ಜೈಪುರ: ರಾಜಸ್ಥಾನದ (Rajasthan) ಅಲ್ವಾರ್‌ನಲ್ಲಿ ನೀಲಿ ಬಣ್ಣದ ಡ್ರಮ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಚಿಕ್ಕಪ್ಪನ ಜೊತೆ ಅಮ್ಮ ಸೇರಿಕೊಂಡು ಅಪ್ಪನ ದೇಹವನ್ನು ಡ್ರಮ್‌ಗೆ ಹಾಕುತ್ತಿದ್ದುದನ್ನು ನಾನು ನೋಡಿದೆ ಎಂದು ಅವರ 8 ವರ್ಷದ ಪುತ್ರ ಸಾಕ್ಷಿ ನುಡಿದಿದ್ದಾನೆ.
ಪ್ರಿಯಕರನೊಂದಿಗೆ ಸೇರಿಕೊಂಡು ಮಹಿಳೆ ತನ್ನ ಗಂಡನನ್ನು ಕೊಂದಿರುವ ಪ್ರಕರಣಕ್ಕೆ ಆಕೆಯ 8 ವರ್ಷದ ಪುತ್ರ ಸಾಕ್ಷಿಯಾಗಿದ್ದಾನೆ. ಡ್ರಮ್‌ನಲ್ಲಿ ನೀರು ಸಂಗ್ರಹಿಸಿ ಇಡುತ್ತಿದ್ದೆವು. ಅದರಲ್ಲಿ ಅಪ್ಪನ ಶವವನ್ನು ಅಮ್ಮ ಹಾಕುತ್ತಿದ್ದುದನ್ನು ನಾನು ನೋಡಿದೆ ಎಂದು ಪೊಲೀಸರಿಗೆ ಬಾಲಕ ತಿಳಿಸಿದ್ದಾನೆ. ಇದನ್ನೂ ಓದಿ: ಕಾಲೇಜು ಅಡ್ಮಿಷನ್ ಮುಗಿಸಿ ಹಿಂತಿರುಗುವಾಗ ಭೀಕರ ಅಪಘಾತ – ಅಣ್ಣ, ತಂಗಿ ದುರ್ಮರಣ
ಹಂಸರಾಜ್ ಕೊಲೆಯಾದ ವ್ಯಕ್ತಿ. ಆತನ ಹಿರಿಯ ಮಗ ಹರ್ಷಲ್, ಕೊಲೆಗೆ ಮೊದಲು ಮತ್ತು ನಂತರ ಕಿಶನ್‌ಗಢದಲ್ಲಿರುವ ತನ್ನ ಮನೆಯಲ್ಲಿ ಏನಾಯಿತು ಎಂಬುದನ್ನು ಬಹಿರಂಗಪಡಿಸಿದ್ದಾನೆ.
ನನ್ನ ತಂದೆ, ತಾಯಿ ಮತ್ತು ಚಿಕ್ಕಪ್ಪ (ಅವರ ಮನೆ ಮಾಲೀಕರ ಮಗ) ಒಟ್ಟಿಗೆ ಕುಡಿಯುತ್ತಿದ್ದರು. ನನ್ನ ತಾಯಿಯ ಬಳಿ ಕೇವಲ ಎರಡು ಪೆಗ್‌ಗಳು ಮಾತ್ರ ಇತ್ತು. ಆದರೆ ನನ್ನ ತಂದೆಯನ್ನು ಕೊಂದ ಚಿಕ್ಕಪ್ಪ ತುಂಬಾ ಕುಡಿದಿದ್ದರು. ಈ ವೇಳೆ ಅಪ್ಪ, ಅಮ್ಮನನ್ನು ಹೊಡೆಯುತ್ತಿದ್ದರು. ನನ್ನ ಚಿಕ್ಕಪ್ಪ ಮಧ್ಯಪ್ರವೇಶಿಸಲು ಮುಂದಾದರು. ಆದರೆ ನನ್ನ ತಂದೆ, ‘ನೀನು ಅವಳನ್ನು ಉಳಿಸಿದರೆ, ನಾನು ನಿನ್ನನ್ನೂ ಕೊಲ್ಲುತ್ತೇನೆ’ ಎಂದು ಕೂಗಾಡಿದರು. ಆಗ ತಂದೆಯ ಮೇಲೆ ಚಿಕ್ಕಪ್ಪ ಹಲ್ಲೆ ಮಾಡಲು ಮುಂದಾದರು ಎಂದು ಬಾಲಕ ಘಟನೆ ಬಗ್ಗೆ ವಿವರಿಸಿದ್ದಾನೆ.
ನಾನು ಎಚ್ಚರವಾದಾಗ, ನನ್ನ ತಂದೆ ಹಾಸಿಗೆಯ ಮೇಲೆ ಇರುವುದನ್ನು ನೋಡಿದೆ. ನಂತರ ನಾನು ಮತ್ತೆ ಮಲಗಿದೆ. ಆದರೆ ಮತ್ತೆ ಎಚ್ಚರವಾದಾಗ, ನಾನು ಚಿಕ್ಕಪ್ಪ ಮತ್ತು ನನ್ನ ತಾಯಿಯನ್ನು ನೋಡಿದೆ. ಮನೆ ಮಾಲೀಕರು ನನ್ನ ತಂದೆಯನ್ನು ಕೇಳಲು ಪ್ರಾರಂಭಿಸಿದರು. ಪೊಲೀಸರಿಗೆ ದೂರು ಕೊಡುವುದಾಗಿ ಬೆದರಿಕೆ ಹಾಕಿದರು. ಆಗ, ಚಿಕ್ಕಪ್ಪ ನಮ್ಮನ್ನು ಇಟ್ಟಿಗೆ ಗೂಡುಗೆ ಕರೆದೊಯ್ದರು ಎಂದು ತಿಳಿಸಿದ್ದಾನೆ. ಇದನ್ನೂ ಓದಿ: ಥಿನ್ನರ್ ಬಾಟಲಿ ಬಿದ್ದು ಬಾಲಕ ಸಾವನ್ನಪ್ಪಿದ ಪ್ರಕರಣ – ಗಂಭೀರ ಸ್ಥಿತಿಯಲ್ಲಿದ್ದ ತಂದೆಯೂ ಸಾವು
ಇಟ್ಟಿಗೆಗೂಡಿನ ಮಾಲೀಕ ಕರೆ ಮಾಡಿ ದೂರು ನೀಡಿದ್ದರು. ವಿಚಾರಣೆ ವೇಳೆ ಬಾಲಕ ನಡೆದಿದ್ದೆಲ್ಲವನ್ನೂ ವಿವರಿಸಿದ್ದಾನೆ. ಡ್ರಮ್‌ನಲ್ಲಿ ತಂದೆಯ ದೇಹವನ್ನು ಯಾಕೆ ಹಾಕುತ್ತಿದ್ದೀರಿ ಎಂದು ಕೇಳಿದಾಗ, ನಿಮ್ಮಪ್ಪ ಸತ್ತಿದ್ದಾನೆಂದು ತಾಯಿ ವಿವರಿಸಿದ್ದಾಳೆ. ಮಹಿಳೆ ಮತ್ತು ಪ್ರಿಯಕರನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.