Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸಹೋದರನನ್ನು ಮದುವೆಯಾಗಿದ್ದಕ್ಕೆ ಮಹಿಳೆಯ ಕುಟುಂಬವನ್ನೇ ನಾಶಗೈದ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Crime | ಸಹೋದರನನ್ನು ಮದುವೆಯಾಗಿದ್ದಕ್ಕೆ ಮಹಿಳೆಯ ಕುಟುಂಬವನ್ನೇ ನಾಶಗೈದ!

Crime

ಸಹೋದರನನ್ನು ಮದುವೆಯಾಗಿದ್ದಕ್ಕೆ ಮಹಿಳೆಯ ಕುಟುಂಬವನ್ನೇ ನಾಶಗೈದ!

Public TV
Last updated: May 29, 2024 8:28 pm
Public TV
Share
3 Min Read
ಕೊಲೆಗೈದ ಆರೋಪಿ ಆಸೀಫ್‌ (ಎಡ) , ಕೊಲೆಯಾದ ವಸಂತಾ(ಬಲ)
ಕೊಲೆಗೈದ ಆರೋಪಿ ಆಸೀಫ್‌ (ಎಡ) , ಕೊಲೆಯಾದ ವಸಂತಾ(ಬಲ)
SHARE

– ಕೊಪ್ಪಳದಲ್ಲಿ ಮೂವರ ಬರ್ಬರ ಹತ್ಯೆ 
– ಕೃತ್ಯ ನಡೆದ 24 ಗಂಟೆಯಲ್ಲಿ ಆರೋಪಿ ಆಸೀಫ್‌ ಅರೆಸ್ಟ್‌

ಕೊಪ್ಪಳ: ಒಂದೇ ಮನೆಯಲ್ಲಿ ಮಗಳು, ತಾಯಿ ಮತ್ತು ಮಗ ಶವವಾಗಿ ಪತ್ತೆಯಾಗಿದ್ದರು. ಶವ ನೋಡಿದವರು ಆತ್ಮಹತ್ಯೆ ಎಂದೇ ಹೇಳಿದ್ದರು. ಮೇಲ್ನೋಟಕ್ಕೆ ಮೂವರ ಸಾವು ಕೂಡಾ ಆತ್ಮಹತ್ಯೆ ರೀತಿಯೇ ಇತ್ತು. ಆದರೆ ಪೊಲೀಸರು ತನಿಖೆ (Police Investigation) ನಡೆಸಿದಾಗ ಮೂವರದ್ದು ಆತ್ಮಹತ್ಯೆಯಲ್ಲ ಕೊಲೆ (Murder) ಎನ್ನುವುದು ದೃಢಪಟ್ಟಿದೆ.

ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಗ್ರಾಮದಲ್ಲಿರುವ ಆಶ್ರಯ ಬಡಾವಣೆಯಲ್ಲಿರುವ ಮನೆಯಲ್ಲಿ ಮಂಗಳವಾರ ಮೂವರು ಶವವಾಗಿ ಪತ್ತೆಯಾಗಿದ್ದರು. ರಾಜೇಶ್ವರಿ (50), ರಾಜೇಶ್ವರಿ ಪುತ್ರಿ ವಸಂತಾ(28) ವಸಂತಾಳ ಮಗಳ ಸಾಯಿ ಧರ್ಮತೇಜ್‌(5) ಅವರ ಶವ ಬಾಡಿಗೆ ಮನೆಯಲ್ಲಿ ಪತ್ತೆಯಾಗಿತ್ತು.

ಸೋಮವಾರ ಸಮೀಪದ ನಿವಾಸಿಗಳ ಜೊತೆ ಮಾತನಾಡಿದ್ದ ಮೂವರು ಸಂಜೆ ನಂತರ ಯಾರಿಗೂ ಕಣಿಸಿರಲಿಲ್ಲ. ಮಂಗಳವಾರ ಮುಂಜಾನೆ ಮನೆ ಬಾಗಿಲು ತೆರೆದು ನೋಡಿದಾಗ, ಅಡುಗೆ ಮನೆಯಲ್ಲಿ ವಸಂತಾಳ ಶವ ಸಿಕ್ಕರೆ, ಮನೆಯ ಬೆಡ್ ರೂಮ್ ನಲ್ಲಿ ರಾಜೇಶ್ವರಿ ಮತ್ತು ರಾಜೇಶ್ವರಿ ಮೊಮ್ಮಗ ಸಾಯಿಧರ್ಮತೇಜ್ ಶವ ಸಿಕ್ಕಿತ್ತು. ಇದನ್ನೂ ಓದಿ: ಪ್ಯಾಲೆಸ್ತೀನ್‌ ಬೆಂಬಲಿಸಿದ್ದಕ್ಕೆ ಟ್ರೋಲ್‌ ಬೆನ್ನಲ್ಲೇ ಹಿಟ್‌ಮ್ಯಾನ್‌ ಪತ್ನಿ ಪೋಸ್ಟ್‌ ಡಿಲೀಟ್

