ನವದೆಹಲಿ: ದೆಹಲಿ (Delhi) ಹಾಗೂ ಹರ್ಯಾಣ ಪೊಲೀಸರು ಜಂಟಿಯಾಗಿ ನಡೆಸಿದ ಎನ್‍ಕೌಂಟರ್‌ನಲ್ಲಿ ರಜೌರಿಯ ಬರ್ಗರ್ ಕಿಂಗ್ ರೆಸ್ಟೋರೆಂಟ್‍ನಲ್ಲಿ (Delhi Burger King) ನಡೆದಿದ್ದ ಕೊಲೆಯಲ್ಲಿ ಭಾಗಿಯಾಗಿದ್ದ ಆರೋಪಿ ಸೇರಿದಂತೆ ಮೂವರು ದರೋಡೆಕೋರರು ಹತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎನ್‍ಕೌಂಟರ್‌ನಲ್ಲಿ ಹತರಾದ ದರೋಡೆಕೋರರನ್ನು ಆಶಿಶ್ ಕಾಲು, ವಿಕ್ಕಿ ರಿಧಾನ್ ಮತ್ತು ಸನ್ನಿ ಗುಜ್ಜರ್ ಎಂದು ಗುರುತಿಸಲಾಗಿದೆ. ಎನ್‍ಕೌಂಟರ್ ನಡೆದ ಸ್ಥಳದಿಂದ ಜಂಟಿ ಪಡೆ ಐದು ಪಿಸ್ತೂಲ್‍ಗಳನ್ನು ವಶಪಡಿಸಿಕೊಂಡಿದೆ. ಈ ದರೋಡೆಕೋರರ ತಂಡ ಉದ್ಯಮಿಗಳಿಂದ ಲಕ್ಷಾಂತರ ರೂ. ಸುಲಿಗೆ ಮಾಡುತ್ತಿತ್ತು ಎಂದು ಪೊಲಿಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ನಾಗೇಂದ್ರ 6 ದಿನ ಇ.ಡಿ ಕಸ್ಟಡಿಗೆ
Advertisement
ಜೂ.18 ರಂದು ಬರ್ಗರ್ ಕಿಂಗ್ ರೆಸ್ಟೋರೆಂಟ್‍ನಲ್ಲಿ ಅಮನ್ ಎಂಬಾತನನ್ನು ಹತ್ಯೆಗೈಯಲಾಗಿತ್ತು. ಈ ವೇಳೆ ಆತನೊಂದಿಗೆ ಕುಳಿತಿದ್ದ ಮಹಿಳೆ ತನ್ನ ಫೋನ್‍ನಲ್ಲಿ ವ್ಯಕ್ತಿಯೊಬ್ಬನಿಗೆ ಚಿತ್ರವನ್ನು ತೋರಿಸಿದ್ದಳು. ಬಳಿಕ ಆತನ ಮೇಲೆ ಮೊದಲು ಗುಂಡು ಹಾರಿಸಲಾಯಿತು. ಬಳಿಕ ಕುಳಿತಿದ್ದ ಇಬ್ಬರು ವ್ಯಕ್ತಿಗಳು ಪಿಸ್ತೂಲುಗಳಿಂದ ಆತನ ಮೇಲೆ ಗುಂಡು ಹಾರಿಸಿದ್ದರು. ಈ ವೇಳೆ ಅಮನ್ ಬಿಲ್ಲಿಂಗ್ ಕೌಂಟರ್ ಕಡೆಗೆ ಓಡಿಹೋಗಿದ್ದ. ಆತನನ್ನು ಹಿಂಬಾಲಿಸಿ ಪಾಯಿಂಟ್-ಬ್ಲಾಂಕ್ ರೇಂಜ್‍ನಿಂದ ಅನೇಕ ಬಾರಿ ಗುಂಡು ಹಾರಿಸಲಾಗಿತ್ತು.
Advertisement
Advertisement
ಶೂಟೌಟ್ ನಡೆಯುವಾಗ ಬರ್ಗರ್ ಕಿಂಗ್ ರೆಸ್ಟೋರೆಂಟ್‍ನಲ್ಲಿದ್ದ ಗ್ರಾಹಕರು ಓಡಿ ಹೋಗಿದ್ದರು. ಆದರೆ ಅಮನ್ ಜೊತೆ ಕುಳಿತಿದ್ದ ಮಹಿಳೆ ಘಟನೆಯಿಂದ ವಿಚಲಿತಳಾಗದೆ ಅಲ್ಲೇ ಇದ್ದಳು. ಬಳಿಕ ಅಲ್ಲಿಂದ ಆಕೆ ಪರಾರಿಯಾಗಿದ್ದಳು. ತನಿಖೆ ವೇಳೆ ಆಕೆ ಹನಿಟ್ರ್ಯಾಪ್ ಮಾಡಿ ಅಮನ್‍ನನ್ನು ಕರಸಿಕೊಂಡಿದ್ದಳು ಎಂದು ತಿಳಿದು ಬಂದಿತ್ತು.
Advertisement
ಈ ಕೊಲೆಯ ಹೊಣೆಯನ್ನು 2022ರಲ್ಲಿ ಪೋರ್ಚುಗಲ್‍ಗೆ ಪಾರಾರಿಯಾಗಿರುವ ದರೋಡೆಕೋರ ಹಿಮಾಂಶು ಭಾವು ಹೊತ್ತುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು. ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ: ಸದನದಲ್ಲಿ ಮುಡಾ, ವಾಲ್ಮೀಕಿ ಹಗರಣ ಅಸ್ತ್ರ ಪ್ರಯೋಗಕ್ಕೆ ಸಜ್ಜು!