ಜೈಪುರ: ನಾಲ್ವರು ಕುಟುಂಬಸ್ಥರನ್ನು ಕೊಂದು 38 ವರ್ಷದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಸ್ಥಾನದ (Rajastan) ಜೋಧಪುರದಲ್ಲಿ (Jodhpur) ನಡೆದಿದೆ.
ಆರೋಪಿಯನ್ನು ಶಂಕರ್ ಲಾಲ್ ಎಂದು ಗುರುತಿಸಲಾಗಿದ್ದು, ಶುಕ್ರವಾರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ತಂದೆ ಸೋನಾರಾಮ್ (65) ಅನ್ನು ಕೊಡಲಿಯಿಂದ ಕೊಚ್ಚಿ ಹತ್ಯೆಗೈದು, ಬಳಿಕ ತಾಯಿ ಚಂಪಾ (55), ಆರೋಪಿಯ ಮಕ್ಕಳಾದ ಲಕ್ಷ್ಮಣ್ (14), ಮತ್ತು ದಿನೇಶ್ (8) ಅನ್ನು ಹತ್ಯೆಗೈದಿದ್ದಾನೆ. ನಂತರ ಶವಗಳನ್ನು ತನ್ನ ಮನೆಯ ನೀರಿನ ಟ್ಯಾಂಕ್‍ಗೆ ಎಸೆದು, ಸಮೀಪದ ಸಂಬಂಧಿಕರ ಮನೆಗೆ ತೆರಳಿ ಅವರ ಮನೆಯ ಟ್ಯಾಂಕ್‍ಗೆ ಹಾರಿ ಶಂಕರ್ ಲಾಲ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ಗುಜರಾತ್ ಚುನಾವಣೆ – ಮಾಜಿ ಪತ್ರಕರ್ತ, ಟಿವಿ ಆ್ಯಂಕರ್ ಇಸುದನ್ ಗಧ್ವಿ ಎಎಪಿ ಸಿಎಂ ಅಭ್ಯರ್ಥಿ
ಪೀಲ್ವಾ ಗ್ರಾಮದಲ್ಲಿ ರೈತನಾಗಿದ್ದ ಶಂಕರ್ ಲಾಲ್ ಅಫೀಮು ವ್ಯಸನಿಯಾಗಿದ್ದ. ಆತನ ಪತ್ನಿ ಮತ್ತು ಕುಟುಂಬಸ್ಥರಿಗೆ ಮಾದಕ ದ್ರವ್ಯ ಬೆರೆಸಿ ನೀಡಿದರಿಂದ ಅವರಿಗೆ ನಡೆಯುತ್ತಿದ್ದ ಘಟನೆ ಬಗ್ಗೆ ತಿಳಿದು ಬಂದಿಲ್ಲ ಎಂದು ಪೊಲೀಸರು ಶಂಕಿಸಿದ್ದಾರೆ. ಶನಿವಾರ ಬೆಳಗ್ಗೆ ನೀರಿನ ಟ್ಯಾಂಕ್‍ನಿಂದ ಮೃತದೇಹಗಳನ್ನು ಹೊರತೆಗೆದು ಘಟನೆ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ನಮ್ಮ ಪಕ್ಷದ ಕಾರ್ಯಕರ್ತರಿಂದ ಹಣ ಸಂಗ್ರಹಿಸಿದ್ರೆ ಬಿಜೆಪಿಯವರಿಗೇನು ನೋವು?: ಡಿ.ಕೆ. ಶಿವಕುಮಾರ್