ಕೊಲೆಯಾದ ರಾಜೇಶ್ವರಿ ಮತ್ತು ವಸಂತಾ ಪುತ್ರ ಸಾಯಿ ಧರ್ಮತೇಜ್
ಕೊಲೆಯಾದ ರಾಜೇಶ್ವರಿ ಮತ್ತು ವಸಂತಾ ಪುತ್ರ ಸಾಯಿ ಧರ್ಮತೇಜ್

ಮೂವರ ಶವದ ಮೇಲೆ ಯಾವುದೇ ಗಾಯದ ಗುರುತುಗಳು ಇರಲಿಲ್ಲ. ಹೀಗಾಗಿ ಮೇಲ್ನೋಟಕ್ಕೆ ಕೌಟುಂಬಿಕ ಕಲಹದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಈ ಬಗ್ಗೆ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು. ಸ್ಥಳಕ್ಕೆ ಕೊಪ್ಪಳ ಎಸ್ಪಿ ಯಶೋಧಾ ವಂಟಗೋಡಿ ಕೂಡಾ ಆಗಮಿಸಿ ಪರಿಶೀಲನೆ ನಡೆಸಿದ್ದರು.

ಮೂವರ ಶವಗಳನ್ನು ನೋಡಿದಾಗ ಆರಂಭದಲ್ಲಿಯೇ ಪೊಲೀಸರು ಕೂಡಾ ಆತ್ಮಹತ್ಯೆಯ ಶಂಕೆಯನ್ನೇ ಹೊಂದಿದ್ದರು. ಆದರೆ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ? ಆತ್ಮಹತ್ಯೆ ಹೇಗೆ ಮಾಡಿಕೊಂಡರು ಅನ್ನೋದರ ತನಿಖೆ ಆರಂಭಿಸಿದಾಗ ಪೊಲೀಸರಿಗೆ ಆತ್ಮಹತ್ಯೆಗೈಯಲು ಕಾರಣಾದ ಯಾವುದೇ ಸಂಗತಿ ಕೂಡಾ ಪತ್ತೆಯಾಗಿರಲಿಲ್ಲ.

ತನಿಖೆಯಲ್ಲಿ ಮೂವರು ಕೂಡಾ ಆತ್ಮಹತ್ಯೆ ಮಾಡಿಕೊಂಡಿಲ್ಲ. ಬದಲಾಗಿ ಮೂವರನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎನ್ನುವುದು ದೃಢಪಟ್ಟಿತ್ತು. ಹಾಗಾದ್ರೆ ಕೊಲೆ ಮಾಡಿದವರು ಯಾರು ಅಂತ ಪತ್ತೆ ಹಚ್ಚಿದಾಗ ವಸಂತಾಳನ್ನು ಎರಡನೇ ಮದುವೆಯಾಗಿದ್ದ ಆಸೀಫ್‌ ಎನ್ನುವುದು ಗೊತ್ತಾಗಿ ಪೊಲೀಸರು ಬೆಚ್ಚಿಬಿದ್ದಿದ್ದಾರೆ.

ಕೊಲೆ ಮಾಡಿದ್ದು ಯಾಕೆ?
ವಸಂತಾ ಎರಡನೇ ಮದುವೆಯಾಗಿದ್ದ ಆರೀಫ್‌ನ ಸಹೋದರ ಹೊಸಪೇಟೆ ನಿವಾಸಿ ಆಸೀಫ್‌ (28) ಮೂವರನ್ನು ಕೊಲೆ ಮಾಡಿದ್ದಾನೆ. ಕೊಲೆಯಾಗಿರುವ ವಸಂತಾಳಿಗೆ ಮೊದಲು ಆಂಧ್ರಪ್ರದೇಶದ ನಂದ್ಯಾಲ ಮೂಲದ ವ್ಯಕ್ತಿ ಜೊತೆ ಮದುವೆಯಾಗಿತ್ತು. ದಂಪತಿಗೆ ಪುತ್ರ ಸಾಯಿ ಧರ್ಮತೇಜ್ ಜನಿಸಿದ್ದ. ಆದರೆ ಕೌಟುಂಬಿಕ ಕಲಹದಿಂದ ವಸಂತಾ, ಮೊದಲ ಪತಿಯನ್ನು ಬಿಟ್ಟು ಬಂದು, ಹೊಸಲಿಂಗಾಪುರ ಗ್ರಾಮದಲ್ಲಿ ತಾಯಿ ಮತ್ತು ಮಗನ ಜೊತೆ ಬಾಡಿಗೆ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದಳು.

