಣೆ ವ್ಯಾಪ್ತಿಯ ಹಿನೋಟಿಯಾ ಗ್ರಾಮದಲ್ಲಿ ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಶಿವೇಂದ್ರ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಸಲಿಂಗ ಸಂಗಾತಿ ಜೊತೆಗೆ ವಧು ಎಸ್ಕೇಪ್
ಮೃತ ದಂಪತಿ ಮಾಡಿದ ‘ ಬ್ಲ್ಯಾಕ್ ಮ್ಯಾಜಿಕ್’ನಿಂದಾಗಿ ತನ್ನ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿ ದಯಾರಾಮ್ ಕುಲಸ್ತೆ ಅನುಮಾನದಿಂದ ಈ ಕೊಲೆ ಮಾಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಘಟನೆಯ ನಂತರ ದಯಾರಾಮ್ ನಾಪತ್ತೆಯಾಗಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದೇವೆ ಎಂದು ಪೊಲೀಸರು ಹೇಳಿದ್ದಾರೆ.