ಪಾಟ್ನಾ: ತನ್ನ ಅಕ್ಕನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನ್ನು ವಿರೋಧಿಸಿದ್ದ ಪತ್ನಿಯನ್ನು ಪತಿಯೇ ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಬಿಹಾರದ ಭೋಜ್‍ಪುರ ಜಿಲ್ಲೆಯಲ್ಲಿ ನಡೆದಿದೆ.
ಚಾರ್ಪೋಖಾರಿ ಮೃತ ಮಹಿಳೆ ಹಾಗೂ ಭೈನಸೂರ್ ಬಂಧಿತ ಆರೋಪಿ. ಭೈನಸೂರ್ ಚಾರ್ಪೋಖಾರಿಯ ಅಕ್ಕನೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದನು. ಈ ವಿಷಯ ಚಾರ್ಪೋಖಾರಿ ತಿಳಿದು, ಅದಕ್ಕೆ ವಿರೋಧ ವ್ಯಕ್ತಪಡಿಸಿದರು. ಇದರಿಂದಾಗಿ ಭೈನಸೂರ್ ಪತ್ನಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾನೆ. ಅದರಂತೆ ಆತನಿಗೆ ಆತನ ತಂದೆ ಹಾಗೂ ಚಿಕ್ಕಪ್ಪ ಸಹಾಯ ಮಾಡಿದ್ದಾರೆ. ರಾತ್ರಿ ಮನೆಯಲ್ಲಿ ಟೆರೇಸಿನಲ್ಲಿದ್ದ ವೇಳೆ ಅವಳನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ.
Advertisement
Advertisement
ನಂತರ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯ ಅಧಿಕಾರಿಗಳು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದರೂ, ಚಾರ್ಪೋಖಾರಿ ಸಾವನಪ್ಪಿದ್ದಳು. ಇದರಿಂದಾಗಿ ಪೊಲೀಸರು ರಾತ್ರಿಯೇ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ ಎಲ್ಲಿಯೂ ರಕ್ತದ ಗುರುತು ಪತ್ತೆ ಆಗಲಿಲ್ಲ.
Advertisement
Advertisement
ಭೋಜ್‍ಪುರ ಜಿಲ್ಲೆಯ ಚಾರ್ಪೋಖಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಕೇವಲ 12 ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿದ್ದಾರೆ. ಘಟನೆಗೆ ಸಂಬಂಧಿಸಿ ಮೃತಳ ಪತಿ ಭೈನ್‍ಸೂರ್, ಮಾವ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಜೊತೆಗೆ ಹತ್ಯೆಗೆ ಬಳಸಿದ್ದ ಪಿಸ್ತೂಲ್‍ನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಮಲಗಿದ್ದ ಕೂಲಿಕಾರ್ಮಿಕರ ಮೇಲೆ ಹರಿದ ಕಾರು – ಮುಂದೇನಾಯ್ತು ನೋಡಿ
ಈ ಬಗ್ಗೆ ಎಸ್‍ಪಿ ವಿನಯ್ ತಿವಾರಿ ಮಾತನಾಡಿ, ಪತಿ, ಮಾವ, ಚಿಕ್ಕಪ್ಪನಿಂದ ಪ್ರಕರಣಕ್ಕೆ ಬಳಸಿದ್ದ ದೇಶಿ ನಿರ್ಮಿತ ಪಿಸ್ತೂಲ್ ಜೊತೆಗೆ ನಾಲ್ಕು ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ವಿಚಾರಣೆ ವೇಳೆ ಪತಿ ಭೈನ್‍ಸೂರ್ ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಈ ಬಗ್ಗೆ ಮೃತಳ ತಾಯಿ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದು, ಸಂಚು ರೂಪಿಸಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಪತಿ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆಗೂ ಮುನ್ನ 29 PDOಗಳ ಟ್ರಾನ್ಸ್‌ಫರ್