man kills 3 family members in Koppala arrested 2

ಹೊಸಲಿಂಗಾಪುರ ಗ್ರಾಮದ ಹೊರವಲಯಲ್ಲಿರುವ ಗೊಂಬೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು. ಈ ಸಮಯದಲ್ಲಿ ತನ್ನದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಆರೀಫ್‌ ಜೊತೆ ಪ್ರೇಮ ಬೆಳೆದಿತ್ತು. ಹೀಗಾಗಿ ಆರೀಫ್‌ ಮತ್ತು ವಸಂತಾ 6 ತಿಂಗಳ ಹಿಂದೆ ಮದುವೆಯಾಗಿದ್ದರು. ಮದುವೆಯಾದ ನಂತರ ಆರೀಫ್‌ ಆಗಾಗ ವಸಂತಾ ಇದ್ದ ಬಾಡಿಗೆ ಮನೆಗೆ ಬಂದು ಹೋಗುತ್ತಿದ್ದ.

ಆರೀಫ್‌ಗೆ ಕೂಡಾ ಮೊದಲ ಪತ್ನಿಯಿದ್ದು, ದಂಪತಿಗೆ ಮಕ್ಕಳು ಕೂಡಾ ಇದ್ದರು. ಯಾವಾಗ ಆರೀಫ್‌ ವಸಂತಾಳನ್ನು ಮದುವೆಯಾದನೋ ಆಗ ಆಸೀಫ್‌ ಸಿಟ್ಟಾಗಿದ್ದ. ಯಾಕೆಂದರೆ ಆರೀಫ್‌ ಮದುವೆಯಾಗುವ ಮೊದಲು ಆಸೀಫ್‌ ವಸಂತಾಳನ್ನು ಪ್ರೀತಿಸುತ್ತಿದ್ದ. ಇಬ್ಬರು ಕೂಡಾ ಮದುವೆಯಾಗಲು ನಿರ್ಧರಿಸಿದ್ದರಂತೆ. ಆದರೆ ಬದಲಾದ ಸಮಯದಲ್ಲಿ ವಸಂತಾ, ಆಸೀಫ್‌ ಬಿಟ್ಟು ಆತನ ಸಹೋದರ ಆರೀಫ್‌ನ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು.

ಆರೀಫ್‌ ಮತ್ತು ವಸಂತಾ ಮದುವೆಯಾದ ನಂತರ ಆಸೀಫ್‌ ಸಿಟ್ಟು ಮತ್ತಷ್ಟು ಹೆಚ್ಚಾಗಿತ್ತು. ಇದೇ ಸಿಟ್ಟಿನಲ್ಲಿ ಸೋಮವಾರ ಸಂಜೆ ಐದರಿಂದ ಆರು ಗಂಟೆ ಸಮಯದಲ್ಲಿ ವಸಂತಾಳ ಮನೆಗೆ ಬಂದಿದ್ದ. ಮೊದಲು ರಾಜೇಶ್ವರಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ನಂತರ ಸಾಯಿ ಧರ್ಮತೇಜ್ ನನ್ನು ಕೊಲೆ ಮಾಡಿದ್ದ. ನಂತರ ಕೆಲಸ ಮುಗಿಸಿ ಮನೆಗೆ ಬಂದಿದ್ದ ವಸಂತಾಳನ್ನು ಕೂಡಾ ಕೊಲೆ ಮಾಡಿದ್ದ. ಮೂವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಸದ್ಯ ಮೂವರ ಸಾವಿನ ಬಗ್ಗೆ ತನಿಖೆ ನಡೆಸಿದ ಪೊಲೀಸರು ಕೃತ್ಯ ನಡೆದ 24 ಗಂಟೆಯ ಒಳಗಡೆ ಆರೋಪಿಯನ್ನು ಬಂಧಿಸುವ ಮೂಲಕ ಕಂಬಿ ಹಿಂದೆ ಕಳುಹಿಸಿದ್ದಾರೆ. ಭಗ್ನ ಪ್ರೇಮಿಯ ಹುಚ್ಚಾಟಕ್ಕೆ ಬಾಳಿ ಬದುಕಬೇಕಿದ್ದ ಮೂವರು ಬಾರದ ಲೋಕಕ್ಕೆ ಹೋಗಿದ್ದು ಮಾತ್ರ ದುರಂತವೇ ಸರಿ.

