ಲಂಡನ್: ಕೊರೊನಾ, ಓಮಿಕ್ರಾನ್ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆ(WHO) ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್(MASK) ಧರಿಸುವುದನ್ನು ಕಡ್ಡಾಯ ಮಾಡಿದೆ. ಮಾಸ್ಕ್ ಧರಿಸದೆ ಇದ್ದವರಿಗೆ ಸರ್ಕಾರ ದಂಡ(FINE)ವನ್ನು ವಿಧಿಸುತ್ತಿದೆ. ಆದರೆ ಬ್ರಿಟನ್‍ನಲ್ಲಿ ಮಾಸ್ಕ್ ಧರಿಸದ ಯುವಕನಿಗೆ ಭಾರಿ ಮೊತ್ತವನ್ನು ದಂಡ ಹಾಕಿರುವುದು ಸಖತ್ ಸುದ್ದಿಯಲ್ಲಿದೆ.
ನಡೆದಿದ್ದೇನು?: ಬ್ರಿಟನ್ ಮೂಲದ ಕ್ರಿಸ್ಟೊಫರ್ ಒಟೂಲ್ ಅಂಗಡಿಯೊಂದರಲ್ಲಿ ಶಾಪಿಂಗ್ ಮಾಡುತ್ತಿದ್ದನು. ಆಗ ಮುಖದಲ್ಲಿ ಏನೋ ಅಹಿತಕರ ಅನ್ನಿಸಿದೆ ಆದ್ದರಿಂದ ಕೆಲ ಸೆಕೆಂಡ್ ಮಾಸ್ಕ್ ಬದಿಗೆ ಸರಿಸಿದ್ದಾನೆ. ಮಾಸ್ಕ್ ತೆಗೆದಿದ್ದಕ್ಕೆ ಬರೋಬ್ಬರಿ 2,000 ಯೂರೋ (2 ಲಕ್ಷ ರೂ) ದಂಡ ವಿಧಿಸಲಾಗಿದೆ. ಈ ಘಟನೆ ನಡೆದಿದ್ದು 2021ರ ಫೆಬ್ರವರಿಯಲ್ಲಿ. ಆ ಸಂದರ್ಭದಲ್ಲಿ ಬ್ರಿಟನ್‍ನಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿತ್ತು.
ನಂತರ ಕ್ರಿಸ್ಟೊಫರ್‍ಗೆ ಎಸಿಆರ್‌ಒ ಕ್ರಿಮಿನಲ್ ರೆಕಾರ್ಡ್ಸ್ ಆಫೀಸ್‍ನಿಂದ ಮಾಸ್ಕ್ ಧರಿಸದ್ದಕ್ಕೆ 100 ಯೂರೋ ದಂಡ ಕಟ್ಟಬೇಕು ಎಂಬ ಸೂಚನೆ ಬಂದಿದೆ. ಫೈನ್ ಕಟ್ಟಲು ಕ್ರಿಸ್ಟೊಫರ್ ನಿರಾಕರಿಸಿದ್ದಾನೆ. ನಾನು ಕೇವಲ 16 ಸೆಕೆಂಡ್ ಮಾಸ್ಕ್ ತೆಗೆದಿದ್ದಷ್ಟೇ. ಅದರಲ್ಲೂ ಮಾಸ್ಕ್ ಧರಿಸಬಾರದು ಎನ್ನುವ ಯಾವ ಉದ್ದೇಶವೂ ನನಗಿರಲಿಲ್ಲ. ದಂಡ ಕಟ್ಟುವುದಿಲ್ಲ ಎಂದು ಹೇಳಿದ್ದಾನೆ. ಕ್ರಿಸ್ಟೊಫರ್ ಹೀಗೆ ಉತ್ತರಿಸಿದ್ದ ನಂತರದಲ್ಲಿ 100 ಯೂರೋ ದಂಡದ ಬದಲು ಬರೋಬ್ಬರಿ 2,000 ಯೂರೋ(ಸುಮಾರು 2 ಲಕ್ಷ ರೂ) ದಂಡ ವಿಧಿಸಿ ಡಿಸೆಂಬರ್‌ನಲ್ಲಿ ಆದೇಶ ಹೊರಡಿಸಲಾಯಿತು.
ಈ ಕುರಿತು ಪ್ರತಿಕ್ರಿಯಿಸಿದ್ದ ಕ್ರಿಸ್ಟೊಫರ್, ನನ್ನ ಬಳಿ ಅಷ್ಟೆಲ್ಲಾ ಹಣವಿಲ್ಲ ಎಂದಿದ್ದರು. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ನ್ಯಾಯಾಲಯದಲ್ಲಿ ಇನ್ನೂ ಈ ಪ್ರಕರಣ ನಡೆಯುತ್ತಿದ್ದು, ತೀರ್ಪು ಇನ್ನಷ್ಟೇ ಬರಬೇಕಿದೆ ಎಂದು ಹೇಳಿದ್ದಾನೆ.