TAGGED:KoppalmarriageMurderಕೊಪ್ಪಳಕೊಲೆಪ್ರೀತಿಮದುವೆ
Share This Article
Facebook Whatsapp Whatsapp Telegram

Cinema news

Vijay Deverakonda Rashmika Mandanna
ಮದ್ವೆ ಬಳಿಕ ಬಳಿಕ ಒಟ್ಟಿಗೆ ಶೂಟಿಂಗ್‌ಗೆ ತೆರಳಿದ ವಿರೋಶ್ ಜೋಡಿಗೆ ಅದ್ಧೂರಿ ಸ್ವಾಗತ
Cinema Latest Sandalwood South cinema Top Stories
Amita Singh Tomar
ಕೌನ್ ಬನೇಗಾ ಕರೋಡ್ ಪತಿಯಲ್ಲಿ 50 ಲಕ್ಷ ಗೆದ್ದಿದ್ದ ತಹಶೀಲ್ದಾರ್ ಅರೆಸ್ಟ್‌!
Cinema Crime Latest National Top Stories TV Shows
Dhurandhar 2 2
ಒಂದೇ ವಾರದಲ್ಲಿ 1000 ಕೋಟಿ ಕ್ಲಬ್ ಸೇರಿದ `ಧುರಂಧರ್ 2′
Bollywood Cinema Latest Top Stories
Rashmika Vijay 5
ಹನಿಮೂನ್ ಅಲ್ಲ ಬಡ್ಡೀಮೂನ್ – ರಶ್ಮಿಕಾ, ವಿಜಯ್ ಹೊಸ ಟ್ರೆಂಡ್
Cinema Latest South cinema Top Stories

You Might Also Like

PM Modi virtual meeting chief ministers and lieutenant governors
Latest

ಕೋವಿಡ್‌ ರೀತಿ ರಾಜ್ಯ, ಕೇಂದ್ರ ಒಗ್ಗಟ್ಟಾಗಿ ಇಂಧನ ಬಿಕ್ಕಟ್ಟನ್ನು ಎದುರಿಸೋಣ: ಮೋದಿ ಕರೆ

Public TV
By Public TV
7 minutes ago
karwar demand for firewood increases due to cylinder shortage forest department grants permission to cut 3 lakh trees
Latest

ಸಿಲಿಂಡರ್ ಅಭಾವದಿಂದ ಕಟ್ಟಿಗೆಗೆ ಹೆಚ್ಚಿದ ಬೇಡಿಕೆ – ಅರಣ್ಯ ಇಲಾಖೆಯಿಂದ 3ಲಕ್ಷ ಮರಗಳ ಕಟಾವಿಗೆ ಅನುಮತಿ

Public TV
By Public TV
9 minutes ago
man killed pet dog in honnali
Crime

ಸಾಕು ನಾಯಿ ಬೊಗಳಿದ್ದಕ್ಕೆ ಕುಡುಗೋಲಲ್ಲಿ ಕೊಚ್ಚಿ ಕೊಂದ ಪಾಪಿ

Public TV
By Public TV
59 minutes ago
Basangouda Patil Yatnal
Kolar

ಐಪಿಎಲ್‌ ಟಿಕೆಟ್‌ ಬೇಕೆನ್ನುವ ಶಾಸಕರಿಗೆ ನಾಚಿಕೆಯಾಗಬೇಕು: ಯತ್ನಾಳ್‌ ಕಿಡಿ

Public TV
By Public TV
1 hour ago
Sadiq Pailwan 1
Bengaluru City

ನಮ್ಮ ಕ್ಷೇತ್ರದಲ್ಲಿ ಸಮರ್ಥ್‌ರನ್ನು ಗೆಲ್ಲಿಸುತ್ತೇವೆ – ಉಪಕದನದಿಂದ ಹಿಂದೆ ಸರಿದ ಪೈಲ್ವಾನ್‌

Public TV
By Public TV
1 hour ago
Four drown in Tungabhadra river near Kandakur in Kosagi mandal of Andhra Pradesh
Crime

ಆಂಧ್ರಪ್ರದೇಶ | ತುಂಗಭದ್ರಾ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ದುರ್ಮರಣ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?